ಶಿವನ ಅಂಶವಾದ ಚಂದ್ರ ಮತ್ತು ವಿಭೂತಿ
ಶಿವ ‘ಚಂದ್ರಧರ’ ಹೆಸರು ಪಡೆದದ್ದು ಹೇಗೆ?
ನೀವು ಶಿವನ ಚಿತ್ರವನ್ನು ನೋಡಿದಾಗ ಅವನ ತಲೆಯ ಮೇಲೆ ಚಂದ್ರನಿದ್ದಾನೆ ಎಂಬುವುದನ್ನು ಗಮನಿಸಿರುತ್ತೀರಿ. ಚಂದ್ರನು ಶಿವನ ಮುಕುಟ ಏರಿದ್ದು ಹೇಗೆ? ಇಲ್ಲಿದೆ ನೋಡಿ ಅದರ ಕಥೆ. ಚಂದ್ರನ ಪತ್ನಿಯಾದ ರೇವತಿಯು ದಕ್ಷ ಮಹಾರಾಜನ ಮಗಳು. ಚಂದ್ರನು ಆ ಸಮಯ ಪೂರ್ಣ ಚಂದ್ರನಾಗಿಯೇ ಇದ್ದ. ಅವನ ಸಾಮರ್ಥ್ಯದ ಬಗ್ಗೆ ಅವನಿಗೆ ಅಪಾರವಾದ ಅಹಂಕಾರವಿತ್ತು. ಈ ಎಲ್ಲಾ ಕಾರಣದಿಂದ ಅವನು ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ.
ಈ ವಿಷಯ ತಿಳಿದ ರೇವತಿಯ ತಂದೆ ದಕ್ಷನು ಚಂದ್ರನ ದೇಹ ಕ್ಷಯಿಸಿ, ಮೃತ್ಯು ಬರುವಂತೆ ಶಾಪ ನೀಡುತ್ತಾನೆ. ಹೀಗೆ ಶಾಪಕ್ಕೆ ತುತ್ತಾದ ಚಂದ್ರನು ಕ್ಷಯಿಸಲಾರಂಭಿಸುತ್ತಾನೆ. ಬ್ರಹ್ಮಾಂಡದ ಸಮತೋಲನ ಅಲ್ಲೋಲ ಕಲ್ಲೋಲವಾಗುತ್ತದೆ. ಪ್ರಳಯ, ಜ್ವಾಲಾಮುಖಿಗಳು ಎದ್ದೇಳುತ್ತವೆ. ಇದರಿಂದ ದೇವ-ದಾನವರು ಭಯಭೀತರಾಗುತ್ತಾರೆ. ತಮ್ಮ ಅಸ್ತಿತ್ವವನ್ನು ಉಳಿಸಲು ಅವರು ನಾರದರ ಮೊರೆ ಹೋಗುತ್ತಾರೆ.
Read full here : Shiva Tandava Stothram Full Lyrics – Kannada and English
ನಾರದ ಮುನಿಗಳು ನೇರವಾಗಿ ಈಶ್ವರನಲ್ಲಿ ತೆರಳಿ ಈ ಸಂಕಷ್ಟದಿಂದ ಬ್ರಹ್ಮಾಂಡವನ್ನು ರಕ್ಷಿಸುವಂತೆ ಕೇಳಿಕೊಳ್ಳುತ್ತಾರೆ. ಶಿವನು ಚಂದ್ರನ ಬಳಿಗೆ ಬಂದು ಪ್ರಾಣದಯೆಯನ್ನು ನೀಡುತ್ತಾರೆ. ಚಂದ್ರನೂ ಇನ್ನು ಮುಂದೆ ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ವಾಗ್ದಾನವನ್ನು ಶಿವನಿಗೆ ನೀಡುತ್ತಾನೆ. ಆದರೆ ದಕ್ಷನ ಶಾಪವು ಪೂರ್ಣ ರೀತಿಯಲ್ಲಿ ವಿಮೋಚನೆ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ಚಂದ್ರನು ಹದಿನೈದು ದಿನಕ್ಕೊಮ್ಮೆ ಕ್ಷಯಿಸಿ ಮತ್ತೆ ವೃದ್ಧಿಸುತ್ತಾನೆ. ಈ ಕಾರಣದಿಂದಲೇ ಅಮವಾಸ್ಯೆ ಮತ್ತು ಹುಣ್ಣಿಮೆಗಳು ಹುಟ್ಟಿಕೊಂಡವು. ಚಂದ್ರನಿಗೆ ದಕ್ಷನ ಶಾಪದಿಂದ ಭಾಗಶಃ ಮುಕ್ತಿದೊರೆತರೂ ಅವನ ಹೆದರಿಕೆ ಹೋಗಿರುವುದಿಲ್ಲ. ಅದಕ್ಕಾಗಿ ಈಶ್ವರನ ಬಳಿ ತನಗೆ ನೆಲೆ ನೀಡುವಂತೆ ಕೋರುತ್ತಾನೆ.
ಶಿವನು ಅವನಿಗೆ ತನ್ನ ಮುಡಿಯಲ್ಲಿ ಸ್ಥಾನ ನೀಡುತ್ತಾನೆ. ಶಿವನ ಮುಕುಟದ ಜಟೆಯಲ್ಲಿ ಚಂದ್ರನು ಇರುವುದನ್ನು ನೀವು ಗಮನಿಸ ಬಹುದಾಗಿದೆ. ಈ ಕಾರಣದಿಂದ ಶಿವನು ‘ಚಂದ್ರಧರ’ ಎಂದು ಕರೆಯಲ್ಪಡುತ್ತಾನೆ. (ಚಂದ್ರನ ಆಕಾರದಲ್ಲಿ ಬದಲಾವಣೆಗೆ ವೈಜ್ಞಾನಿಕ ಕಾರಣಗಳು ಬೇರೆಯೇ ಇದ್ದರೂ ನಮ್ಮ ಪೌರಾಣಿಕ ಮಹಿಮೆಯನ್ನು ನಾವು ಪ್ರತಿಪಾದಿಸಲೇ ಬೇಕಾಗುತ್ತದೆ.)
ಭೃಗು ಮುನಿಯ ಅಹಂಕಾರಕ್ಕೆ ಮದ್ದು
ಭೃಗು ಮುನಿ ಒಮ್ಮೆ ಸಾಕ್ಷಾತ್ಕಾರಕ್ಕಾಗಿ ಘೋರ ಅರಣ್ಯದಲ್ಲಿ ಭಯಂಕರ ತಪಸ್ಸನ್ನು ಮಾಡುತ್ತಿದ್ದ. ಅವನ ತಪಃ ಶಕ್ತಿಗೆ ಮೂರೂ ಲೋಕಗಳು ತಲ್ಲಣಗೊಂಡಿದ್ದವು. ಭೃಗು ಮುನಿ ಒಂದು ದಿನ ಹುಲ್ಲು ಕತ್ತರಿಸಲು ಹೋಗಿ ತನ್ನ ಕೈಬೆರಳನ್ನೇ ತುಂಡರಿಸಿಕೊಂಡ. ಆಗ ಆ ಸ್ಥಳದಿಂದ ರಕ್ತದ ಬದಲು ಮರದ ಕಾಂಡ ಕಡಿಯುವಾಗ ಒಸರುವ ದ್ರವ ಹೊರ ಬಂತು. ಇದರಿಂದ ಭೃಗು ಮುನಿಗೆ ತನ್ನ ತಪಸ್ಸು ಯಶಸ್ವಿಯಾಯಿತು. ತಾನು ದೈವತ್ವ ಪಡೆದೆನು ಎಂಬ ಅಹಂಕಾರ ಮನದಲ್ಲಿ ಮನೆಮಾಡಿತು. ಇವನ ಅಹಂಕಾರ ಶಿವನಿಗೆ ಗೊತ್ತಾಯಿತು. ಶಿವನು ಓರ್ವ ವೃದ್ಧನ ವೇಷ ಧರಿಸಿ ಭೃಗು ಮುನಿಯ ಬಳಿಗೆ ಬಂದ.
Read this: Women and Girls problems after marriage / – ಮದುವೆಯ ನಂತರ ಮಹಿಳೆಯರ / ಹುಡುಗಿಯರ ಸಮಸ್ಯೆಗಳು
‘ಮುನಿಗಳೇ, ನೀವು ಯಾಕೆ ಇಷ್ಟು ಸಂತಸದಿಂದಿರುವಿರಿ?’ ಎಂದು ಕೇಳಿದ. ಅದಕ್ಕೆ ಭೃಗು ಮುನಿ ತನ್ನ ತಪಸ್ಸಿನ ವಿಷಯ ತಿಳಿಸಿ, ಅದರ ಸಾಧನೆಯನ್ನು ವೃದ್ಧನಿಗೆ ವಿವರಿಸಿ ಹೇಳಿದ. ‘ಒಂದು ಮರವನ್ನು ಕತ್ತರಿಸಿ ಸುಟ್ಟರೆ ಅದು ಭಸ್ಮವಾಗುತ್ತದೆ. ಅದರಲ್ಲಿ ವಿಶೇಷವೇನಿದೆ? ಈ ವಿಷಯಕ್ಕೆ ಯಾಕೆ ಅಂಹಂಕಾರ?’ ಎಂದು ಹೇಳಿ ತನ್ನ ಬೆರಳನ್ನೇ ಕತ್ತರಿಸಿಕೊಂಡ. ವೃದ್ಧನ ವೇಷದಲ್ಲಿದ್ದ ಶಿವ ಕೈಬೆರಳಿಂದ ರಕ್ತದ ಬದಲು ಭಸ್ಮ (ವಿಭೂತಿ) ಹೊರಬರಲಾರಂಬಿಸಿತು.
ಇದನ್ನು ಕಂಡ ಭೃಗು ಮುನಿಗೆ ಜ್ಞಾನೋದಯವಾಯಿತು. ಈ ವೃದ್ಧ ಸಾಮಾನ್ಯನಲ್ಲ. ನನಗೆ ಬುದ್ಧಿ ಹೇಳಲು ಬಂದಿರುವ ಶಿವನೇ ಎಂದು ಮನವರಿಕೆಯಾಯಿತು. ಅವನ ಅಹಂಕಾರ ಇಳಿದು ಇಳಿದು ಹೋಯಿತು. ಶಿವನ ಬಳಿ ಅವನು ಕ್ಷಮೆಯಾಚಿಸುತ್ತಾನೆ. ಅಂದಿನಿಂದ ಆ ಭಸ್ಮವು ಶಿವನ ಅಂಶವೆಂದೇ ಪರಿಗಣಿಸಲಾಗುತ್ತದೆ.
Comment Your suggestions below
[wpforms id=”392″]