HomeNewsCulture2026 Pitru Paksha: ಶ್ರಾದ್ಧ ಆಚರಣೆಗೆ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು

2026 Pitru Paksha: ಶ್ರಾದ್ಧ ಆಚರಣೆಗೆ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು

ಪಿತೃ ಪಕ್ಷದಲ್ಲಿ ಶ್ರಾದ್ಧ, ತರ್ಪಣ ಮತ್ತು ಪಿಂಡದಾನ ನೆರವೇರಿಸಲು ದಕ್ಷಿಣ ಭಾರತದ ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಬಹುದು

2026 Pitru Paksha: ಶ್ರಾದ್ಧ ಆಚರಣೆಗೆ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು

ಪಿತೃಪಕ್ಷವು ನಮ್ಮ ಪಿತೃಗಳನ್ನು ಗೌರವಿಸಲು ಮೀಸಲಾದ ಪವಿತ್ರವಾದ 15 ದಿನಗಳ ಅವಧಿಯಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ಈ ಅವಧಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಈ ಅವಧಿಯಲ್ಲಿ, ಭಕ್ತರು ಕೃತಜ್ಞತೆ ಸಲ್ಲಿಸಲು, ಆಶೀರ್ವಾದ ಪಡೆಯಲು ಮತ್ತು ಮರಣ ಹೊಂದಿದ ಕುಟುಂಬದ ಸದಸ್ಯರ ಆತ್ಮಗಳಿಗೆ ಶಾಂತಿ ಸಿಗುವಂತೆ ಮಾಡಲು ಶ್ರಾದ್ಧ ವಿಧಿವಿಧಾನಗಳನ್ನು ಆಚರಿಸುತ್ತಾರೆ. ಶ್ರಾದ್ಧವನ್ನು ಮನೆಯಲ್ಲಿ ಅಥವಾ ಸ್ಥಳೀಯ ದೇವಾಲಯಗಳಲ್ಲಿ ನೆರವೇರಿಸಬಹುದಾದರೂ, ಕೆಲವು ನಿರ್ದಿಷ್ಟ ತೀರ್ಥಕ್ಷೇತ್ರಗಳಲ್ಲಿ ಶ್ರಾದ್ಧ ಆಚರಣೆಯನ್ನು ವಿಧಿ – ವಿಧಾನಗಳಂತೆ ಮಾಡುವುದು ಪರಿಣಾಮಕಾರಿಯಾಗಿರುತ್ತದೆ.

ಶ್ರದ್ಧೆ ಮತ್ತು ಸರಿಯಾದ ವಿಧಿವಿಧಾನಗಳೊಂದಿಗೆ ಶ್ರಾದ್ಧವನ್ನು ಎಲ್ಲಿ ಬೇಕಾದರೂ ನೆರವೇರಿಸಬಹುದು. ಆದರೆ, ಹಿಂದೂ ಧರ್ಮಗ್ರಂಥಗಳು ‘ಪಿತೃ ತೀರ್ಥಗಳು’ ಎಂದು ಕರೆಯಲ್ಪಡುವ ಕೆಲವು ಸ್ಥಳಗಳು ಪೂರ್ವಜರ ವಿಧಿಗಳಿಗೆ ವಿಶೇಷವಾಗಿ ಪವಿತ್ರವೆಂದು ಉಲ್ಲೇಖಿಸುತ್ತವೆ. ಈ ಸ್ಥಳಗಳು ನೇರವಾಗಿ ಪಿತೃಲೋಕದೊಂದಿಗೆ ಸಂಪರ್ಕ ಹೊಂದಿವೆ ಎಂದು ನಂಬಲಾಗಿದೆ, ಇದರಿಂದಾಗಿ ಈ ಸ್ಥಳಗಳಲ್ಲಿ ಮಾಡುವಂತಹ ಶ್ರಾದ್ಧ ಕಾರ್ಯಗಳು ನಮ್ಮ ಪಿತೃಗಳ ಆತ್ಮಕ್ಕೆ ಶೀಘ್ರದಲ್ಲೇ ಮೋಕ್ಷವನ್ನು ನೀಡುವುದು. ಪಿತೃ ಪಕ್ಷದ ಅವಧಿಯಲ್ಲಿ ಶ್ರಾದ್ಧ ಕಾರ್ಯಗಳನ್ನು ಮಾಡುವುದಕ್ಕೆ ಅನೇಕ ಪವಿತ್ರ ಧಾರ್ಮಿಕ ಸ್ಥಳಗಳಿರಬಹುದು. ಆದರೆ, ದಕ್ಷಿಣ ಭಾರತದ ಈ ಸ್ಥಳಗಳು ಅತ್ಯಂತ ಮಹತ್ವದ್ದಾಗಿದೆ.

Read this – Mahalaya Amavasya ; ಮಹಾಲಯ ಅಮಾವಾಸ್ಯೆ ಎಂದರೇನು? ಏಕೆ ಆಚರಿಸಲಾಗುತ್ತದೆ?

2026ರ ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಲು ದಕ್ಷಿಣ ಭಾರತದ ಪವಿತ್ರ ಧಾರ್ಮಿಕ ಸ್ಥಳಗಳಿವು:

1. ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ:

ಗೋಕರ್ಣದ ಶ್ರೀಮಹಬಲೇಶ್ವರ ಸ್ವಾಮಿ ದೇವಸ್ಥಾನವನ್ನು ದಕ್ಷಿಣ ಕಾಶಿಯೆಂದೂ ಕರೆಯಲಾಗುತ್ತದೆ. ಗೋಕರ್ಣದ ಈ ಒಂದು ದೇವಸ್ಥಾನವು ಕಾಶಿ ದೇವಸ್ಥಾನಕ್ಕೆ ಸಮನೆಂದು ಹೇಳಲಾಗುತ್ತದೆ. ಇಲ್ಲಿರುವ ಶಿವಲಿಂಗವು ಸ್ವಯಂಭು ಶಿವಲಿಂಗವಾದ್ದರಿಂದ ಇದನ್ನು ಶಿವನ ಆತ್ಮಲಿಂಗವಿರುವ ಸ್ಥಳವೆಂದು ಪರಿಗಣಿಸಲಾಗುವುದು. ದಕ್ಷಿಣ ಭಾರತದಲ್ಲಿರುವ ಪ್ರಮುಖ ಪಿಂಡದಾನ ಅಥವಾ ಶ್ರಾದ್ಧ ಸ್ಥಳಗಳಲ್ಲಿ ಇದು ಮುಖ್ಯವಾದ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ಸೇರಿದ ಅರ್ಚಕರು ಪ್ರತೀವರ್ಷ ಪಿತೃ ಪಕ್ಷದ ಸಮಯದಲ್ಲಿ ದೇವಸ್ಥಾನದ ಬಳಿ ಪಿಂಡದಾನ, ಶ್ರಾದ್ದ ಕಾರ್ಯಗಳನ್ನು ನೆರವೇರಿಸಿಕೊಡುತ್ತಾರೆ. ಮಹಾಬಲೇಶ್ವರ ದೇವಸ್ಥಾನವು ತ್ರಿಪಿಂಡಿ ಶ್ರಾದ್ಧವನ್ನು ಮಾಡಲು ಹೆಸರುವಾಸಿಯಾ ದೇವಸ್ಥಾನವಾಗಿದೆ.

2. ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮ:

ಪಿತೃ ಪಕ್ಷ ಆರಂಭವಾಗುತ್ತಿದ್ದಂತೆ ಇಲ್ಲಿ ಸಾವಿರಾರು ಕುಟುಂಬಗಳು ಶ್ರಾದ್ಧ, ಪಿಂಡದಾನ ಕಾರ್ಯವನ್ನು ಮಾಡಲು ಬರುತ್ತಾರೆ. ಕಾವೇರಿ, ಹೇಮಾವತಿ ಹಾಗೂ ಲೋಕಪಾವನಿ ಎನ್ನುವ 3 ಪ್ರಮುಖ ನದಿಗಳ ಸಂಗಮವು ಈ ಸ್ಥಳದಲ್ಲಿ ನಡೆಯುವುದರಿಂದ ಇದನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಈ ಒಂದು ಸಂಗಮದ ನೀರಿನಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆಯುವುದು ಎನ್ನುವ ನಂಬಿಕೆಯಿದೆ. ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಪ್ರತೀ ವರ್ಷ ಪಿತೃ ಪಕ್ಷದ ಅವಧಿಯಲ್ಲಿ ಜನರು ಪುರೋಹಿತರ ಸಲಹೆಯ ಮೇರೆಗೆ ಶ್ರಾದ್ಧ ಕಾರ್ಯವನ್ನು ಮಾಡುತ್ತಾರೆ.

Read this – Mahalaya Amavasya ; ಪೂರ್ವಜರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನ

3. ತಮಿಳುನಾಡಿನ ರಾಮೇಶ್ವರಂ ದೇವಾಲಯ:

ಇಲ್ಲಿ ಶಿವನನ್ನು ರಾಮನಾಥಸ್ವಾಮಿಯನ್ನಾಗಿ ಪೂಜಿಸಲಾಗುತ್ತದೆ. ರಾಮೇಶ್ವರಂ ದೇವಸ್ಥಾನದಲ್ಲಿ ರಾಮನು ರಾವಣನನ್ನು ಕೊಂದಿದ ಬ್ರಹ್ಮಹತ್ಯೆ ದೋಷದಿಂದ ಮುಕ್ತಿ ಪಡೆಯಲು ಪೂಜೆಯನ್ನು ಮಾಡಿದ್ದನು ಎಂದು ಹೇಳಲಾಗುತ್ತದೆ. ರಾಮೇಶ್ವರಂ ದೇವಸ್ಥಾನವು ರಕ್ಷಿಣ ಭಾರತದ ಪ್ರಮುಖ ಮೋಕ್ಷ ಸ್ಥಳಗಳಲ್ಲಿ ಒಂದಾಗಿದೆ. ಪಿತೃ ಪಕ್ಷದ ಅವಧಿಯಲ್ಲಿ ಜನರು ಈ ಒಂದು ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಆವರಣದಲ್ಲಿರುವ ಪವಿತ್ರವಾದ 22 ತೀರ್ಥ ಬಾವಿಗಳಲ್ಲಿ ಸ್ನಾನ ಮಾಡಿ ದೇವಾಲಯದ ಆವರಣ ಹಾಗೂ ಸಮುದ್ರ ತೀರದಲ್ಲಿ ತರ್ಪಣ ಮತ್ತು ಪಿತೃಕಾರ್ಯಗಳನ್ನು ನೆರವೇರಿಸುತ್ತಾರೆ.

 

ಗೋಕರ್ಣದ ಮಹಾಬಲೇಶ್ವರ, ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮ ಹಾಗೂ ತಮಿಳುನಾಡಿನ ರಾಮೇಶ್ವರಂ ದೇವಸ್ಥಾನವಲ್ಲದೇ, ಜನರು ಉಡುಪಿಯ ಕೆಲವೊಂದು ಸ್ಥಳಗಳಲ್ಲಿ ಹಾಗೂ ಬೆಂಗಳೂರಿನ ಕೆಲವೊಂದು ವೈದಿಕ ಸಭೆಗಳ ಮೂಲಕವೂ ಶ್ರಾದ್ಧ ಕಾರ್ಯವನ್ನು ಮಾಡುತ್ತಾರೆ. ಇವುಗಳು ದಕ್ಷಿಣ ಭಾರತದ ಪವಿತ್ರ ಧಾರ್ಮಿಕ ಸ್ಥಳಗಳಾದರೆ, ಉತ್ತರ ಭಾರತದಲ್ಲೂ ಪಿಂಡದಾನ, ಶ್ರಾದ್ಧ ಕಾರ್ಯವನ್ನು ನೆರವೇರಿಸಲು ಅನೇಕ ಧಾರ್ಮಿಕ ಸ್ಥಳಗಳಿವೆ.

Read this – Mahalaya Amavasya ; ಪಿತೃಗಳನ್ನು ಸ್ಮರಿಸುವ ಈ ದಿನದ ಮಹತ್ವವೇನು?

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments