Welcome to Kannada Folks   Click to listen highlighted text! Welcome to Kannada Folks
HomeNewsCultureanyaya kari brahma - ಅನ್ಯಾಯ ಕಾರಿ ಬ್ರಹ್ಮ ಸುಂದರನ - Full song Lyrics...

anyaya kari brahma – ಅನ್ಯಾಯ ಕಾರಿ ಬ್ರಹ್ಮ ಸುಂದರನ – Full song Lyrics – Arjuna Jogi

Spread the love

ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ
ಅನ್ಯಾಯ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಡಬೊಹುದೇ ll

ಬೀದಿಯೊಳಗೆ ಮಾರಾಯ ಬಾರಿ ಸೊಬಗನು ತೋರುತ್ತಾ
ಮಾರಾಯ ಬಾರಿ ಸೊಬಗನು ತೋರುತ್ತಾ ll
ವೇಶ್ಯಯರ ಬೀದಿಯೊಳಗೆ ಜೋಗಯ್ಯ ಅಂದ ಚಂದದಿ ಬಂದನೋ
ಜೋಗಯ್ಯ ಅಂದ ಚಂದದಿ ಬಂದನೋ ll

ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ವನವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll

ಇಂದ್ರನ ಚಂದ್ರನಿನ್ವನು ಜೋಗಯ್ಯ ಚಂದಾ ಮುಕುಂದನಿವನು
ಜೋಗಯ್ಯ ಚಂದಾ ಮುಕುಂದನಿವನು ll
ಇಂಥ ಚಂದುಳ್ಳ ಅಂದುಳ್ಳ ಮರಿ ಜೋಗಿ ನಾವೆಲ್ಲೂ ನೋಡಲಿಲ್ಲ
ನಾವೆಲ್ಲೂ ನೋಡಲಿಲ್ಲ ll

ಹಾಡಿದರೆ ಅರಗಿಣಿಯೂ ಜೋಗಯ್ಯ ನಲಿದರೆ ನವಿಲು ಮರಿಯೂ
ಜೋಗಯ್ಯ ನಲಿದರೆ ನವಿಲು ಮರಿಯೂ ll
ಹಾಡಿದರೆ ಅರಗಿಣಿ ನಲಿದರೆ ನವಿಲು ಮರಿ ಕೂಗಿದರೆ ಕೋಗಿಲೆ ಮಾರಿಯೋ
ಕೂಗಿದರೆ ಕೋಗಿಲೆ ಮಾರಿಯೋ ll

ರಾಗವ ಚೆಂದ ನೋಡೇ ಜೋಗಯ್ಯನಾ ರೂಪುಗಳ ನೋಡಿರಮ್ಮ
ಜೋಗಯ್ಯನಾ ರೂಪುಗಳ ನೋಡಿರಮ್ಮ ll
ಎಸ್ಟೋತು ಕೇಳಿದರು ಮನಸಿಗೆ ಸಂತೋಷ ,ಮನಸಿಗೆ ಸಂತೋಷ ಉಂಟೂ
ಮನಸಿಗೆ ಸಂತೋಷ ಉಂಟೂ ll

ಹೆತ್ತಮ್ಮನ್ಯಾರೋ ಕಾಣೆ ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ
ಜೋಗಯ್ಯನ ಹಡೆದಮ್ಮನ್ಯಾರೋ ಕಾಣೆ ll
ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
ಬಿಟ್ಟ್ಯಾಗೇ ಇರುವಳಮ್ಮll

ಅನ್ಯಾಯಿ ಕಾರಿ ಬ್ರಹ್ಮ ಇವನನ್ನ ಸನ್ಯಾಸಿ ಮಾಡಬಹುದೇ I ಜೋಗಯ್ಯನ
ಜೋಗಯ್ಯನ ಸನ್ಯಾಸಿ ಮಾಡಬಹುದೇ ll
ರಾಜನ ಹೊಟ್ಟೆಯಲ್ಲಿ ಹುಟ್ಟಿದರೆ ಜೋಗಯ್ಯನ ಕಣ್ಣೆತ್ತಿ ನೋಡಬಹುದೇ
ಕಣ್ಣೆತ್ತಿ ನೋಡಬಹುದೇ ll

ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll

ಅನ್ಯಾಯಿ ಕಾರಿ ಬ್ರಹ್ಮ ಸುಂದರನ ಸನ್ಯಾಸಿ ಮಾಡಬಹುದೇ
ಸುಂದರನ ಸನ್ಯಾಸಿ ಮಡಬೊಹುದೇ ll
ಹೆತ್ತಂತ ತಯ್ಯಮ್ಮ ಇಂಥ.. ಸುಂದರನ ಬಿಟ್ಟ್ಯಾಗೇ ಇರುವಳಮ್ಮ
ಬಿಟ್ಟ್ಯಾಗೇ ಇರುವಳಮ್ಮ ll

ಹಲ್ಲಿನ ಸಾಲು ನೋಡೇ ಜೋಗಯ್ಯಗೆ ದಾಳಿಂಬಿ ಬೀಜದಗೆ
ಜೋಗಯ್ಯಗೆ ದಾಳಿಂಬಿ ಬೀಜದಗೆ ll
ಕಣ್ಣುಗಳ ಹೊಳಪಾ ನೋಡಿದರೆ ಜೋಗಯ್ಯಗೆ ನಿಂಬಿಯ ಹೋಳಿನಂಗೆ
ಜೋಗಯ್ಯಗೆ ನಿಂಬಿಯ ಹೋಳಿನಂಗೆ ll

ತುಟಿಯ ಚೆಂದ ನೋಡಿ ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ
ಜೋಗಯ್ಯಗೆ ತೊಂಡೆಯ ಹಣ್ಣಿನಂಗೆ ll
ಉಬ್ಬಿನ ಬಾವ ನೋಡಿದರೆ ಜೋಗಯ್ಯಗೆ ಉಬ್ಬಕ್ಕಿ ಗರಿಯಂಗೆ
ಉಬ್ಬಕ್ಕಿ ಗರಿಯಂಗೆ ll

ಕೆನ್ನೆಯ ಕಾನೂಪ ನೋಡೇ ಜೋಗಯ್ಯಗೆ ಕನ್ನಡಿಯ ಬಿಂಬದಾಗೆ
ಜೋಗಯ್ಯಗೆ ಕನ್ನಡಿಯ ಬಿಂಬದಾಗೆ ll
ತಲೆಯಾ ಬಾವಗಳ ನೋಡಿದರೆ ಜೋಗಯ್ಯನಿಗೆ ಚೌಲಿಯ ಮಿರಿಗಿನಂಗೆ
ಚೌಲಿಯ ಮಿರಿಗಿನಂಗೆ ll

ಅಂಗಾಲಿನ ಬಾವ ನೋಡೇ ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ
ಜೋಗಯ್ಯನಿಗೆ ಉಣ್ಣಿಮೆಯ ಚಂದ್ರನಂಗೆ ll
ಕಡೆಗಣ್ಣಿನ ನೋಟ ನೋಡಿದರೆ ಜೋಗಯ್ಯನಿಗೆ ಉಡಿ ಮಿಂಚು ಎಸೆದಂಗೆ
ಉಡಿ ಮಿಂಚು ಎಸೆದಂಗೆ ll

ಅಂದ ಸಿರಿ ಗಂಧಾದ್ ವನವೇ ಪರಿಮಳದ ಕೆಂದಾವರೆ ಗುಣದ ಒಲವೇ
ಪರಿಮಳದ ಕೆಂದಾವರೆ ಗುಣದ ಒಲವೇ ll
ಕೆಂದಾವರೆ ಗುಣದಂಥ ವೀರ ಅರ್ಜುನ ರಾಯ ನಿಂದೊಂದು ರಾಗ ನಲಿಯೋ
ನಿಂದೊಂದು ರಾಗ ನಲಿಯೋ ll

Get More Songs here –

  1. Chellidaru Malligeya; Mahadeshwara Songs Folk -ಚೆಲ್ಲಿದರು ಮಲ್ಲಿಗೆಯಾ
  2. ಕೇಳೋ ಮಾದೇವ ; Shiva Shiva Lyrics ; Ananya Bhat; Kannada and English
  3. ಹರ ಹರ ಶಂಭೋ ಶಂಭೋ ಶಂಭು ಶಿವ ಮಹದೇವ ; Hara Hara Shambhu Full song Lyrics kannada and English
  4. ದೇವಾ ಮಾದೇವ ಬಾರೋ ಸ್ವಾಮಿ ; mahadeshwara Song ; Madappa song
  5. Mungondada Madeshwara full song /madappa songs ; ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ
  6. More songs Blog

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!