Muddu Muddada girige – ಮುದ್ದು ಮುದ್ದಾದ ಗಿರಿಗೆ Mahadeshwara Song Lyrics
ಮುದ್ದು ಮುದ್ದಾದ ಗಿರಿಗೆ
ಮುದ್ದು ಮಲ್ಲಯ್ಯನ ಗಿರಿಗೆ
ಎದ್ದು ಬಂದಾರು ನೋಡಿರೋ
ಮಾದಯ್ಯನ ಗಿರಿಗೆ ಪರಿಸೇ
ತಂದಾರು ಕಾಣಿರೋ
ಮಾದಯ್ಯನ ಗಿರಿಗೆ ಪರಿಸೇ
ತಂದಾರು ಕಾಣಿರೋ
ಮುದ್ದು ಮುದ್ದಾದ ಗಿರಿಗೆ
ಮುದ್ದು ಮಲ್ಲಯ್ಯನ ಗಿರಿಗೆ
ಎದ್ದು ಬಂದಾರು ನೋಡಿರೋ
ಮಾದಯ್ಯನ ಗಿರಿಗೆ ಪರಿಸೇ
ತಂದಾರು ಕಾಣಿರೋ
ಏ.. ರಂಗ, ಓ.. ಲಿಂಗ,
ಹೊಡಿ ಗಾಂಜಾ
ಬಂ ಬಂ ಬಂ ಬಂ
ಶಂಭೋ ಶಂಕರ ಚಂದ್ರಶೇಖರ
ನಂಜುಂಡೇಶ್ವರ
ಮಲೆಮಾದೇಶ್ವರ ಶಂಭೋ…..
ಹುಣ್ಣಿಮೆಯ ಜಾತುರೆಗೆ
ಕಣಿವೆಯ ದಾಟುತ್ತಾ
|| ಮಾದಯ್ಯನ ಗಿರಿಗೆ ಪರಿಸೇ
ತಂದಾರೋ ಕಾಣಿರೋ
ಮಾದಯ್ಯನ ಗಿರಿಗೆ ಪರಿಸೇ
ತಂದಾರೋ ಕಾಣಿರೋ…||
ಕಾದಕಲ್ಲ ಮ್ಯಾಲೇ ಶಂಭೋ ಶಂಕರ
ಕಾದಕಲ್ಲ ಮ್ಯಾಲೇ ಈ ದುಲಿಯ
ಬುಟ್ಟುಕೊಂಡು ಪರಿಸೆಯ ನೋಡುತ್ತಾ
ಮಾದಯ್ಯ ಕುಂತಾವ್ನೆ ಗಿರಿಮ್ಯಾಲೆ
ಮಲೆಮಾದಯ್ಯ ಕುಂತಾವ್ನೆ ಗಿರಿಮ್ಯಾಲೆ
ಏಳು ಮಲೆಯಾ ನನ್ನೊಡೆಯಾ ಶಂಭೋ
ಬಾಳು ನಮಗೆ ನೀಡಯ್ಯಾ ಶಂಕರಾ…
ಏಳು ಮಲೆಯಾ ನನ್ನೊಡೆಯಾ
ಬಾಳು ನಮಗೆ ನೀಡಯ್ಯಾ
ಬಂಗಾರ ಬೆಳೆವಂತ ಭೂಮ್ಯಾಗೆ..
ನಮ್ಮ ಬಂಗಾರ ಬೆಳೆವಂತೆ ಭೂಮ್ಯಾಗೆ
ನಮ್ಮ ಬಂಗಾರ ಬೆಳೆವಂತೆ ಭೂಮ್ಯಾಗೆ
ಹತ್ತಲಾರೆ ನಿನ್ನ ಗಿರಿಯಾ….
ಸುತ್ತಲಾರೆ ನಿನ್ನ ಕಣಿಯಾ
ನಾ ಬಡವಾ ಬಂದಿವ್ನಿ,
ನಾ ಬಡವಾ ಬಂದಿವ್ನಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ
ನಿನ್ನ ಭಕ್ತಾನ ಮ್ಯಾಲೆ ದಯವಿರಲಿ