KSRTC, BMTC Fare Hike – ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್
ಕರ್ನಾಟಕದಲ್ಲಿ ಬಸ್ ದರ ಏರಿಕೆ ಬಹುತೇಕ ಖಚಿತ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಭಾರೀ ನಷ್ಟ ಅನುಭವಿಸುತ್ತಿವೆ. ಡೀಸೆಲ್ ದರ ಹೆಚ್ಚಳದಿಂದ ವಾರ್ಷಿಕ 8,000 ಕೋಟಿ ರೂ. ಹೊರೆ ಬಿದ್ದಿದೆ. ಅತುಲ್ ತಿವಾರಿ ಸಮಿತಿ ವರದಿ ಸಲ್ಲಿಸಿದ್ದು, ಸರ್ಕಾರ ಶೀಘ್ರದಲ್ಲೇ ದರ ಪರಿಷ್ಕರಣೆ ಮಾಡಲಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.
ಸಾರಿಗೆ ಸಚಿವ ಬೈರತಿ ಸುರೇಶ್ ಈ ಹಿಂದೆಯೇ ವಿಧಾನಸಭೆಯಲ್ಲಿ ಸಾರಿಗೆ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ ಎಂಬ ಮಾಹಿತಿಯನ್ನು ನೀಡಿದ್ದರು. ಆ ಕಾರಣದಿಂದ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಇದೀಗ ಬಸ್ ಪ್ರಯಾಣವೂ ಮತ್ತಷ್ಟು ದುಬಾರಿಯಾಗುವುದು ಬಹುತೇಕ ಖಚಿತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ದರ ಪರಿಷ್ಕರಣೆಯಾಗಲಿದೆ ಎಂದು ಬೈರತಿ ಸುರೇಶ್ ಸುಳಿವು ನೀಡಿದ್ದಾರೆ.

Read this – Bengaluru News Today ; ಸಂಚಾರ, ಹವಾಮಾನ, ಮೆಟ್ರೋ ಅಪ್ಡೇಟ್ಸ್
ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಹಾಗೂ ದರ ಪರಿಷ್ಕರಣೆ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ. ವರದಿ ಕೈಸೇರಿದ ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಸಚಿವ ಸಂಪುಟದ (Cabinet) ಅನುಮೋದನೆ ಪಡೆದು ನೂತನ ದರ ಜಾರಿಗೆ ತರಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ 4 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಇದರಿಂದ ಪ್ರತಿ ಲೀಟರ್ ಡೀಸೆಲ್ ಮೇಲಿನ ವೆಚ್ಚ 15 ರಿಂದ 16 ರೂ. ರಷ್ಟು ಏರಿಕೆಯಾಗಿದ್ದು, ನಾಲ್ಕೂ ಸಾರಿಗೆ ನಿಗಮಗಳಿಗೆ ವಾರ್ಷಿಕ ಸುಮಾರು 8,000 ಕೋಟಿಯಷ್ಟು ಬೃಹತ್ ಹೊರೆ ಬೀಳುತ್ತಿದೆ. ಜಾಗತಿಕ ಯುದ್ಧ ಮತ್ತು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ 7 ತಿಂಗಳುಗಳಲ್ಲಿ ಲೀಟರ್ ಡೀಸೆಲ್ ಬೆಲೆ 8 ರೂ. ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳಿಗೆ ತಿಂಗಳಿಗೆ 40 ಕೋಟಿ ರೂ. ಹಾಗೂ ವರ್ಷಕ್ಕೆ 480 ಕೋಟಿಯಷ್ಟು ಹೆಚ್ಚುವರಿ ನಷ್ಟ ಉಂಟಾಗುತ್ತಿದೆ. ಇಂಧನದ ಬೆಲೆ ಗಗನಕ್ಕೇರಿರುವುದರಿಂದ ದಿನನಿತ್ಯ ಬಸ್‌ಗಳಿಗೆ ಡೀಸೆಲ್ ಪೂರೈಸಲು ಮತ್ತು ಹಣ ಹೊಂದಿಸಲು ಸಾರಿಗೆ ನಿಗಮಗಳ ಅಧಿಕಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ 3 ವರ್ಷಗಳಲ್ಲಿ ನಾಲ್ಕೂ ನಿಗಮಗಳ ಭಾರಿ ನಷ್ಟದ ಆಘಾತಕಾರಿ ವರದಿ:
ಕಳೆದ ಮೂರು ವರ್ಷಗಳಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಸತತ ನಷ್ಟ ಅನುಭವಿಸುತ್ತಿವೆ. 2025-26 ನೇ ಸಾಲಿನಲ್ಲಿ ವೆಚ್ಚವು ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
2023-24 ನೇ ಸಾಲು:
ಆದಾಯ: 11,822.35 ಕೋಟಿ ರೂ.
ವೆಚ್ಚ: 13,177.35 ಕೋಟಿ ರೂ.
ಒಟ್ಟು ನಷ್ಟ: 1,354.48 ಕೋಟಿ ರೂ.
Read this – Doordarshan news anchor Sarla Maheshwari who passed away ; ಸರಳಾ ಮಹೇಶ್ವರಿ ನಿಧನ
2024-25 ನೇ ಸಾಲು:
ಆದಾಯ: 13,753 ಕೋಟಿ ರೂ.
ವೆಚ್ಚ: 14,595 ಕೋಟಿ ರೂ.
ಒಟ್ಟು ನಷ್ಟ: 842 ಕೋಟಿ ರೂ.
2025-26 ನೇ ಸಾಲು:
ಆದಾಯ: 14,991 ಕೋಟಿ ರೂ.
ವೆಚ್ಚ: 16,519 ಕೋಟಿ ರೂ.
ಒಟ್ಟು ನಷ್ಟ: 1,527 ಕೋಟಿ ರೂ.
(ಗಮನಿಸಿ: ಕಳೆದ ವರ್ಷವಷ್ಟೇ ಅಂದರೆ ಜನವರಿಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ 4 ನಿಗಮಗಳು ಟಿಕೆಟ್ ದರವನ್ನು 15% ರಷ್ಟು ಏರಿಕೆ ಮಾಡಿದ್ದವು).
Read this – Coconut at Main Door ; ಮನೆಯ ಮುಖ್ಯ ಬಾಗಿಲಿಗೆ ತೆಂಗಿನಕಾಯಿ ಕಟ್ಟುವುದು ಏಕೆ?
ಜನಸಾಮಾನ್ಯರಿಗೆ ತಟ್ಟಲಿದೆ ನೇರ ಬಿಸಿ:
ಅತುಲ್ ತಿವಾರಿ ಸಮಿತಿಯು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ 4 ನಿಗಮಗಳ ಕಚೇರಿ ಹಾಗೂ ಘಟಕಗಳಿಗೆ ಭೇಟಿ ನೀಡಿ ಸುದೀರ್ಘ ಅಧ್ಯಯನ ನಡೆಸಿದ್ದು, ಶೇಕಡಾವಾರು ದರ ಹೆಚ್ಚಳದ ಶಿಫಾರಸು ಸಿದ್ಧಪಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ವರದಿಗೆ ಅಂತಿಮ ಮುದ್ರೆ ಬಿದ್ದರೆ, ಈ ತಿಂಗಳಲ್ಲೇ ಪ್ರಯಾಣಿಕರ ಜೇಬಿಗೆ ನೇರ ಕತ್ತರಿ ಬೀಳುವುದು ಖಚಿತವಾಗಿದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


