ಕಂಠಿ (2004) – ಬಾನಿಂದ ಬಾ ಚಂದಿರ

ಕಂಠಿ (2004) – ಬಾನಿಂದ ಬಾ ಚಂದಿರ
ಕಂಠಿ | ಕವಿರಾಜ್ | ಚಿತ್ರಗೀತೆ | ೨೦೦೪
ಗಾಯಕ: ಸೋನು ನಿಗಂ
ಸಾಹಿತ್ಯ: ಕವಿರಾಜ್
ಸಂಗೀತ : ಗುರುಕಿರಣ್
ಗಂಡು : ಪ್ರೀತಿಯಲ್ಲೂ, ಯುದ್ಧದಲ್ಲೂ ಸರಿ-ತಪ್ಪು ಇಲ್ಲ ಎಲ್ಲೂ..
ಏನಾದರೂ ತಪ್ಪಾದರೂ, ಕ್ಷಮಯಾ-ಧರಿತ್ರಿ ನಾರಿ
ನಾ ಹೇಳಬೇಕೆ ಸಾರಿ…?
ಬಾನಿಂದ ಬಾ ಚಂದಿರ, ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ.. ||೨||
ಪ್ರೀತೀಲಿ ಎಲ್ಲರೂ, ಒಂಥರಾ ಮೂರ್ಖರು
ಮಾತು ನೂರಿದ್ದರೂ, ಆಡದ ಮೂಕರು
ಬರಿ ಕಣ್ಣಲ್ಲೇ ಬರೆದೂ ಓಲೆ
ನೋಡು ನೋಡುತ್ತಲೆ ಎಲ್ಲ ಹೇಳೋ ಕಲೆ
ಪ್ರೀತಿಗೆ ಕೊಟ್ಟೋರು ಯಾರೋ…
ಬಾನಿಂದ ಬಾ ಚಂದಿರ, ಈ ಭೂಮಿಯೇ ಸುಂದರಾ…
ಪ್ರೀತಿಯ ಅಂದವಾ, ಕಾಣದ ಅಂಧರು
ಮೋಹದ ಪ್ರೀತಿಯಾ.. ಕುರುಡು ಅಂತಂದರು
ಎರಡು ಕಣ್ಣು, ಕಡಿಮೆ ಏನು
ಒಂದು ನೂರಾದರು ಕೊಡಲಾ ದೇವರು
ಹೋಗೋಣ ತೇಲೋಣ ಬಾರೊ…
ಬಾನಿಂದ ಬಾ ಚಂದಿರ, ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ…
Read more here
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ