ಮೆಂತ್ಯೆ ಗೊಜ್ಜು- Sprouted Fenugreek Gojju Recipe in Kannada
ಬೇಕಾಗುವ ಪದಾರ್ಥಗಳು…
- ಎಳ್ಳು- 2 ಚಮಚ
- ಜೀರಿಗೆ- 1 ಚಮಚ
- ಒಣ ಕೊಬ್ಬರಿ – ಕಾಲು ಬಟ್ಟಲು
- ಒಣಮೆಣಸು- 5-6
- ದನಿಯಾ- 1 ಚಮಚ
- ಸಾಸಿವೆ- ಸ್ವಲ್ಪ
- ಇಂಗು- ಸ್ವಲ್ಪ
- ಕರಿಬೇವು-ಸ್ವಲ್ಪ
- ಈರುಳ್ಳಿ- 1
- ಅರಿಶಿನ- ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ಮೊಳಕೆ ಬರಿಸಿದ ಮೆಂತ್ಯೆ ಕಾಳು- 1 ಬಟ್ಟಲು
- ಹುಣಸೆ ಹಣ್ಣಿನ ರಸ-ಸ್ವಲ್ಪ
- ಬೆಲ್ಲ-ಸ್ವಲ್ಪ
ಮಾಡುವ ವಿಧಾನ…
- ಒಣ ಬಾಣಲಿಗೆ ಎಳ್ಳು, ಜೀರಿಗೆ, ಕಾಲು ಬಟ್ಟಲು ಒಣ ಕೊಬ್ಬರಿ, ಒಣಮೆಣಸು, ದನಿಯಾವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಇದು ತಣ್ಣಗಾದ ಮೇಲೆ ಎಲ್ಲವನ್ನೂ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
- ನಂತರ ಬಾಣಲಿಗೆ 2 ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಮೊಳಕೆ ಬರಿಸಿದ ಮೆಂತ್ಯೆ ಕಾಳನ್ನು ಹಾಕಿ ಸಾಧಾರಣ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.
- ನಂತರ ಅದೇ ಬಾಣಲಿಗೆ 2–3 ಚಮಚ ಎಣ್ಣೆಗೆ ಸಾಸಿವೆ, ಜೀರಿಗೆ, ಸ್ವಲ್ಪ ಇಂಗು, ಕರಿಬೇವು ಹಾಕಿ. ನಂತರ ಇದಕ್ಕೆ ಸಣ್ಣ ಕತ್ತರಿಸಿದ 1 ಈರುಳ್ಳಿ ಹಾಕು ಅರಿಶಿನ ಹಾಕಿ ಸ್ವಲ್ಪ ಹುರಿದುಕೊಂಡು ಅದಕ್ಕೆ ಹುರಿದಿಟ್ಟುಕೊಂಡಿದ್ದ ಮೆಂತ್ಯೆ ಕಾಳನ್ನು ಹಾಕಿ,
- ಉಪ್ಪು, 2 ಚಮಚದಷ್ಟು ಬೆಲ್ಲ, ನಿಂಬೆಹಣ್ಣಿನಗಾತ್ರದ ಹುಣಸೆಹಣ್ಣಿನ ರಸ ಬೆರೆಸಿ ಸ್ವಲ್ವ ಹುರಿದುಕೊಂಡ ನಂತರ 1 ಕಪ್ ನೀರು ಬೆರೆಸಿ ಕಾಳು ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮಿಕ್ಸಿ ಮಾಡಿಟ್ಟುಕೊಂಡ ಮಸಾಲವನ್ನು ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿದರೆ ಗೊಜ್ಜು ಸಿದ್ಧ. ಈ ಗೊಜ್ಜನ್ನು ಮುದ್ದೆ, ಚಪಾತಿ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.
Methi mutton Recipe in Kannada
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ