Karnataka Budget 2023: ಸಿದ್ದು ಬಜೆಟ್‌ನಲ್ಲಿ ಮದ್ಯದ ದರ ಏರಿಕೆ
Bangalore ; ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಿಗೆ ಟಾರ್ಗೆಟ್ ಹೆಚ್ಚಳ ಮಾಡಲಾಗಿದೆ. ಅಬಕಾರಿ ತೆರಿಗೆ ಹೆಚ್ಚಳವಾಗಿದೆ. ಸ್ಥಿರಾಸ್ಥಿಗಳ ಮಾರ್ಗಸೂಚಿ ದರ ಏರಿಕೆ ಆಗುವ ಸಾಧ್ಯತೆ ಇದೆ. ಜೊತೆಯಲ್ಲೇ ವಾಹನಗಳ ನೋಂದಣಿ ಶುಲ್ಕ ಕೂಡಾ ಏರಿಕೆ ಆಗಬಹುದಾಗಿದೆ. ಸಿದ್ದು ಬಜೆಟ್ ಪರಿಣಾಮದಿಂದ ಯಾವೆಲ್ಲಾ ಸರಕು – ಸೇವೆಗಳ ತೆರಿಗೆ ಏರಿಕೆ ಆಗಿದೆ? ಯಾವೆಲ್ಲಾ ತೆರಿಗೆ ಇಳಿಕೆ ಆಗಿದೆ? ಈ ಕುರಿತ ಡೀಟೇಲ್ಸ್ ಇಲ್ಲಿದೆ:
Click Here –
- ಅಬಕಾರಿ ತೆರಿಗೆ ಶೇ. 20ರಷ್ಟು ಹೆಚ್ಚಳ – ವಿಸ್ಕಿ, ಬ್ರಾಂದಿ, ರಮ್, ವೈನ್, ವೋಡ್ಕಾ, ವೈನ್ ಸೇರಿದಂತೆ ಎಲ್ಲಾ ರೀತಿಯ ಮದ್ಯದ ಬೆಲೆ ಏರಿಕೆ
- ಬಿಯರ್ ಮೇಲಿನ ಅಬಕಾರಿ ಸುಂಕ ಶೇ. 10ರಷ್ಟು ಹೆಚ್ಚಳ – ಏರಿಕೆ ಆಗಲಿದೆ ಬಿಯರ್ ದರ
- ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ
- ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಸರ್ಕಾರ ನಿರ್ಧಾರ
- ಮಾರ್ಗಸೂಚಿ ದರ ಏರಿಕೆ ಆದರೆ ಮುದ್ರಾಂಕ & ನೋಂದಣಿ ಶುಲ್ಕ ಏರಿಕೆ ಆಗುವ ಸಾಧ್ಯತೆ
- ನೋಂದಣಿ ಹಾಗೂ ಮುದ್ರಾಂಕ ಇಲಾಖೆಗೆ 2023-24ನೇ ಸಾಲಿನಲ್ಲಿ 25 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ
- ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನ
- ವಾಹನಗಳ ನೋಂದಣಿ ತೆರಿಗೆ ಪರಿಷ್ಕರಣೆ ಮಾಡಲು ತೀರ್ಮಾನ
- ಹೊಸ ವಾಹನಗಳ ನೋಂದಣಿ ಶುಲ್ಕ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ
- ಇವಿ ವಾಹನಗಳ ನೋಂದಣಿ ವೇಳೆ ಶುಲ್ಕ ರಿಯಾಯಿತಿ ಮಿಸ್ ಆಗುತ್ತಾ?
- ಸಾರಿಗೆ ಇಲಾಖೆಗೆ 11,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಿದೆ ಸಿದ್ದರಾಮಯ್ಯ ಸರ್ಕಾರ
- ವಾಣಿಜ್ಯ ತೆರಿಗೆ ಇಲಾಖೆಗೆ ಬರೋಬ್ಬರಿ 1,01,000 ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ಸಿದ್ದರಾಮಯ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳಿಗೆ 53 ಸಾವಿರ ಕೋಟಿ ರೂ. ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ. ವಾಣಿಜ್ಯ ತೆರಿಗೆ ಇಲಾಖೆಗೆ ಟಾರ್ಗೆಟ್ ಹೆಚ್ಚಳ ಮಾಡಲಾಗಿದೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆಯ ವಿವಿಧ ಸರಕು ಸೇವೆಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವ ಕಾರಣ ಅವುಗಳ ತೆರಿಗೆ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ಅಬಕಾರಿ ತೆರಿಗೆಯನ್ನು ಏರಿಸಿದೆ. ಇನ್ನು ಸ್ಥಿರಾಸ್ತಿಗಳ ಮಾರ್ಗಸೂಚಿ ದರ (Guidance Value) ಹೆಚ್ಚಾದರೆ ಸಹಜವಾಗಿಯೇ ಆಸ್ತಿಗಳ ನೋಂದಣಿ ಶುಲ್ಕ ಏರಲಿದೆ. ಇನ್ನು ವಾಹನಗಳ ನೋಂದಣಿ ತೆರಿಗೆ ಪರಿಷ್ಕರಣೆ ಮಾಡಿದರೆ ಇವಿ ವಾಹನ ಸೇರಿದಂತೆ ಎಲ್ಲ ರೀತಿಯ ಹೊಸ ವಾಹನಗಳ ನೋಂದಣಿ ಶುಲ್ಕ ಸಹಜವಾಗಿಯೇ ಏರಿಕೆ ಆಗಬಹುದಾಗಿದೆ.