HomeNewsHealth and FoodBeetroot Kebab Recipe in Kannada - Home made

Beetroot Kebab Recipe in Kannada – Home made

Spread the love

ಬೀಟ್‌ರೂಟ್‌ ಕಬಾಬ್- Beetroot Kebab Recipe in Kannada

 

ಬೇಕಾಗುವ ಪದಾರ್ಥಗಳು…

  • ಬೀಟ್‌ರೂಟ್- 2
  • ರವೆ- 3 ಚಮಚ
  • ಈರುಳ್ಳಿ- 1 ದೊಡ್ಡ ಗಾತ್ರದ್ದು
  • ಶೆಜ್ವಾನ್ ಸಾಸ್- 2 ಚಮಚ
  • ಆಲೂಗಡ್ಡೆ- 2
  • ಮೈದಾ ಹಿಟ್ಟು- 1 ಬಟ್ಟಲು
  • ಅಕ್ಕಿ ಹಿಟ್ಟು- 4 ಚಮಚ
  • ಕಡಲೆಹಿಟ್ಟು- 4 ಚಮಚ
  • ಕಾರ್ನ್ ಫ್ಲೋರ್- 4 ಚಮಚ
  • ಕೊತ್ತೊಂಬರಿ ಸೊಪ್ಪು- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಜೀರಿಗೆ- ಒಂದು ಚಮಚ ಜೀರಿಗೆ
  • ಎಣ್ಣೆ – ಕರಿಯಲು
  • ಬೆಣ್ಣೆ- 1 ಚಮಚ

ಮಾಡುವ ವಿಧಾನ

  • ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು, ಪೇಸ್ಟ್ ರೀತಿ ಮಾಡಿ. ಇದಕ್ಕೆ ತುರಿದ ಬೀಟ್‌ರೂಟ್‌ ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. 15-20 ನಿಮಿಷ ಬಿಡಿ
  • ನಂತರ ಅದಕ್ಕೆ ರವಾ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಕಾರ್ನ್ ಫ್ಲೋರ್ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಣ್ಣೆ, ಕೊತ್ತೊಂಬರಿ ಸೊಪ್ಪು, ಜೀರಿಗೆ ಹಾಗೂ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ನಂತರ ಚಿಕ್ಕಚಿಕ್ಕ ಉಂಡೆ ಮಾಡಿ (ಕಬಾಬ್‌ ರೀತಿಯಲ್ಲಿ) ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಇದೀಗ ರುಚಿಕರವಾದ ಬೀಟ್‌ರೂಟ್‌ ಕಬಾಬ್ ಸವಿಯಲು ಸಿದ್ಧ.

ಚಿಕನ್ ಕೈಮಾ ಬೋಂಡಾ- Chicken Keema Bonda Recipe in kannada

Beetroot Kebab Recipe

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×