Welcome to Kannada Folks   Click to listen highlighted text! Welcome to Kannada Folks
HomeNewsChitradurga Uncle Love Story - Man Murdered - ಲವ್ ಕಹಾನಿ!

Chitradurga Uncle Love Story – Man Murdered – ಲವ್ ಕಹಾನಿ!

Spread the love

Chitradurga: ಲವ್ ಕಹಾನಿ! ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಬರ್ಬರ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್!

42 ವರ್ಷದ ವ್ಯಕ್ತಿ ಹಾಗೂ 19 ವರ್ಷದ ಯುವತಿಯ ಲವ್-ಮ್ಯಾರೇಸ್ ಸ್ಟೋರಿ ಇದು… ವಯಸ್ಸಿನ ಕಾರಣಕ್ಕೆ ಯುವತಿಯ ಮನೆಯವರು ಕೊಲೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.. ಆದರೆ, ಇದೀಗ ಇವನಿಗೆ ಹಿಂದಿನ ಪ್ರೇಮಕಥೆ… ಮದುವೆ ಕಥೆ… ಜೈಲು ಕಥೆ…. ಹೀಗೆ ಕಥೆಗಳು ಇದೀಗ ಹೊರಬರುತ್ತಿವೆ… ಈ ಲವ್ ಕಹಾನಿ ಸ್ಟೋರಿ ಸಂಪೂರ್ಣ ಓದಿ…Kannada Folks


ಚಿತ್ರದುರ್ಗ: ಪ್ರೀತಿಸಿ ಮದುವೆಯಾದ (Love Marriage) ಕಾರಣಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಸೈಜ್ ಕಲ್ಲು, ದೊಣ್ಣೆ, ಕಬ್ಬಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ (Murder) ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ಇದೀಗ ಈ ಯುವಕನ ಲವ್ ಸ್ಟೋರಿಗೆ ಹಾಗೂ ಕೊಲೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ..

ಹಲ್ಲೆಯಲ್ಲಿ ಗಾಯಗೊಂಡು ಮೃತಪಟ್ಟ ಮಂಜುನಾಥ (43) ಹಾಗೂ ಯುವತಿ ರಕ್ಷಿತಾ 18 ವರ್ಷ ಎಂದು ತಿಳಿದುಬಂದಿದೆ. ಮಂಜುನಾಥ ಮತ್ತು ರಕ್ಷಿತ ಪ್ರೀತಿಸಿ ಮದುವೆ ಅಗಿದ್ದ ಜೋಡಿ. 4 ತಿಂಗಳ ಹಿಂದೆ ದೇವಸ್ಥಾನದಲ್ಲಿ ಈ ಇಬ್ಬರು ಮದುವೆ ಆಗಿದ್ದರು. ಮಂಜುನಾಥ, ರಕ್ಷಿತಾ ಮದುವೆಗೆ ಯುವತಿ ಪೊಷಕರ ವಿರೋಧ ವ್ಯಕ್ತಪಡಿಸಿದ್ದರು.

Man who married girlfriend murdered, audio goes viral - Public TV English

ನಿನ್ನೆ ಮದ್ಯಾಹ್ನ ಊರಿಗೆ ಬಂದಿದ್ದ ಮಂಜುನಾಥನ ಮೇಲೆ ಯುವತಿಯ ತಂದೆ ತಾಯಿ ಹಾಗೂ ಸಂಬಂಧಿಗಳು ಸೇರಿ 30ಕ್ಕೂ ಹೆಚ್ಚು ಜನ ಸೇರಿ ಸೈಜ್ ಕಲ್ಲು, ದೊಣ್ಣೆ, ಕಬ್ಬಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ (Murder) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹತ್ಯೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ರಕ್ಷಿತಾ ತಂದೆ ಜಗದೀಶ್, ಸಂಬಂಧಿಗಳಾದ ಕಲ್ಲೇಶ್, ಈಶ್ವರಪ್ಪ, ನಿಂಗಪ್ಪ, ವಿಶ್ವನಾಥ್, ಹರೀಶ್ ಸೇರಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Bengaluru woman murder: 50 pieces found in fridge

ಈ ಘಟನೆಯಲ್ಲಿ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನುಸೂಯಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೂ ಮುನ್ನ ಅದ್ದೂರಿ ಮದುವೆ ಮಾಡೋದಾಗಿ ಯುವತಿಯ ಪೋಷಕರು ತಮ್ಮ ಮಗಳನ್ನು ಕರೆದೊಯ್ದಿದ್ದರು. ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಮದುವೆ ಬಳಿಕ ಮಂಜುನಾಥ ಗ್ರಾಮಕ್ಕೆ‌ ಮೊದಲ ಬಾರಿಗೆ ಬಂದಿದ್ದನು. ಮಂಜುನಾಥ ಗ್ರಾಮಕ್ಕೆ ಬರುತ್ತಿದ್ದಂತೆ ರಕ್ಷಿತಾ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ ಮೃತಪಟ್ಟಿದ್ದಾನೆ.

ಮಂಜುನಾಥ ಲವ್ ಸ್ಟೋರಿಗೆ ಮೆಗಾ ಟ್ವಿಸ್ಟ್..!!

ಈ ಮಂಜುನಾಥ ಹಿಂದೆ ಶೀಲಾ ಎಂಬ ಯುವತಿ ಪ್ರೀತಿಸಿ ಮದುವೆ ಆಗಿದ್ದನು ಎನ್ನುವುದು ಈಗ ಬೆಳಕಿಗೆ ಬಂದಿದೆ. ಹೌದು 2019ರಲ್ಲಿ ಶೀಲಾ ಎನ್ನುವ ಯುವತಿಯನ್ನು ಮದುವೆಯಾಗಿ ದಾವಣಗೆರೆಗೆ ಕರೆದೊಯ್ದಿದ್ದನು. ಆ ಬಳಿಕ ಶೀಲಾರನ್ನ ಬಿಟ್ಟು ಮಂಜುನಾಥ ಕಾಣೆಯಾಗಿದ್ದನು. ಮಂಜುನಾಥನ ನಡೆಗೆ ಬೇಸತ್ತು ಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಪ್ರಕರಣದಲ್ಲಿ ಮಂಜುನಾಥ A1 ಆರೋಪಿ ಆಗಿದ್ದನು. ದಾವಣಗೆರೆ KTJ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ಕೇಸಲ್ಲಿ ಮಂಜುನಾಥಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. 6 ವರ್ಷ ಜೈಲು, 10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿತ್ತು. ಆ ಬಳಿಕ ಮಂಜುನಾಥ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರ ಬಂದಿದ್ದನು.

ಒಂದೂವರೆ ವರ್ಷದ ನಂತರ ಮಂಜುನಾಥನನ್ನು ರಕ್ಷಿತಾ ಪ್ರೀತಿಸಿದ್ದಳು. ಮಂಜುನಾಥನ ಚಾರಿತ್ಯ ಸರಿ ಇಲ್ಲದ ಕಾರಣಕ್ಕೆ ರಕ್ಷಿತಾ ಪೊಷಕರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಈ ಮಂಜುನಾಥ ರಕ್ಷಿತಾಳನ್ನು ಮದುವೆಯಾಗಿದ್ದನು. ಇದೇ ಕಾರಣಕ್ಕೆ ರಕ್ಷಿತಾಳ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಮೃತ ಮಂಜುನಾಥ್-ರಕ್ಷಿತಾ ಫೋನ್ ಕಾಲ್ ಆಡಿಯೋ ವೈರಲ್..!!

ಮಂಜುನಾಥ ಬೇಡ ಅಂದ್ರೂ ರಕ್ಷಿತಾ ಕಾಲ್‌ ಮಾಡಿ ನೀನೇ ಬೇಕು ಎನ್ನುತ್ತಿದ್ದಳು. ಆದರೆ ಮಂಜುನಾಥ ಮಾತ್ರ ಕೊಟ್ಟ ಕಡೆ ಮದುವೆಯಾಗಿ ಚೆನ್ನಾಗಿ ಇರೋದು ಕಲಿ ಎಂದು ಬುದ್ದಿವಾದ ಹೇಳಿದ್ದಾನೆ. ಇವೆಲ್ಲ ಸುಮ್ನೆ ತೊಂದ್ರೆ, ಅರಾಮಾಗಿ ಖುಷಿಯಾಗಿರೋದು ಕಲಿ ಎಂದು ಎಷ್ಟೇ ಬುದ್ದಿವಾದ ಹೇಳಿದ್ರೂ ನನಗೆ ನೀನೇ ಬೇಕು ಎಂದು ರಕ್ಷಿತಾ ಪಟ್ಟು ಹಿಡಿದಿದ್ದಾಳೆ.

ನನಗೆ ಇಲ್ಲಿರಕ್ಕಾಗ್ತಿಲ್ಲ, ನನ್ನನ್ನು ಕರೆದುಕೊಂಡು ಹೋಗು. ನೀನಿಲ್ಲದೇ ಒಂದು ಕ್ಷಣ ಇರಕ್ಕಾಗಲ್ಲ, ಬಾ ಹೋಗೋಣ ಎಂದು ರಕ್ಷಿತಾ ಗೋಗರೆಯುತ್ತಾಳೆ. ಅದಕ್ಕೆ ಮಂಜುನಾಥ ತನ್ನ ಪ್ಲ್ಯಾಶ್‌ಬ್ಯಾಕ್ ವಿಚಾರ ಪ್ರಸ್ತಾಪಿಸಿ, ನಾನು ಮಾಡಿರೋದೆಲ್ಲ‌ ಗೊತ್ತಿದ್ರೂ ನಾನೇ ಬೇಕು ಅಂತೀಯಲ್ಲಾ ಎನ್ನುತ್ತಾನೆ. ಯುವತಿ ಮಾತ್ರ, ನನಗೆ ಗೊತ್ತಿಲ್ಲ, ನೀನು ಬೇಕು ಅಷ್ಟೇ ಎನ್ನುತ್ತಾಳೆ.

ಎಲ್ಲರಿಗೂ ಉತ್ತರ ಕೊಡಬೇಕಲ್ಲಾ‌ ಎಂಬ ಮಂಜುನಾಥ ಪ್ರಶ್ನೆಗೆ, ನೀನಿಲ್ಲದಿದ್ರೆ ಏನಾದ್ರೂ ಕುಡದು ಸತ್ತೋಗ್ತೀನಿ.. ಜನಾ‌ ಸಾವಿರ ಮಾತಾಡ್ಲಿ‌ ನನಗೆ ನೀನೇ ಬೇಕು ಎಂದು ರಕ್ಷಿತಾ ಹಠ ಮಾಡಿದ್ದಾಳೆ. ನಿನಗೆ ಎಂಥವ್ರು ಬೇಕಾದ್ರೂ ಸಿಗ್ತಾರೆ, ನಾನೇ ಯಾಕೆ‌ ಬೇಕು ಅಂತಾ ಮಂಜುನಾಥ ಪ್ರಶ್ನೆ ಮಾಡಿದ್ದಾನೆ. ನಿನ್ನನ್ನ ಬಿಟ್ಟು ಒಂದು ಕ್ಷಣ ಇರಲ್ಲ . ನೀನಿಲ್ಲಾ ಅಂದ್ರೆ ವಿಷ ಕುಡಿದು ಸತ್ತೋಗ್ಬಿಡ್ತೀನಿ ನಮ್ಮಪ್ಪ‌ ಅಮ್ಮನ್ ಕಷ್ಟ ನೋಡ್ಬೇಕು ಎನ್ನುತ್ತಾಳೆ ಹುಚ್ಚು ಹುಡುಗಿ ರಕ್ಷಿತಾ…

Nurse Raped, Killed On Way Home From Uttarakhand Hospital, Body Found 9 Days Later In UP

ನಿಮ್ಮನೆಯವ್ರು ಸುಮ್ನೆ ಬಿಡ್ತಾರಾ ನಮ್ಮನ್ನ ಅಂತ ಮಂಜುನಾಥ ಕೇಳಿದ್ದಕ್ಕೆ, ಅವ್ರು ಏನ್‌ ಮಾಡ್ತಾರೋ ನೋಡೋಣ ಎನ್ನುತ್ತಾಳೆ. ಆಗ ಮಂಜುನಾಥ, ನನಗೆ ಬೇಡ, ಫೋನ್‌ ಮಾಡ್ಲೇ ಬೇಡ ಎಂದು ಕಾಲ್ ಕಟ್ ಮಾಡುತ್ತಾನೆ.

ಮಂಜುನಾಥ ಮತ್ತು ರಕ್ಷಿತಾ ಬಳಿಕ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ. ಈ ವೈರಲ್ ಆಗಿರುವ ಆಡಿಯೋ ಮದುವೆಗೆ ಮುಂಚಿತವಾಗಿ ಮಾತನಾಡಿದ ಆಡಿಯೋವಾಗಿದೆ.

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!