Chitradurga: ಲವ್ ಕಹಾನಿ! ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಬರ್ಬರ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್!
42 ವರ್ಷದ ವ್ಯಕ್ತಿ ಹಾಗೂ 19 ವರ್ಷದ ಯುವತಿಯ ಲವ್-ಮ್ಯಾರೇಸ್ ಸ್ಟೋರಿ ಇದು… ವಯಸ್ಸಿನ ಕಾರಣಕ್ಕೆ ಯುವತಿಯ ಮನೆಯವರು ಕೊಲೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.. ಆದರೆ, ಇದೀಗ ಇವನಿಗೆ ಹಿಂದಿನ ಪ್ರೇಮಕಥೆ… ಮದುವೆ ಕಥೆ… ಜೈಲು ಕಥೆ…. ಹೀಗೆ ಕಥೆಗಳು ಇದೀಗ ಹೊರಬರುತ್ತಿವೆ… ಈ ಲವ್ ಕಹಾನಿ ಸ್ಟೋರಿ ಸಂಪೂರ್ಣ ಓದಿ…Kannada Folks
Chitradurga – Manjunath and Rakshitha Audio Viral
ಚಿತ್ರದುರ್ಗ: ಪ್ರೀತಿಸಿ ಮದುವೆಯಾದ (Love Marriage) ಕಾರಣಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಸೈಜ್ ಕಲ್ಲು, ದೊಣ್ಣೆ, ಕಬ್ಬಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ (Murder) ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ಇದೀಗ ಈ ಯುವಕನ ಲವ್ ಸ್ಟೋರಿಗೆ ಹಾಗೂ ಕೊಲೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ..
ಮೃತ ಮಂಜುನಾಥ್-ರಕ್ಷಿತಾ ಫೋನ್ ಕಾಲ್ ಆಡಿಯೋ ವೈರಲ್..!!
ಮಂಜುನಾಥ ಬೇಡ ಅಂದ್ರೂ ರಕ್ಷಿತಾ ಕಾಲ್ ಮಾಡಿ ನೀನೇ ಬೇಕು ಎನ್ನುತ್ತಿದ್ದಳು. ಆದರೆ ಮಂಜುನಾಥ ಮಾತ್ರ ಕೊಟ್ಟ ಕಡೆ ಮದುವೆಯಾಗಿ ಚೆನ್ನಾಗಿ ಇರೋದು ಕಲಿ ಎಂದು ಬುದ್ದಿವಾದ ಹೇಳಿದ್ದಾನೆ. ಇವೆಲ್ಲ ಸುಮ್ನೆ ತೊಂದ್ರೆ, ಅರಾಮಾಗಿ ಖುಷಿಯಾಗಿರೋದು ಕಲಿ ಎಂದು ಎಷ್ಟೇ ಬುದ್ದಿವಾದ ಹೇಳಿದ್ರೂ ನನಗೆ ನೀನೇ ಬೇಕು ಎಂದು ರಕ್ಷಿತಾ ಪಟ್ಟು ಹಿಡಿದಿದ್ದಾಳೆ.
ನನಗೆ ಇಲ್ಲಿರಕ್ಕಾಗ್ತಿಲ್ಲ, ನನ್ನನ್ನು ಕರೆದುಕೊಂಡು ಹೋಗು. ನೀನಿಲ್ಲದೇ ಒಂದು ಕ್ಷಣ ಇರಕ್ಕಾಗಲ್ಲ, ಬಾ ಹೋಗೋಣ ಎಂದು ರಕ್ಷಿತಾ ಗೋಗರೆಯುತ್ತಾಳೆ. ಅದಕ್ಕೆ ಮಂಜುನಾಥ ತನ್ನ ಪ್ಲ್ಯಾಶ್‌ಬ್ಯಾಕ್ ವಿಚಾರ ಪ್ರಸ್ತಾಪಿಸಿ, ನಾನು ಮಾಡಿರೋದೆಲ್ಲ ಗೊತ್ತಿದ್ರೂ ನಾನೇ ಬೇಕು ಅಂತೀಯಲ್ಲಾ ಎನ್ನುತ್ತಾನೆ. ಯುವತಿ ಮಾತ್ರ, ನನಗೆ ಗೊತ್ತಿಲ್ಲ, ನೀನು ಬೇಕು ಅಷ್ಟೇ ಎನ್ನುತ್ತಾಳೆ.
ಎಲ್ಲರಿಗೂ ಉತ್ತರ ಕೊಡಬೇಕಲ್ಲಾ ಎಂಬ ಮಂಜುನಾಥ ಪ್ರಶ್ನೆಗೆ, ನೀನಿಲ್ಲದಿದ್ರೆ ಏನಾದ್ರೂ ಕುಡದು ಸತ್ತೋಗ್ತೀನಿ.. ಜನಾ ಸಾವಿರ ಮಾತಾಡ್ಲಿ ನನಗೆ ನೀನೇ ಬೇಕು ಎಂದು ರಕ್ಷಿತಾ ಹಠ ಮಾಡಿದ್ದಾಳೆ. ನಿನಗೆ ಎಂಥವ್ರು ಬೇಕಾದ್ರೂ ಸಿಗ್ತಾರೆ, ನಾನೇ ಯಾಕೆ ಬೇಕು ಅಂತಾ ಮಂಜುನಾಥ ಪ್ರಶ್ನೆ ಮಾಡಿದ್ದಾನೆ. ನಿನ್ನನ್ನ ಬಿಟ್ಟು ಒಂದು ಕ್ಷಣ ಇರಲ್ಲ . ನೀನಿಲ್ಲಾ ಅಂದ್ರೆ ವಿಷ ಕುಡಿದು ಸತ್ತೋಗ್ಬಿಡ್ತೀನಿ ನಮ್ಮಪ್ಪ ಅಮ್ಮನ್ ಕಷ್ಟ ನೋಡ್ಬೇಕು ಎನ್ನುತ್ತಾಳೆ ಹುಚ್ಚು ಹುಡುಗಿ ರಕ್ಷಿತಾ…
Nurse Raped, Killed On Way Home From Uttarakhand Hospital, Body Found 9 Days Later In UP
ನಿಮ್ಮನೆಯವ್ರು ಸುಮ್ನೆ ಬಿಡ್ತಾರಾ ನಮ್ಮನ್ನ ಅಂತ ಮಂಜುನಾಥ ಕೇಳಿದ್ದಕ್ಕೆ, ಅವ್ರು ಏನ್ ಮಾಡ್ತಾರೋ ನೋಡೋಣ ಎನ್ನುತ್ತಾಳೆ. ಆಗ ಮಂಜುನಾಥ, ನನಗೆ ಬೇಡ, ಫೋನ್ ಮಾಡ್ಲೇ ಬೇಡ ಎಂದು ಕಾಲ್ ಕಟ್ ಮಾಡುತ್ತಾನೆ.
ಮಂಜುನಾಥ ಮತ್ತು ರಕ್ಷಿತಾ ಬಳಿಕ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ. ಈ ವೈರಲ್ ಆಗಿರುವ ಆಡಿಯೋ ಮದುವೆಗೆ ಮುಂಚಿತವಾಗಿ ಮಾತನಾಡಿದ ಆಡಿಯೋವಾಗಿದೆ.