ತನು ನಿನ್ನದು ಈ ಮನ ನಿನ್ನದು…
ಚಿತ್ರ: ಇಬ್ಬನಿ ಕರಗಿತು (೧೯೮೩)
ಹಾಡಿದವರು: ಎಸ್. ಜಾನಕಿ.
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್ – ನಾಗೇಂದ್ರ
———————————-
ತನು ನಿನ್ನದು ಈ ಮನ ನಿನ್ನದು…
ತನು ನಿನ್ನದು ಈ ಮನ ನಿನ್ನದು…
ನನಗಾಗಿ ಇನ್ನೇನಿದೆ… ಏ…
ಈ ಜೀವ ಎಂದೆಂದೂ ನಿನದಾಗಿದೆ…
ತನು ನಿನ್ನದು ಈ ಮನ ನಿನ್ನದು…
ಹೃದಯವೀಣೆಯ ವೈಣಿಕ ತಾನೇ ತಂತಿಯ ಮೀಟುವುದು… ಸ್ವರಗಳ ನುಡಿಸುವುದು…
ಹೃದಯವೀಣೆಯ ವೈಣಿಕ ತಾನೇ ತಂತಿಯ ಮೀಟುವುದು… ಸ್ವರಗಳ ನುಡಿಸುವುದು…
ಬಯಸಿದ ರಾಗ…, ನುಡಿಸುವ ವೇಗ…
ಬಯಸಿದ ರಾಗ…, ನುಡಿಸುವ ವೇಗ… ನಿನ್ನಲೇ ಸೇರಿದೆ…
ನಿನಗಾಗಿ ಬಾಳೆಲ್ಲ ನಾ ಹಾಡುವೆ…
ತನು ನಿನ್ನದು ಈ ಮನ ನಿನ್ನದು…
ಒಲಿದರೂ ನೀನೆ, ಮುನಿದರೂ ನೀನೇ… ಕಾಣೆನು ಬೇರೇನೂ… ಚಿಂತೆಯೂ ಇನ್ನೇನೂ…
ಒಲಿದರೂ ನೀನೆ, ಮುನಿದರೂ ನೀನೇ… ಕಾಣೆನು ಬೇರೇನೂ… ಚಿಂತೆಯೂ ಇನ್ನೇನೂ…
ಅಮೃತವ ನೀಡು…, ವಿಷವನೇ ನೀಡು…
ಅಮೃತವ ನೀಡು…, ವಿಷವನೇ ನೀಡು… ಎನೂ ಮಾತಾಡೇನೂ….ಊ…
ನಿನ್ನಿಂದ ದೂರಾಗಿ ನಾ ಬಾಳೆನು…
ತನು ನಿನ್ನದು ಈ ಮನ ನಿನ್ನದು…
Read more here –
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ