ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ

ಚಿತ್ರ: ಅಶ್ವಮೇಧ
ಹಾಡಿದವರು: ರಾಜ್ ಕುಮಾರ್
ನಟರು: ಕುಮಾರ್ ಬಂಗಾರಪ್ಪ
ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ
ರೋಶಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಜೇಂಕಾರಕೆ ಪ್ರಾಣ
ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು ನಡೆಸುವೆ
ಅಶ್ವಮೇಧ ಅಶ್ವಮೇಧ ಅಶ್ವಮೇಧ ಅಶ್ವಮೇಧ
ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿ ಶ್ರುಂಗವೇ ನಿನ್ನ ಅಂಗವೋ
ದಿಕ್ಪಾಲಕರೆ ನಿನ್ನ ಕಾಲ್ಗಳು
ಮಿಂಚು ಸಿಡಿಲು ನಿನ್ನ ವೇಗವು
ಜೀವ ಜೀವದಲಿ ಬೆರೆತು ಹೋದ
ಭಾವ ಭಾವದಲಿ ಕರಗಿ ಹೋದ
ಜೀವಾಶ್ವವೆ ದೂರಾದೆಯ
ಪ್ರಾಣಾಶ್ವವೆ ಮರೆಯಾದೆಯ
ದಿಟ್ಟ ಹೆಜ್ಜೆ ಇಟ್ಟು……
ವಿಷ ವ್ಯೂಹವ ಕುಟ್ಟಿ ಕೆಡವಲು
ವೀರ ಪೌರುಷ ಎತ್ತಿ ಹಿಡಿದು
ತಕಿಟ ಧಿಂ ದಿರನ ತಕಿಟ ಧಿಂ ಧಿರನ
ದಿರನ ದಿರನ ದಿರನ ತಕಿಟ ಧಿಂ ತನ
ತಕಿಟ ಧಿಂ ತಕಿಟ ಧಿಂ ಧಿಂ ತನ್
ಚದ್ಮ ವೇಷವ ಹೊರ ಎಳೆಯಲು
ಕ್ಷಾತ್ರ ತೇಜದ ಕತ್ತಿ ಇರಿದು
ಗೂಡ ರಾಕ್ಷಸರ ಕೊಚ್ಚಿ ನಡೆವೆ
ನೀತಿ ನೇಮಗಳ ಬಿತ್ತಿ ಬೆಳೆವೆ
ಆಕಾಶವೇ ಮೇಲ್ಬೀಳಲಿ
ಭೂತಾಯಿಯೇ ಬಾಯ್ಬಿರಿಯಲಿ
ದಿಟ್ಟ ಹೆಜ್ಜೆ……..
Read more here
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ