Welcome to Kannada Folks   Click to listen highlighted text! Welcome to Kannada Folks
Homeಕನ್ನಡ ಫೊಕ್ಸ್Chicken Masala Recipe: How to make this at Home - ಭಾನುವಾರದ ಬಾಡೂಟಕ್ಕೆ...

Chicken Masala Recipe: How to make this at Home – ಭಾನುವಾರದ ಬಾಡೂಟಕ್ಕೆ ಮನೆಯಲ್ಲಿ ಮಾಡಿ

Want to try homemade Masala Chicken? Follow this easy chicken masala recipe with step by step

Spread the love

Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿ ಮಾಡಿ ಖಾರವಾದ ಚಿಕನ್ ಮಸಾಲಾ!

Non Veg: ಅನ್ನದ ಜೊತೆಗೆ ಖಾರವಾದ ಚಿಕನ್ ಮಸಾಲೆಯನ್ನು ಸೇವನೆ ಮಾಡಬಹುದು.. ಆದರೆ ಇದಕ್ಕೆ ಅಕ್ಕಿ ರೊಟ್ಟಿ ಉತ್ತಮ ಕಾಂಬಿನೇಷನ್… ಹೀಗಾಗಿ ಅಕ್ಕಿ ರೊಟ್ಟಿ ಜೊತೆಗೆ ನೀವು ಖಾರವಾದ ಚಿಕನ್ ಮಸಾಲೆಯನ್ನು ಸೇವನೆ ಮಾಡುವ ಮೂಲಕ ಭಾನುವಾರದ ಬಾಡೂಟ ವನ್ನು ಎಂಜಾಯ್ ಮಾಡಬಹುದು

ಭಾನುವಾರ(Sunday) ಬಂತು ಅಂದರೆ, ನಾನ್ ವೆಜ್(Non-Veg) ಪ್ರಿಯರಿಗೆ ಹಬ್ಬ. ರಜೆ ದಿನ ಬೆಳ್ಳಂಬೆಳ್ಳಗೆ ಮಾಂಸದಂಗಡಿ ಮುಂದೆ ಕ್ಯೂ ನಿಂತು, ಬಿರಿಯಾನಿ(Biriyani) ಕನಸು(Dream) ಕಾಣುವುದು ಕಾಮನ್. ಮಾಂಸಾಹಾರಿಗಳಿಗೆ ತಮಗಿಷ್ಟವಾದ ಊಟ(Meal) ತಿನ್ನಲು ವಾರದ ಮಿತಿ ಇಲ್ಲದಿದ್ದರೂ ವೀಕೆಂಡ್​​​​​ನಲ್ಲಿ(Weekend) ತಮ್ಮ ಪ್ರೀತಿಪಾತ್ರರೊಂದಿಗೆ ಕುಳಿತು ವೆರೈಟಿ ಅಡುಗೆ(Food) ಮಾಡಿ ತಿಂದರೆ ಅದರ ಮಜಾನಾ ಬೇರೆ. ಹೀಗಾಗಿ ಹೆಚ್ಚಿನ ಜನರು ಭಾನುವಾರದ ಸಮಯದಲ್ಲಿ(Time) ಪ್ರೀತಿ ಪಾತ್ರರೊಂದಿಗೆ ನೆಚ್ಚಿನ ಹೋಟೆಲ್ಗಳಿಗೆ(Hotel) ಹೋಗಿ ವೆರೈಟಿ ವೆರೈಟಿ ಬಾಡೂಟ ಮಾಡಲು ಇಷ್ಟಪಡುತ್ತಾರೆ.. ಆದರೆ ಇನ್ನೂ ಕೆಲವರು ಮಾತ್ರ ಮನೆಯಲ್ಲಿಯೇ (Home)ಕುಳಿತು ರುಚಿರುಚಿಯಾಗಿ ವಿಭಿನ್ನವಾದ ಅಡುಗೆ ಗಳನ್ನು ತಯಾರಿಸಿ ತಮ್ಮ ಕುಟುಂಬದವರಿಗೂ(Family) ತಿನ್ನಿಸಿ ತಾವು ತಿಂದು ತಮ್ಮ ಭಾನುವಾರವನ್ನು ಮತ್ತಷ್ಟು ವಿಭಿನ್ನವಾಗಿಯೇ ಕಳೆಯಲು ಇಷ್ಟಪಡುತ್ತಾರೆ..

ಹೀಗಾಗಿ ಕೆಲವು ಮಾಂಸಹಾರಿ ಪ್ರಿಯರು ಹೋಟೆಲ್ ಗಳತ್ತ ಮುಖ ಮಾಡಿದರೆ ಇನ್ನು ಕೆಲವರು, ಮನೆಯಲ್ಲಿ ರುಚಿರುಚಿಯಾದ ಮಾಂಸಾಹಾರಿ ಖಾದ್ಯ ತಯಾರಿಸಲು ಮಾಂಸದ ಅಂಗಡಿಗಳತ್ತ ತೆರಳಿ ಫ್ರೆಶ್ ಆಗಿರುವ ಮಾಂಸ ತಂದು ಮನೆಯಲ್ಲಿ ಅಡುಗೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ಇಂದು ಮನೆಯಲ್ಲಿ ವಿಭಿನ್ನವಾದ ಅಡುಗೆ ಮಾಡಬೇಕು ಎಂದುಕೊಳ್ಳುತ್ತಿರುವವರು ಚಿಕನ್ ಸಾಂಬಾರ್ ಚಿಕನ್ ಬಿರಿಯಾನಿ ಬಿಟ್ಟು ಈ ವಾರ ಮನೆಯಲ್ಲಿ ರುಚಿ ರುಚಿಯಾದ ಖಾರವಾದ ಚಿಕನ್ ಮಸಾಲ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Places to Visit near Bangalore within 100 Km; ಬೆಂಗಳೂರಿನ ಸಮೀಪವಿರುವ ಪ್ರವಾಸಿ ಸ್ಥಳಗಳು

ಖಾರವಾದ ಚಿಕನ್ ಮಸಾಲ ಮಾಡಲು ಬೇಕಾಗುವ ಪದಾರ್ಥ

*ಚಿಕನ್ – ಅರ್ಧ ಕೆಜಿ
* ಕೆಂಪು ಮೆಣಸಿನಕಾಯಿ
* ಹಸಿಮೆಣಸಿನಕಾಯಿ
* ಪುದೀನಾ
* ಕೊತ್ತಂಬರಿ ಸೊಪ್ಪು
* ಈರುಳ್ಳಿ – 2
* ಟೊಮೆಟೊ – 2
* ಗೋಡಂಬಿ – 2 ಟೇಬಲ್ ಚಮಚ,
* ಅರಿಸಿಣ – 1 ಚಮಚ,
* ಅಡುಗೆಎಣ್ಣೆ- 2 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ದನಿಯಾ ಪುಡಿ- 1 ಚಮಚ
* ಗರಂಮಸಾಲ – 1 ಚಮಚ
* ಕಸೂರಿ ಮೇಥಿ- 1 ಚಮಚ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
* ಚಕ್ಕೆ ಲವಂಗ ಸ್ವಲ್ಪ

ಖಾರವಾದ ಚಿಕನ್ ಮಸಾಲ ಮಾಡುವ ವಿಧಾನ

ಮೊದಲಿಗೆ ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ ಟೊಮೆಟೊ-ಗೋಡಂಬಿ ಪುದೀನಾ ಕೊತ್ತಂಬರಿ ಸೊಪ್ಪು ಟೊಮೆಟೋ ಹಾಗೂ ಚಕ್ಕೆ ಲವಂಗ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಬಳಿಕ ಒಂದು ಬಾಣಲೆಯನ್ನು ಬಿಸಿಗಿಟ್ಟು 2ರಿಂದ 3 ಚಮಚ ಎಣ್ಣೆ ಹಾಕಿ ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಹಸಿವಾಸನೆ ಹೋಗುವವರೆಗೂ ಚೆನ್ನಾಗಿ ಬಾಡಿಸಿಕೊಳ್ಳಿ.

ಇದನ್ನೂ ಓದಿ: History of Chandrayaan; ಚಂದ್ರಯಾನ, ಭಾರತೀಯ ಚಂದ್ರನ ಬಾಹ್ಯಾಕಾಶ ಶೋಧಕಗಳ ಸರಣಿ

ಬಳಿಕ ಚೆನ್ನಾಗಿ ನೀರಿನಲ್ಲಿ ತೊಳೆದ ಚಿಕ್ಕಮ್ಮ ಸೇರಿಸಿ ಅದಕ್ಕೆ ಮಿಶ್ರಣ ಮಾಡಿ.. ನಂತರ ಚಿಟಿಕೆ ಅರಿಶಿನ ಉಪ್ಪು ಕೆಂಪು ಮೆಣಸಿನಪುಡಿ, ಕೊತ್ತಂಬರಿ ಪುಡಿ ಹಾಕಿ ಚಿಕನ್ ಚೆನ್ನಾಗಿ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡುತ್ತಾ ಹೋಗಿ. ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ.

ಕೊನೆಯಲ್ಲಿ ಗರಂಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು, ಅರ್ಧ ಲೋಟ ನೀರು ಸೇರಿಸಿದರೆ ರುಚಿಯಾದ ಚಿಕನ್ ಮಸಾಲ ಸವಿಯಲು ಸಿದ್ಧವಾಗುತ್ತದೆ.

ನೀವು ಅನ್ನದ ಜೊತೆಗೆ ಖಾರವಾದ ಚಿಕನ್ ಮಸಾಲೆಯನ್ನು ಸೇವನೆ ಮಾಡಬಹುದು. ಆದರೆ ಇದಕ್ಕೆ ಅಕ್ಕಿ ರೊಟ್ಟಿ ಉತ್ತಮ ಕಾಂಬಿನೇಷನ್… ಹೀಗಾಗಿ ಅಕ್ಕಿ ರೊಟ್ಟಿ ಜೊತೆಗೆ ನೀವು ಖಾರವಾದ ಚಿಕನ್ ಮಸಾಲೆಯನ್ನು ಸೇವನೆ ಮಾಡುವ ಮೂಲಕ ಭಾನುವಾರದ ಬಾಡೂಟ ವನ್ನು ಎಂಜಾಯ್ ಮಾಡಬಹುದು.

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!