ಚಿಕನ್ ಕೈಮಾ ಬೋಂಡಾ- Chicken Keema Bonda Recipe in kannada
ಬೇಕಾಗುವ ಪದಾರ್ಥಗಳು…
- ಚಿಕನ್ ಕೈಮಾ- 1/4 ಕೆ.ಜಿ
- ಈರುಳ್ಳಿ -1
- ಕಡಲೆ ಹಿಟ್ಟು-4 ಚಮಚ
- ಮೈದಾ ಹಿಟ್ಟು-1 ಚಮಚ
- ಕಾರ್ನ್ ಫ್ಲೋರ್- 1 ಚಮಚ
- ಹಸಿಮೆಣಸಿನಕಾಯಿ- 2
- ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ
- ಅಚ್ಚ ಖಾರದಪುಡಿ-2 ಚಮಚ
- ಗರಂ ಮಸಾಲೆ ಪುಡಿ- ಸ್ವಲ್ಪ
- ಕಾಳು ಮೆಣಸಿನ ಪುಡಿ- ಸ್ವಲ್ಪ
- ಕರಿಬೇವು- ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಕರಿಯಲು
ಮಾಡುವ ವಿಧಾನ…
- ಚಿಕನ್ ಕೈಮಾವನ್ನು ಮಿಕ್ಸಿಯಲ್ಲಿ ಒಂದೆರೆಡು ಸುತ್ತು ರುಬ್ಬಕೊಳ್ಳಿ.
- ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ, ಕಡಲೆಹಿಟ್ಟು, ಮೈದಾಹಿಟ್ಟು, ಕಾರ್ನ್‌ಫ್ಲೋರ್, ಕಾರದಪುಡಿ, ಗರಂಮಸಾಲಾ, ಮೆಣಸಿನಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ನೀರು ಹಾಕದೆ ಚೆನ್ನಾಗಿ ಕಲಸಿ.
- ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ. ಇದೀಗ ರುಚಿಕರವಾದ ಕೈಮಾ ಬೋಂಡಾ ಸವಿಯಲು ಸಿದ್ಧ.
ಬೀಟ್‌ರೂಟ್ ಕಬಾಬ್- Beetroot Kebab Recipe in Kannada
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ