ರಾಮ ರಾಮ (Sad) – ಚಿಕ್ಕೆಜಮಾನ್ರು
ರಾಮ ರಾಮ (Sad)
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ![Raama Raama Raama HQ [CHIKKEJAMANRU] - Song Lyrics and Music by 🇴 🇷 🇮 🇬 🇮 🇳 🇦️ 🇱 arranged by 000_Abhis541 on Smule Social Singing app](https://c-fa.cdn.smule.com/rs-s90/arr/07/a2/04d28772-1d07-460b-a014-94115b1c0545.jpg)
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ  ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ  ನಾನು ಬಂಧಿ
ಮೊದಲಿರುಳ ದೀಪ ಆರಿಲ್ಲಾ ಕಾರ್ಮೋಡ ಕವಿಯಿತು
ಕನಸೇ ಕಣ್ಣಿಂದ ಕರಗೋಯ್ತೋ …
ಅರಿಶಿನದ ಸೀರೆ ಮಾಸಿಲ್ಲ ವಿಧಿ ಮೊರೆ ಹಾಕಿತು
ಬದುಕೇ ಧೂಳಿಂದ ರಣವಾಯಿತು
ಮರುಗುತಿದೆ ಮಲ್ಲಿಗೆ ಲತೆಯೊಳಗೆ
ಬಾಡುತಿದೆ ಮನಸಿನ ಜೊತೆಯೊಳಗೆ..
ನೆನಯುತಿದೆ ನೆನಪಿನ ಸರಮಾಲೆ
ಎನಿಸುತಿದೆ ದಿನಗಳ ಕೈ ಮೇಲೆ
ಜೊತೆಗಾತಿಯೇ ನೀನು ಇರದಿರೇ ನಾನು ಒಣ ಮರವೇ…
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ  ನಾನು ಬಂಧಿ
ನನ್ನ ಪ್ರಾಣ ಪಕ್ಷಿ ಪಂಜರಕೆ ಯಜಮಾನ ನೀನಯ್ಯಾ
ನಿನಗೆ ನನ್ನಿಂದ ಸುಖವಿಲ್ಲ
ನನ್ನ ಪ್ರೇಮ ಪಕ್ಷಿ ನೀ ಹಾಡೋ ಇಂಚರವೇ ಆಸರೆ
ನನಗೆ ನೀನಿರದೆ ಬದುಕಿಲ್ಲಾ
ಮುಡುಪುಗಳು ವರವನು ತರಲಿಲ್ಲ,  ಪೂಜೆಗಳು ಫಲವನು ಕೊಡಲಿಲ್ಲ
ಶಕುನಗಳು ಸಮಯಕೆ ಬರಲಿಲ್ಲಾ.. ಹರಕೆಗಳು ಬದುಕಲು ಬಿಡಲಿಲ್ಲ
ಸಂಗಾತಿಯೇ ನೀನು ಇರದಿರೇ ನಾನು ಒಣ ಮರವೇ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ತ್ಯಾಗದಲ್ಲಿ ನೀನು ಬಂಧಿ, ಓಓಓ ನೋವಿನಲ್ಲಿ  ನಾನು ಬಂಧಿ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ, ಓಓಓ ಹಾಡಿನಲ್ಲಿ ನಾನು ಬಂಧಿ
ಚಿಂತೆಯಲ್ಲಿ ನಾನು ಬಂಧಿ ಓಓಓ… ನೋವಿನಲ್ಲಿ ನೀನು ಬಂಧಿ…
 
                                     Support Us
Support Us