ಒಂದು ದಳದ ಕಮಲದಲ್ಲಿ ಹೊಮ್ಮಿಬಂದ ಲಿಂಗವೇ
ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಎರಡು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ
ಆತ್ಮಜ್ಯೋತಿ ಲಿಂಗವೇ ಶಿವನರೂಪಿ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಮೂರು ದಳದ ಕಮಲದಲ್ಲಿ ಮೂಡಿಬಂದ ಲಿಂಗವೇ
ಮೂರು ಕಣ್ಣ ಲಿಂಗವೇ ಮುಕ್ಕೋಟಿ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ನಾಲ್ಕು ದಳದ ಕಮಲದಲ್ಲಿ ನಾಗಜ್ಯೋತಿ ಲಿಂಗವೇ
ನಾದಪ್ರಿಯ ಲಿಂಗವೇ ಭಕ್ತಪ್ರಿಯ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ
ಪಂಚಮುಖದ ಲಿಂಗವೇ ಪಂಚಪ್ರಾಣ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಆರು ದಳದ ಕಮಲದಲ್ಲಿ ಹಾರಿಬಂದ ಲಿಂಗವೇ
ಹರನ ಆತ್ಮ ಲಿಂಗವೇ ಅಡವಿಸ್ವಾಮಿ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಏಳು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ
ಏಳುಲೋಕ ಲಿಂಗವೇ ಏಳು ತತ್ತ್ವ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಎಂಟು ದಳದ ಕಮಲದಲ್ಲಿ ಘಂಟನಾದ ಲಿಂಗವೇ
ಅಷ್ಟದಿಕ್ಕು ಲಿಂಗವೇ ನಿನ್ನ ವಶವು ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಒಂಭತ್ತು ದಳದ ಕಮಲದಲ್ಲಿ ತುಂಬಿ ಬಂದ ಲಿಂಗವೇ
ಒಂಭತ್ತು ಗ್ರಹವು ಕಾಡದಂತೆ ಕಾಯೋ ನಮ್ಮ್ ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಹತ್ತು ದಳದ ಕಮಲದಲ್ಲಿ ಹತ್ತಿಬಂದ ಲಿಂಗವೇ
ಹತ್ತು ತಲೆಯ ರಾವಣಗೊಲಿದ ಕರುಣಾಳು ಲಿಂಗವೇ
ಓಂ ನಮಃ ಶಿವಾಯ ಓಂ ನಮಃ ಶಿವಾಯ