Welcome to Kannada Folks   Click to listen highlighted text! Welcome to Kannada Folks
HomeStoriesStory of Ayyappa Swamy – ಅಯ್ಯಪ್ಪ ಸ್ವಾಮಿಯ ಕಥೆ – Chapter 2 -...

Story of Ayyappa Swamy – ಅಯ್ಯಪ್ಪ ಸ್ವಾಮಿಯ ಕಥೆ – Chapter 2 – ಪಂದಳ ರಾಜನ ಸಂರಕ್ಷಣೆಯಲ್ಲಿ

Spread the love

Story of Ayyappa Swamy – ಅಯ್ಯಪ್ಪ ಸ್ವಾಮಿಯ ಕಥೆ – Chapter 2

ಪಂದಳ ರಾಜನ ಸಂರಕ್ಷಣೆಯಲ್ಲಿ

Read Previous Chapter – Story of Ayyappa Swamy; ಅಯ್ಯಪ್ಪ ಸ್ವಾಮಿಯ ಕಥೆ; Chapter 1

ರಾಜಶೇಖರನು ಮಗುವಿಗೆ ಕಾಲಕಾಲಕ್ಕೆ ಬೇಕಾದ ಸಂಸ್ಕಾರಗಳನ್ನು ಮಾಡಿದನು. ಮಗುವಾಗಿದ್ದೂ ಮಣಿಕಂಠನು ಬುದ್ಧಿವಂತನೂ ಪರಿಪಕ್ವಮತಿಯೂ ಆಗಿದ್ದನು. ಯುದ್ಧ ವಿದ್ಯೆಯಲ್ಲಿಯೂ ಶಾಸ್ತ್ರಗಳಲ್ಲಿಯೂ ತನ್ನ ಪ್ರೌಢಿಮೆಯನ್ನು ಪ್ರಕಟಿಸಿದನು. ಮಣಿಕಂಠನು ತನ್ನ ಬುದ್ಧಿಶಕ್ತಿಯಿಂದಲೂ ಅಮಾನುಷಿಕ ಪ್ರತಿಭೆಯಿಂದಲೂ ಗುರುವನ್ನು ಚಕಿತಗೊಳಿಸಿದನು. ಪಂದಳ ರಾಜ್ಯದಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿ ತುಳುಕಿತು. ಮಣಿಕಂಠನದ್ದು ಕೇವಲ ನಶ್ವರವಾದ ಮನುಷ್ಯ ಜನ್ಮ ಅಲ್ಲವೆಂದೂ ಅವನಲ್ಲಿ ದೈವಿಕ ಚೈತನ್ಯ ತುಂಬಿದೆಯೆಂದೂ ಆತನ ಗುರು ತೀರ್ಮಾನಿಸಿದನು.

Who is Pandala Raja?
ಕಲಿಕೆ ಪೂರ್ತಿಗೊಳಿಸಿದ ಮಣಿಕಂಠ – Ayapana Swamy Story

ಕಲಿಕೆ ಪೂರ್ತಿಗೊಳಿಸಿದ ಮಣಿಕಂಠನು ಯಥೋಚಿತ ಗುರುದಕ್ಷಿಣೆ ಕೊಡಲು ಮತ್ತು ಗುರುವಿನ ಅನುಗ್ರಹ ಪಡೆಯಲು ಹೊರಟನು. ಅಮಾನುಷಿಕ ಪ್ರಭಾವವಿರುವವ ಹಾಗೂ ದಿವ್ಯಶಕ್ತಿ ಸಂಪನ್ನನಾದವ ರಾಜಕುಮಾರನೆಂದು ತಿಳಿದ ಗುರು ತನ್ನ ಆಶೀರ್ವಾದವನ್ನು ಅಪೇಕ್ಷಿಸಿ ಬಂದ ಮಣಿಕಂಠನಿಗೆ ಹೇಳಿದನು : ‘‘ಕುರುಡನೂ ಕಿವುಡನೂ ಆದ ನನ್ನ ಮಗನಿಗೆ ದೃಷ್ಟಿಯನ್ನೂ ಮಾತಾಡುವ ಶಕ್ತಿಯನ್ನೂ ನೀಡಿ ಅನುಗ್ರಹಿಸು.’’ ಈ ವಿಜ್ಞಾಪನೆಯನ್ನು ಮನ್ನಿಸಿದ ಮಣಿಕಂಠನು ಗುರುಪುತ್ರನ ಶಿರಸ್ಸಿನ ಮೇಲೆ ಕೈಯಿಟ್ಟನು. ಕೂಡಲೇ ಅವನಿಗೆ ದೃಷ್ಟಿ ಮತ್ತು ಮಾತಾಡುವ ಸಾಮರ್ಥ್ಯ ಪ್ರಾಪ್ತವಾದುವು. ತಾನುಮಾಡಿದ ಅದ್ಭುತ ಕೆಲಸವನ್ನು ಯಾರಿಗೂ ತಿಳಿಸಬಾರದೆಂದು ಕೇಳಿಕೊಂಡು ಮಣಿಕಂಠನು ಅರಮನೆಗೆ ಹಿಂದಿರುಗಿದನು.

Google Image Result for  https://3.bp.blogspot.com/-yYAJnsrnI18/Vj8bQBvQWwI/AAAAAAAAfNY/X-fG7Th8XTg/s640/Lord%2Bayya…  | Lord shiva family, Shakti goddess, Lord shiva

ಈ ನಡುವೆ ರಾಣಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಆ ಮಗುವಿಗೆ ರಾಜ ರಾಜನ್ ಎಂದು ನಾಮಕರಣ ಮಾಡಿದ್ದರು. ರಾಜ್ಯದಲ್ಲಿ ನಡೆದು ಹೋದ ಅದ್ಭುತ ಘಟನಾವಳಿಗಳು ರಾಜಶೇಖರನನ್ನು ಚಿಂತಿಸುವಂತೆ ಮಾಡಿದ್ದುವು. ಭಗವಾನ್ ಅಯ್ಯಪ್ಪನೇ ತನ್ನ ಮಗನಾಗಿ ಬಂದಿರುವನೆಂದು ಅವನು ಭಾವಿಸಿದನು. ಮಣಿಕಂಠನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿದನು.

ದಿವಾನನ ಹೊರತಾಗಿ ಆಸ್ಥಾನದಲ್ಲಿರುವವರೆಲ್ಲರೂ ಸಂತೋಷಪಟ್ಟರು. ತನ್ನ ಮಹತ್ವಾಕಾಂಕ್ಷೆಯನ್ನು ರಹಸ್ಯವಾಗಿ ಪೋಷಿಸಿದ್ದ ಕುತಂತ್ರಿಯಾದ ಮಂತ್ರಿಯು ಮಣಿಕಂಠನನ್ನು ದ್ವೇಷಿಸುತ್ತಿದ್ದನು. ಅವನು ಈ ದೈವಿಕ ಅವತಾರವನ್ನು ನಿರ್ನಾಮಗೊಳಿಸಲು ಕಟಿಬದ್ಧನಾದನು. ವಿಷ ಪ್ರಾಶನವೇ ಮೊದಲಾದ ಹಲವಾರು ತಂತ್ರಗಳನ್ನು ಕೈಗೊಂಡನು. ಮಣಿಕಂಠನಿಗಾದ ಚಿಕ್ಕ ಚಿಕ್ಕ ತೊಂದರೆಗಳನ್ನು ಭಗವಾನ್ ಶಿವನೇ ದೂರೀಕರಿಸಿದನು. ಮಂತ್ರಿಯ ಕುಯುಕ್ತಿಗಳೆಲ್ಲ ವಿಫಲಗೊಂಡುವು.

Read Here – Story of Ravan; Kannada Version of Ravan Episodes Series

ತನ್ನ ಯೋಜನೆಗಳು ಭಂಗವಾಗುವುದನ್ನು ಕಂಡು ನಿರಾಶನಾಗಿ ಹೋದ ದಿವಾನನು ರಾಣಿಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸತೊಡಗಿದನು. ಸ್ವಂತ ಮಗನು ಜೀವಿಸಿರುವಾಗಲೇ ಮಣಿಕಂಠನನ್ನು ರಾಜನನ್ನಾಗಿ ಮಾಡುವುದು ಸೂಕ್ತವಲ್ಲ ಎಂದು ಅವಳಿಗೆ ಬೋಧಿಸಿದನು. ಅರ್ಥಶಾಸ್ತ್ರದ ಪ್ರಕಾರ ಗುರಿಯು ಮಾರ್ಗವನ್ನು ಉದಾತ್ತಗೊಳಿಸುತ್ತದೆ ಎಂಬಂತೆ ಅನಾರೋಗ್ಯವನ್ನು ಅಭಿನಯಿಸಲು ರಾಣಿಗೆ ಸಲಹೆ ನೀಡಿದನು.

ಆತನ ವಿಶ್ವಾಸದ ವೈದ್ಯನೊಬ್ಬನಿಂದ ರಾಣಿಯ ಅನಾರೋಗ್ಯ ನಿವಾರಣೆಗೆ ಹುಲಿಯ ಹಾಲು ಬೇಕು ಎಂದು ಹೇಳಿಸಿದನು. ಹುಲಿಯ ಹಾಲನ್ನು ಹುಡುಕಲು ಹೊರಟ ಮಣಿಕಂಠನನ್ನು ನರಭಕ್ಷಕರಿಗೆ ಆಹಾರವನ್ನಾಗಿಸುವುದು ಅವನ ಉದ್ದೇಶ. ಜವಾಬ್ದಾರಿ ನೆರವೇರಿಸಲು ಸಾಧ್ಯವಾಗದೆ ಪರಾಜಿತನಾಗಿ ಮಣಿಕಂಠನು ಹಿಂತಿರುಗಿ ಬಂದಲ್ಲಿ ಸಹಜವಾಗಿಯೇ ಆತನ ಮೇಲಿರುವ ರಾಜನ ಪ್ರೀತಿ ಕಡಿಮೆಯಾಗುವುದು ಎಂದು ರಾಣಿಗೆ ಹೇಳಿದನು.

ಪುತ್ರ ಸ್ನೇಹದಿಂದ ಕುರುಡಿಯಾದ ರಾಣಿ ದಿವಾನನ ಮಾತುಗಳನ್ನು ನಂಬಿದಳು. ಆತನು ಸೂಚಿಸಿದಂತೆ, ಸಹಿಸಲು ಅಸಾಧ್ಯವೆನಿಸಿದ ತಲೆನೋವಿನಿಂದ ಬಳಲುತ್ತಿರುವುದಾಗಿ ರಾಜನನ್ನು ನಂಬಿಸಿದಳು. ಭ್ರಮೆಗೊಳಗಾದ ರಾಜನು ಅರಮನೆಯ ವೈದ್ಯನನ್ನು ಕರೆಸಿದನು. ಎಷ್ಟು ಕಷ್ಟಪಟ್ಟರೂ ರಾಣಿಯ ಕಾಯಿಲೆ ಯಾವುದೆಂದು ತಿಳಿದುಕೊಳ್ಳಲು ಅರಮನೆಯ ವೈದ್ಯನಿಂದ ಸಾಧ್ಯವಾಗಲಿಲ್ಲ.

ಈ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ದಿವಾನನು ತಾನು ಏರ್ಪಾಡು ಮಾಡಿದ ವೈದ್ಯನನ್ನು ಕರೆಸಿದನು. ರಾಣಿಯನ್ನು ಪರೀಕ್ಷಿಸಿದಂತೆ ನಟಿಸಿದ ಆ ವೈದ್ಯನು ಈಂದ ಹುಲಿಯ ಹಾಲಿನಿಂದ ಮಾತ್ರವೇ ರಾಣಿಯ ರೋಗ ಶಮನಗೊಳ್ಳುವುದೆಂದು ಸೂಚಿಸಿದನು. ರಾಣಿಯ ಕಾಯಿಲೆಯನ್ನು ಗುಣಪಡಿಸಿದವರಿಗೆ ಅರ್ಧರಾಜ್ಯವನ್ನೇ ಕೊಡುವುದಾಗಿ ರಾಜನು ಡಂಗುರ ಸಾರಿಸಿದನು. ಹುಲಿಯ ಹಾಲು ಸಂಗ್ರಹಿಸುವ  ಸಲುವಾಗಿ ಕಾಡಿಗೆ ಹೋದ ಸೈನಿಕರು ಬರಿಗೈಯಲ್ಲಿ ಹಿಂತಿರುಗಿದರು.

Read Here – Shree Vishnu Dashavatara; Story of Kurmaa Avatar. ಕೂರ್ಮಾ ; ವಿಷ್ಣುವಿನ ಎರಡನೇ ಅವತಾರ ಕಥೆ

ಮಣಿಕಂಠನು ಹುಲಿಯ ಹಾಲು ತರುವ ಸಲುವಾಗಿ ಹೊರಡಲು ಸಿದ್ಧನಾದರೂ ಆತನ ಕಿರುಹರಯವನ್ನು ಮತ್ತು ಮುಂದೆ ನಡೆಯಲಿರುವ ಆತನ ಕಿರೀಟಧಾರಣೆಯನ್ನು ಎತ್ತಿ ತೋರಿಸಿದ ರಾಜಶೇಖರನು ಅವನಿಗೆ ಒಪ್ಪಿಗೆ ನೀಡಲಿಲ್ಲ. ಕುಟುಂಬಕ್ಕಾಗಿ ಒಂದು ಉಪಕಾರವನ್ನು ಮಾಡಲು ತನಗೆ ಒಪ್ಪಿಗೆಯನ್ನು ನೀಡಬೇಕೆಂದು ಮಣಿಕಂಠನು ತಂದೆಯನ್ನು ಒತ್ತಾಯಿಸಿದನು. ಜವಾಬ್ದಾರಿಯುತನಾದ ತಂದೆ ಎಂಬ ನೆಲೆಯಲ್ಲಿ ಮಗನ ಅಪೇಕ್ಷೆಯನ್ನು ಕಡೆಗಣಿಸಿದರೂ ಸನ್ನಿವೇಶದ ಒತ್ತಡದಿಂದಾಗಿ ಹುಲಿಯ ಹಾಲು ತರುವ ಸಲುವಾಗಿ ಕಾಡಿಗೆ ತೆರಳಲು ಮಗನಿಗೆ ಒಪ್ಪಿಗೆ ನೀಡಬೇಕಾಗಿ ಬಂತು.

ಮಣಿಕಂಠನ ನೆರವಿಗಾಗಿ ಸಾಹಸಿಗಳಾದ ಭಟರ ಒಂದು ತಂಡವನ್ನು ಅವನೊಂದಿಗೆ ಕಾಡಿಗೆ ಕಳಿಸಲು ಅರಸನು ತೀರ್ಮಾನಿಸಿದನು. ಆದರೆ ಜನರ ಗುಂಪುಗಳನ್ನು ಕಂಡೊಡನೆ ಹುಲಿಯು ಓಡಿ ಹೋಗುವುದೆಂಬ ಕಾರಣದಿಂದ ಮಣಿಕಂಠನು ತಂದೆಯ ತೀರ್ಮಾನವನ್ನು ಒಪ್ಪಲಿಲ್ಲ ..

 

ಮುಂದುವರೆಯುವುದು .........

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!