ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ಚಿತ್ರ: ಅಭಯ್
ನಟರು: ದರ್ಶನ್, ಆರತಿ
ಗಾಯನ: ಸುನೀತಾ ಗೋಪರಾಜು
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ
ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಒಂದು ಚೂರೆ ಕಾಯಿಸು, ಬಂದು ಚೆಂದಗಾಣಿಸು
ಮಿತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸೊಂದೆ ಆದಮೇಲೆ ಮರೆಯಾಗಿ ದೂರ….ಇರಲಾರೆ ಇರಲಾರೆ
ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರು ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೇ
ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ…..ಬರಲೇನು ಬರಲೇನು
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ…..
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ