Bheeshma The Great – 1
ಭೀಷ್ಮ ಪಿತಾಮಹ – ಮಹಾಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಯೆಂದೆನಿಸಿಕೊಳ್ಳುತ್ತಾನೆ.
ಪಿತಾಮಹನ ಪರಮ ಅಂಶ – ಭೀಷ್ಮ ಏಕೆ ಭೂಮಿಯ ಮೇಲೆ ಜನಿಸಿದರು ?
ಒಮ್ಮೆ ಎಂಟು ಜನ ವಸುಗಳು (ಅಷ್ಟ ವಸುಗಳು) ತಂತಮ್ಮ ಪತ್ನಿಯರೊಡಗೂಡಿ ಮಹರ್ಷಿ ವಸಿಷ್ಠರ ಆಶ್ರಮಕ್ಕೆ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೊಬ್ಬ ವಸು ‘ಪ್ರಭಾಸ’ನ ಪತ್ನಿಗೆ ವಸಿಷ್ಠರ ಆಶ್ರಮದಲ್ಲಿದ್ದ ಕಾಮಧೇನು ಬಹಳ ಇಷ್ಟವಾಗುತ್ತದೆ.
ಬೇಡಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಕೊಡಬಲ್ಲ ಈ ಗೋವು ತನಗೆ ಬೇಕು ಎಂಬ ದುರಾಸೆ ಅವಳಲ್ಲಿ ಉಂಟಾಗುತ್ತದೆ. ಕೂಡಲೇ ತ್ವರೆ ಮಾಡಿ ಆಕೆ ತನ್ನ ಮನದಿಂಗಿತವನ್ನು ಪತಿಯ ಬಳಿ ಹೇಳುತ್ತಾಳೆ. ಪತ್ನಿಯ ಮೇಲಿನ ಅತೀವ ಪ್ರೀತಿಯಿಂದ ಪ್ರಭಾಸನು ಮಹರ್ಷಿಗಳ ಆಶ್ರಮದಿಂದ ಕಾಮಧೇನುವನ್ನು ಕದ್ದುಕೊಂಡು ಹೋಗಲು ತೀರ್ಮಾನಿಸುತ್ತಾನೆ.
Hampi Stories -1 ಹಂಪಿ ಕಥೆಗಳು – ಅಧ್ಯಾಯ 2- ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ ನಗರವಾಗಿತ್ತು
ಈತನ ಈ ತೀರ್ಮಾನಕ್ಕೆ ಇನ್ನಿತರ ವಸುಗಳು ಕೂಡ ತಲೆಬಾಗಿ ಸಹಾಯ ಮಾಡುತ್ತಾರೆ. ಈ ಹಗರಣದ ಸಂಪೂರ್ಣ ವಿವರವರಿತ ಮಹರ್ಷಿಗಳು ವ್ಯಘ್ರರಾಗಿ ಆ ಎಲ್ಲ ಅಷ್ಟ ವಸುಗಳು ಕೇವಲ ಮಾನವರಾಗಿ ಭೂಮಂಡಲದಲ್ಲಿ ಜನಿಸಲೆಂದು ಶಪಿಸಿಬಿಡುತ್ತಾರೆ.
ಕೂಡಲೇ ಎಚ್ಚೆತ್ತ ವಸುಗಳು ಮಹರ್ಷಿಗಳ ಬಳಿಸಾರಿ ಕ್ಷಮೆ ಯಾಚಿಸುತ್ತಾರೆ ಹಾಗು ತಮ್ಮ ಶಾಪವನ್ನು ಹಿಂಪಡೆಯುವಂತೆ ದೈನ್ಯವಾಗಿ ಬೇಡಿಕೊಳ್ಳುತ್ತಾರೆ. ಪ್ರಭಾಸನನ್ನು ಹೊರತು ಪಡಿಸಿ ಇನ್ನುಳಿದ ಏಳು ವಸುಗಳ ಬೇಡಿಕೆಯನ್ನು ಮನ್ನಿಸಿದ ಮಹರ್ಷಿಗಳು ಪೂರ್ಣ ಶಾಪವನ್ನು ಹಿಂಪಡೆಯುವುದಿಲ್ಲವಾದರೂ ಶಾಪದಲ್ಲಿ ವಿನಾಯಿತಿಯಾಗಿ ಅವರು ಮಾನವ ಜನ್ಮ ತಾಳಿದ ಕೂಡಲೇ ಮರಣವನ್ನಪ್ಪಿ ಮುಕ್ತಿ ಹೊಂದುವರೆಂದೂ ಸೂಚಿಸುತ್ತಾರೆ.
ಆದರೆ ಹಗರಣದಲ್ಲಿ ಪ್ರಮುಖನಾಗಿದ್ದ ಕಾರಣ ಪ್ರಭಾಸನ ಶಾಪವನ್ನು ಹಿಂಪಡೆಯಲು ಮಹರ್ಷಿಗಳು ನಿರಾಕರಿಸುತ್ತಾರೆ. ಆದರೂ ಪ್ರಭಾಸನ ಅನೇಕ ಕೋರಿಕೆಗಳ ನಂತರ ಮೃದು ಧೋರಣೆ ತಳೆದ ಮಹರ್ಷಿಗಳು ಆತನು ಮನುಷ್ಯನಾಗಿ ಸುಧೀರ್ಘ ಜೀವನವನ್ನು ನಡೆಸಬೇಕು ಹಾಗು ಅವನ ಸಮಕಾಲೀನ ಕಾಲ ಘಟ್ಟದಲ್ಲಿ ಆತನನ್ನು ಸರಿಗಟ್ಟುವ ಮನುಷ್ಯರೇ ಇಲ್ಲದಂತಾಗಿ, ಹೆಸರಾಂತ ವ್ಯಕ್ತಿಯಾಗಿ ಬದುಕುವಂತೆ ಅನುಗ್ರಹಿಸುತ್ತಾರೆ.
ಕನ್ನಡದ ಕಟ್ಟಾಳುಗಳು/Karnataka Kings – ನನ್ನೂರ ರಾಜರು ಭಾಗ 1
ಇದೆ ಪ್ರಭಾಸ ಶಾಪ ನಿಮಿತ್ತ ಗಂಗೆ ಹಾಗು ಶಂತನುವಿನ ಎಂಟನೇ ಮಗ ದೇವವ್ರತನಾಗಿ ಜನಿಸುತ್ತಾನೆ ಹಾಗು ಮುಂದೆ ಭೀಷ್ಮ/ಭೀಷ್ಮಾಚಾರ್ಯ ಎಂದೇ ಪ್ರಸಿದ್ಧಿ ಪಡೆಯುತ್ತಾನೆ.
ಮುಂದುವರಿಯುವುದು……………………….