Welcome to Kannada Folks   Click to listen highlighted text! Welcome to Kannada Folks
Homeಕನ್ನಡ ಫೊಕ್ಸ್Muthinantha Maathondu - ಮುತ್ತಿನಂತ ಮಾತೊಂದು Kannada Song Lyrics - Bahaddur Gandu

Muthinantha Maathondu – ಮುತ್ತಿನಂತ ಮಾತೊಂದು Kannada Song Lyrics – Bahaddur Gandu

Kannada Songs

Spread the love

Muthinantha Maathondu – ಮುತ್ತಿನಂತ ಮಾತೊಂದು Lyrics – Bahaddur Gandu

ಹಾಡುವಾ ದನಿಯಲ್ಲಿ ಶ್ರುತಿ ಸೇರಬೇಕು,ನೋಡುವಾ ನೋಟದಲಿ ಹಿತ ಕಾಣಬೇಕು,
ಆಡುವಾ ಮಾತಿನಲಿ……..ಪ್ರೀತಿ ಇರಬೇಕು…………..
ಆ ಆಹಾ ಹಾ ಹಾ ………ಆಹಾ ಹಾ ಹಾ ………ಆಹಾ ಹಾ ಹಾ ಹಾ ………

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಸಿರಿತನವೆಂದು ಶಾಶ್ವತವಲ್ಲ,ಬಡ ಜನರೆಂದು ಪ್ರಾಣಿಗಳಲ್ಲ,
ದೇವರ ಆಟ ಬಲ್ಲವರಿಲ್ಲ,ಬಾಳಿನ ಮರ್ಮ ಅರಿತವರಿಲ್ಲಾ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ………ಪಾಪ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
ಎಂದು ಆಳಾಗ ಬಲ್ಲವನೇ ಅರಸಾಗುವ ಒಳ್ಳೆ ಅರಸಾಗುವ ಹೇ …………

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು,
ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ……ಏನು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ,ಅಯ್ಯೋ ಹೆಮ್ಮಾರಿಯೇ ಹೇ ……

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ……..ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,ಇಲ್ಲ ಮಣ್ಣುತಿನ್ನುವೆ ಹೇ………..

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!