Chitradurga: ಮಂಜುನಾಥನ ನಡೆಗೆ ಬೇಸತ್ತು ಮೊದಲ ಹೆಂಡತಿ ಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದಲ್ಲಿ ಬಿಗ್ ಟ್ವಿಸ್!
42 ವರ್ಷದ ವ್ಯಕ್ತಿ ಹಾಗೂ 19 ವರ್ಷದ ಯುವತಿಯ ಲವ್-ಮ್ಯಾರೇಸ್ ಸ್ಟೋರಿ ಇದು… ವಯಸ್ಸಿನ ಕಾರಣಕ್ಕೆ ಯುವತಿಯ ಮನೆಯವರು ಕೊಲೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.. ಆದರೆ, ಇದೀಗ ಇವನಿಗೆ ಹಿಂದಿನ ಪ್ರೇಮಕಥೆ… ಮದುವೆ ಕಥೆ… ಜೈಲು ಕಥೆ…. ಹೀಗೆ ಕಥೆಗಳು ಇದೀಗ ಹೊರಬರುತ್ತಿವೆ… ಈ ಲವ್ ಕಹಾನಿ ಸ್ಟೋರಿ ಸಂಪೂರ್ಣ ಓದಿ…Kannada Folks
ಚಿತ್ರದುರ್ಗ: ಪ್ರೀತಿಸಿ ಮದುವೆಯಾದ (Love Marriage) ಕಾರಣಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಸೈಜ್ ಕಲ್ಲು, ದೊಣ್ಣೆ, ಕಬ್ಬಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ (Murder) ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ಇದೀಗ ಈ ಯುವಕನ ಲವ್ ಸ್ಟೋರಿಗೆ ಹಾಗೂ ಕೊಲೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ..
ಹಲ್ಲೆಯಲ್ಲಿ ಗಾಯಗೊಂಡು ಮೃತಪಟ್ಟ ಮಂಜುನಾಥ (43) ಹಾಗೂ ಯುವತಿ ರಕ್ಷಿತಾ 18 ವರ್ಷ ಎಂದು ತಿಳಿದುಬಂದಿದೆ. ಮಂಜುನಾಥ ಮತ್ತು ರಕ್ಷಿತ ಪ್ರೀತಿಸಿ ಮದುವೆ ಅಗಿದ್ದ ಜೋಡಿ. 4 ತಿಂಗಳ ಹಿಂದೆ ದೇವಸ್ಥಾನದಲ್ಲಿ ಈ ಇಬ್ಬರು ಮದುವೆ ಆಗಿದ್ದರು. ಮಂಜುನಾಥ, ರಕ್ಷಿತಾ ಮದುವೆಗೆ ಯುವತಿ ಪೊಷಕರ ವಿರೋಧ ವ್ಯಕ್ತಪಡಿಸಿದ್ದರು.
ನಿನ್ನೆ ಮದ್ಯಾಹ್ನ ಊರಿಗೆ ಬಂದಿದ್ದ ಮಂಜುನಾಥನ ಮೇಲೆ ಯುವತಿಯ ತಂದೆ ತಾಯಿ ಹಾಗೂ ಸಂಬಂಧಿಗಳು ಸೇರಿ 30ಕ್ಕೂ ಹೆಚ್ಚು ಜನ ಸೇರಿ ಸೈಜ್ ಕಲ್ಲು, ದೊಣ್ಣೆ, ಕಬ್ಬಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ (Murder) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹತ್ಯೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ರಕ್ಷಿತಾ ತಂದೆ ಜಗದೀಶ್, ಸಂಬಂಧಿಗಳಾದ ಕಲ್ಲೇಶ್, ಈಶ್ವರಪ್ಪ, ನಿಂಗಪ್ಪ, ವಿಶ್ವನಾಥ್, ಹರೀಶ್ ಸೇರಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Bengaluru woman murder: 50 pieces found in fridge
ಈ ಘಟನೆಯಲ್ಲಿ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನುಸೂಯಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೂ ಮುನ್ನ ಅದ್ದೂರಿ ಮದುವೆ ಮಾಡೋದಾಗಿ ಯುವತಿಯ ಪೋಷಕರು ತಮ್ಮ ಮಗಳನ್ನು ಕರೆದೊಯ್ದಿದ್ದರು. ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಮದುವೆ ಬಳಿಕ ಮಂಜುನಾಥ ಗ್ರಾಮಕ್ಕೆ ಮೊದಲ ಬಾರಿಗೆ ಬಂದಿದ್ದನು. ಮಂಜುನಾಥ ಗ್ರಾಮಕ್ಕೆ ಬರುತ್ತಿದ್ದಂತೆ ರಕ್ಷಿತಾ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ ಮೃತಪಟ್ಟಿದ್ದಾನೆ.
ಮಂಜುನಾಥ ಲವ್ ಸ್ಟೋರಿಗೆ ಮೆಗಾ ಟ್ವಿಸ್ಟ್..!!
ಈ ಮಂಜುನಾಥ ಹಿಂದೆ ಶೀಲಾ ಎಂಬ ಯುವತಿ ಪ್ರೀತಿಸಿ ಮದುವೆ ಆಗಿದ್ದನು ಎನ್ನುವುದು ಈಗ ಬೆಳಕಿಗೆ ಬಂದಿದೆ. ಹೌದು 2019ರಲ್ಲಿ ಶೀಲಾ ಎನ್ನುವ ಯುವತಿಯನ್ನು ಮದುವೆಯಾಗಿ ದಾವಣಗೆರೆಗೆ ಕರೆದೊಯ್ದಿದ್ದನು. ಆ ಬಳಿಕ ಶೀಲಾರನ್ನ ಬಿಟ್ಟು ಮಂಜುನಾಥ ಕಾಣೆಯಾಗಿದ್ದನು. ಮಂಜುನಾಥನ ನಡೆಗೆ ಬೇಸತ್ತು ಶೀಲಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಪ್ರಕರಣದಲ್ಲಿ ಮಂಜುನಾಥ A1 ಆರೋಪಿ ಆಗಿದ್ದನು. ದಾವಣಗೆರೆ KTJ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ಕೇಸಲ್ಲಿ ಮಂಜುನಾಥಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. 6 ವರ್ಷ ಜೈಲು, 10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿತ್ತು. ಆ ಬಳಿಕ ಮಂಜುನಾಥ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರ ಬಂದಿದ್ದನು.
ಒಂದೂವರೆ ವರ್ಷದ ನಂತರ ಮಂಜುನಾಥನನ್ನು ರಕ್ಷಿತಾ ಪ್ರೀತಿಸಿದ್ದಳು. ಮಂಜುನಾಥನ ಚಾರಿತ್ಯ ಸರಿ ಇಲ್ಲದ ಕಾರಣಕ್ಕೆ ರಕ್ಷಿತಾ ಪೊಷಕರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಈ ಮಂಜುನಾಥ ರಕ್ಷಿತಾಳನ್ನು ಮದುವೆಯಾಗಿದ್ದನು. ಇದೇ ಕಾರಣಕ್ಕೆ ರಕ್ಷಿತಾಳ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ.