ಬಾದಾಮಿ ಹಾಲು-Almond milk
ಬೇಕಾಗುವ ಸಾಮಾಗ್ರಿಗಳು…
- ಬಾದಾಮಿ- 30
- ಹಾಲು- 3 ಬಟ್ಟಲು
- ಸಕ್ಕರೆ- 4 ಚಮಚ
- ಏಲಕ್ಕಿ- 3
- ಕೇಸರಿ ದಳ- ಸ್ವಲ್ಪ
- ತುಪ್ಪ-ಸ್ವಲ್ಪ
- ಬಾದಾಮಿ, ಪಿಸ್ತಾ, ಗೋಡಂಬಿ ಚೂರುಗಳು
ಮಾಡುವ ವಿಧಾನ…
- ಬಾದಾಮಿಯನ್ನು ಒಂದು ಅಗಲವಾದ ಬೌಲ್ ಗೆ ನೀರು ಹಾಕಿ 5 ಗಂಟೆಗಳ ಕಾಲ ನೆನೆಸಿಡಿ. ನಂತರ ಇದರ ಸಿಪ್ಪೆ ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಹಾಲು, ಏಲಕ್ಕಿ, ಸಕ್ಕರೆ, ಕೇಸರಿ ದಳ ಸೇರಿಸಿ ರುಬ್ಬಿಕೊಳ್ಳಿ.
- ನಂತರ ಹಾಲನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಬಾದಾಮಿ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇದು ಕುದಿಯಲು ಶುರುವಾದಾಗ ಗ್ಯಾಸ್ ನ ಉರಿ ಸಣ್ಣಗೆ ಮಾಡಿಕೊಂಡು ಮತ್ತೊಮ್ಮೆ ಕುದಿಸಿ ಗ್ಯಾಸ್ ಆಫ್ ಮಾಡಿ.
- ಒಂದು ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಾದಾಮಿ, ಗೋಡಂಬಿ, ಪಿಸ್ತಾಗಳನ್ನು ಫ್ರೈ ಮಾಡಿಕೊಂಡು ಮಿಶ್ರಣ ಮಾಡಿದರೆ, ರುಚಿಕರವಾದ ಬಾದಾಮಿ ಹಾಲು ಸವಿಯಲು ಸಿದ್ಧ.
How to make the Special sherbet
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ