ಓ ಮೇಘವೆ ಮೇಘವೆ ಹೋಗಿ ಬಾ – ಶೃಂಗಾರ ಕಾವ್ಯ
ಶೃಂಗಾರ ಕಾವ್ಯ (೧೯೯೩)
ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಹಿನ್ನೆಲೆ ಗಾಯನ: ಎಸ್ ಪಿ ಬಿ , ಚಿತ್ರ
ಓಹೊಹೊ ಓಹೊ …ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ
ಓಹೊಹೊ ಓಹೊ …ಓಹೊಹೊ ಓಹೊ ಅಹಹಾ ಹಹ ಅಹಹಾ ಹಹ
ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ
ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ..
ಓ ಮೇಘವೆ ಮೇಘವೆ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ
ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯ
ಮುಗಿಲ ಬಾನಗಳ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳೆಯ ಓದುವೆಯ
ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ
ಇದು ಓದೋ ಓಲೆಯಲ್ಲ ಬರೆದುಕೊ ನನ್ನ ಜೀವ ನಿನ್ನದೆ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ
ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ವನವೇ ಕಾನನವೇ ಹೂಬನವೇ ಹಸಿರೇ ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ
ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ
ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ ಸಂಧಾನದ ಪಾತ್ರಕೆ ವಂದನೆ
ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ
Read more here
Jeevanavellavu Naa Haaduve Song Shrungara Kavya kannada
Jeevanavellavu Naa Haaduve Song Shrungara Kavya kannada
Premada Hoogara Chikkejamanru songs kannada ಚಿಕ್ಕೆಜಮಾನ್ರು
Nammura Nyaya Devaru Song kannada ನಮ್ಮೂರ ನ್ಯಾಯ ದೇವರು from Ravichandran