ಪಾಪಿಲನ್ – 1 : ಅಪರಾಧಗಳನ್ನು ಮಾಡುವ ಜೈಲಿನ ಕಥೆ – ಪುಸ್ತಕ ವಿಮರ್ಶೆ
– ಪೂರ್ಣಚಂದ್ರ ತೇಜಸ್ವಿ
ಹಾಗೆ ಸುಮ್ನೆ ಒಂದಿನ ಸಿನಿಮಾ ನೋಡುವ ಅಂತ ಸಾಹಸ(action adventure) ಸಿನಿಮಾ ನೋಡಿದೆ, ಸಿನಿಮಾ ಏನೋ ಇಷ್ಟ ಆಯ್ತು ಆದ್ರೆ ಸಿನಿಮಾದ ಕೊನೆಯಲ್ಲಿ ಇದು ರಿಯಲ್ ಸ್ಟೋರಿ ಅಂತ ತೋರ್ಸಿದ್ ಮೇಲೆ ಅದು ಯಾರು ಈ ಭೂಪ ಅಂತ ತಿಳ್ಕೊಳ್ಳೋ ಕುತೂಹಲ ಹುಟ್ಟಿತು.
ಒಂದಿನ ಆಫೀಸ್ ಅಲ್ಲಿ ಈ ವಿಚಾರ ಮಾತಾಡೋವಾಗ ಒಬ್ಬ ಪಾಪಿಲ್ಲೋನ್(Papillon) ಬಗ್ಗೆ ಬುಕ್ ಇದೆ ಕನ್ನಡದಲ್ಲಿ ಅದ್ನ ಓದಿ ಇನ್ನು ಇಂಪ್ರೆಸ್ ಆಗುತ್ತೆ ಅಂತ ಹೇಳ್ದ, ಹೀಗೇ ವಿಚಾರ ಮಾಡೋ ಟೈಮ್ ನಲ್ಲೇ ಸ್ನೇಹಿತನ ಕೃಪೆ ಇಂದ ಬುಕ್ ನನ್ ಕೈಗೆ ಗಿಫ್ಟ್ ಆಗಿ ಸೇರಿತ್ತು.
ಪುಸ್ತಕದ ಹಿನ್ನೆಲೆ ಹೆನ್ರಿ ಚಾರ್ರಿಯೆರ್ ಅವರು ಪ್ಯಾಪಿಲೋನ್ ಕಾದಂಬರಿಯನ್ನು ಬರೆದರು, ಇದನ್ನು ಮೂಲತಃ ಫ್ರಾನ್ಸ್‌ನಲ್ಲಿ ಏಪ್ರಿಲ್ 30, 1969 ರಂದು ಪ್ರಕಟಿಸಲಾಯಿತು. ಪ್ಯಾಪಿಲೋನ್ ಎಂಬುದು ಚಾರ್ರಿಯರ್ ಅವರ ಅಡ್ಡಹೆಸರು. ಈ ಕಥೆಯು 1931 ರಿಂದ 1945 ರವರೆಗೆ 14 ವರ್ಷಗಳ ಕಾಲ ಫ್ರೆಂಚ್ ಗಯಾನಾದ ಫ್ರೆಂಚ್ ದಂಡನೆ ವಸಾಹತುದಿಂದ ಪಾಪಿಲ್ಲನ್‌ನ ಬಂಧನ ಮತ್ತು ನಂತರದ ತಪ್ಪಿಸಿಕೊಳ್ಳುವಿಕೆಯನ್ನು ವಿವರಿಸುತ್ತದೆ. ಪ್ಯಾಪಿಲೋನ್ ಬಹುತೇಕ ನಿಖರವಾಗಿದೆ ಎಂದು ಚಾರ್ರಿಯೆರ್ ಹೇಳಿಕೊಂಡರೂ, ಪ್ರಸ್ತುತ ಶಿಕ್ಷಣತಜ್ಞರು ಪುಸ್ತಕದ ಹೆಚ್ಚಿನ ವಿಷಯವು ಇತರ ಅಪರಾಧಿಗಳಿಂದ ಹುಟ್ಟಿಕೊಂಡಿದೆ ಎಂದು ಚಾರ್ರಿಯರ್ ಸ್ವತಃ. ನಂಬುತ್ತಾರೆ.
ಪ್ಯಾಪಿಲಾನ್ / Papillon: 1
“ಪ್ಯಾಪಿಲಾನ್” ಜಗತ್ತಿನ ಮಹೋನ್ನತ ಸಾಹಸ ಕತೆ. ಅನೇಕ ಸ್ಥರಗಳಲ್ಲಿ ಇದು ಇಪ್ಪತ್ತನೆಯ ಶತಮಾನದ ನಾಗರೀಕತೆಯ ವಿಶ್ವರೂಪ ದರ್ಶನ ಮಾಡಿಸುವುದರಿಂದ ಆ ಶತಮಾನದ ಪ್ರಾತಿನಿಧಿಕ ಕೃತಿ ಎಂದೂ ಕರೆಯಬಹುದು. ಮೂಲತಃ ಸ್ವಾತಂತ್ರಕ್ಕಾಗಿ ಮನುಷ್ಯನೊಬ್ಬನ ಅದಮ್ಯ ಹೋರಾಟದ ಸತ್ಯ ಕತೆ.
ತಾನು ಮಾಡಿರದ ತಪ್ಪಿಗಾಗಿ ಜೀವಾವದಿ ಶಿಕ್ಷೆಗೆ ಒಳಗಾದ ಪ್ಯಾಪಿ ದೇಶದಿಂದ ನೂರಾರು ಮೈಲಿ ದೂರದ ಫ್ರೆಂಚ ಗಯಾನ ದ್ವೀಪಗಳಲ್ಲಿನ ಸೆರೆಮನೆಗೆ ಸಾಗಲ್ಪಡುತ್ತಾನೆ. ಅಲ್ಲಿಂದ ಪ್ರಾರಂಭವಾಗುತ್ತದೆ, ಅಮಾನವೀಯ ವ್ಯವಸ್ಥೆಯ ವಿರುದ್ಧ, ಸ್ವತಂತ್ರ ಬದುಕಿನೆಡೆಗಿನ ಅವನ ಪಲಾಯನದ ಕತೆ. ಹದಿಮೂರು ವರ್ಷಗಳ ಎಂಟು ವಿಫಲ ಯತ್ನಗಳ ಅತ್ಯದ್ಭುತ ರೋಚಕ ಸಾಹಸಯಾನ. ಕೊನೆಗೂ ಗೋಣಿಚೀಲದಲ್ಲಿ ತೆಂಗಿನಕಾಯಿ ತುಂಬಿ, ಅದರ ಮೇಲೆ ಸವಾರಿ ಮಾಡುತ್ತಾ, ಸಾಗರದಲ್ಲಿ ನೂರಾರು ಮೈಲಿ ಹೋಗಿ ತಪ್ಪಿಸಿಕೊಂಡು ವೆನಿಜುಯೆಲಾ ದೇಶ ತಲುಪುತ್ತಾನೆ.
ಏನೇನು ಮಾಡಿದರೂ ತಪ್ಪಿಸಿಕೊಂಡು ಸ್ವಾತಂತ್ರದೆಡೆಗೆ ಪಲಾಯನ ಮಾಡುವ ಹಂಬಲವನ್ನು ತೊರೆಯಲು ಪ್ಯಾಪಿಲಾನ್ಗೆ ಸಾಧ್ಯವಾಗುವುದೇ ಇಲ್ಲ!
– ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪಾಪಿಲ್ಲನ್ ಒಂದು ಖೈದಿಯ ಜೀವನ ಚರಿತ್ರೆ……..! ಅಲ್ಲ ಒಬ್ಬ ಸಾಹಸಿಗನ 13 ವರ್ಷಗಳ ಅದ್ಭುತ ಅನುಭವ, ಸಮುದ್ರಯಾನ, ಕಾಡು ಪ್ರಯಾಣ, ಸಾಯುವ ಹಂತ, ಹಠ, ನಿರಾಸೆ, ಜೀವನೋತ್ಸಾಹ, ಇದೆಲ್ಲದರ ಸಂಗಮ.
Read More – This story of a Beauty
ನಾವು ಸಣ್ಣ ಪುಟ್ಟ ಆಸೆ ಕೈ ತಪ್ಪಿದಾಗ ಕೊರಗುವ ಮನಸ್ಥಿತಿ ಇದ್ರೆ ಖಂಡಿತ ಪಾಪಿಲ್ಲನ್ ಒಮ್ಮೆ ಆದರೂ ಜೀವನ ದಲ್ಲಿ ಓದಲೇ ಬೇಕಾದ ಪುಸ್ತಕ. ಯಾರದೋ ಮೊಸಕ್ಕೆ ಒಳಗದ ಪಾಪಿಲ್ಲನ್ ತನ್ನ ತಂದೆ ಹೆಂಡತಿ ಕುಟುಂಬ ಬಿಟ್ಟು ಹೋರಟ ಕ್ಷಣ, ಪೋಲೀಸ್ ಪೇದೆ ಮತ್ತು ಲಾಯರ್ ನ ಪಿತುರಿ ಸೇರಿ ಪಾಪಿಲ್ಲನ್ಗೆ ಜೀವವಾದಿ ಶಿಕ್ಷೆ ಕೊಡಿಸುತ್ತೆ, ಆದ್ರೆ ಕಿಂಚಿತ್ತೂ ನೀರಿಕ್ಷೆ ಇರದ ಈತ ಖೈದಿಗಳ ಜೊತೆ Devils ದ್ವೀಪಕ್ಕೆ ಹೊರಡುತ್ತಾನೆ.
ತನ್ನ ಹಳೆಯ ಸ್ನೇಹಿತ ಡೆಗ(Dega)ಬೇಟಿಯಾಗುತ್ತದೆ, ಮತ್ತು ಆತ ತನ್ನ ಎಲುಬಿಲ್ಲದ ನಾಲಿಗೆಯಾ ಪ್ರಭಾವದಿಂದ ಮೂರ್ಖತನ ಕೆಲಸಕ್ಕೆ 15ವರ್ಷ ಶಿಕ್ಷೆಗೆ ಗುರಿಯಾಗಿರುತ್ತಾನೆ.
Dega island ಅಲ್ಲಿ ಬದುಕಲು ಚಾರ್ಜರ್ ನ ಅಗತ್ಯ ಇದೆ ಎದು Papiಗೆ ಎಚ್ಚರಿಸುತ್ತಾನೆ. ಕೊನೆಗೆ papiಯಾ ಹೆಂಡತಿ ಸಹಾಯದಿಂದ ಚಾರ್ಜರ್ ಕೈ ಸೇರಿತ್ತು, ಅದ್ರಲ್ಲಿ ಒಂದಸ್ಟು ಹಣ ಚಿಕ್ಕದಾಗಿ ಮಡಚಿ ಸುತ್ತಿಟ್ಟಿದ್ದಳು.
Read this – Story of Nanjanagudu, Mysore; ನಂಜನಗೂಡು; ದೇವಾಲಯಗಳ ನಾಡು
ಅದನ್ನೂ ದೇಹದ ಒಳಗೇ ಬಚ್ಚಿಡುವುದು ಹಾಗು ಅಗತ್ಯ ಬಂದಾಗ ಬಳಸ ಬಹುದಾಗಿತ್ತು, Papi ಮನಸಲ್ಲಿ ಅವನ ಸೆರೆವಾಸ ಎಷ್ಟು ಕೋಪಿಷ್ಠನಾಗಿಸಿತ್ತೆಂದರೆ ಆದಷ್ಟು ಬೇಗ ಇಲ್ಲಿಂದ ಪರಾರಿಯಾಗಿ ನನ್ನ ಈ ಪರಿಸ್ಥಿತಿಗೆ ಕಾರಣರಾದ ಪ್ರತಿ ಒಬ್ಬರನು ಮುಗಿಸುವುದು ಎಂದು ಪ್ರತಿಜ್ಞೆ ಮಾಡಿದ್ದ……
ಸಣ್ಣ ಪ್ರಾಯಕ್ಕೆ ಮಾಡದ ತಪ್ಪಿಗೆ ಜೀವವಾದಿ ಶಿಕ್ಷಿ ಎದುರು ಬಂದಾಗ ಬಹುಶಃ ನಮ್ಮೆಲ್ಲರ ಬುದ್ದಿಯು ಇದೆ ತರಹ ಯೋಚ್ನೆ ಮಡುವುದೆನೋ ಗೊತ್ತಿಲ್ಲ! ಮುಂದುವರಿಯುವುದು................