HomeLyricsOora Kaayo Mutthaide song lyrics - ಊರ ಕಾಯೋ ಮುತೈದೆ ಯಲ್ಲಮ್ಮ ಯಲ್ಲಮ್ಮ

Oora Kaayo Mutthaide song lyrics – ಊರ ಕಾಯೋ ಮುತೈದೆ ಯಲ್ಲಮ್ಮ ಯಲ್ಲಮ್ಮ

ಯಲ್ಲಮ್ಮ ದೇವಿಯ ಭಕ್ತಿ ಮತ್ತು ಮಹಿಮೆಯನ್ನು ಸಾರುವ ಜನಪ್ರಿಯ ‘ಊರ ಕಾಯೋ ಮುತೈದೆ ಯಲ್ಲಮ್ಮ ಯಲ್ಲಮ್ಮ’ ಭಕ್ತಿಗೀತೆಯ ಸಾಹಿತ್ಯ ಇಲ್ಲಿದೆ.

Oora Kaayo Mutthaide song lyrics – ಊರ ಕಾಯೋ ಮುತೈದೆ ಯಲ್ಲಮ್ಮ ಯಲ್ಲಮ್ಮ

ಊರ ಕಾಯೋ ಮುತ್ತೈದೆ ಅಣ್ಣಮ್ಮ ಅಣ್ಣಮ್ಮ
ಬಾರಮ್ಮ ಅಣ್ಣಮ್ಮ

ಮಳೆಯ ಕಾಯೋ ಮುತೈದೆ ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ

ಕರೆದಾಗ ಮುತ್ತೈದೆ ಹೋಗದೇನೆ ಇರಬೋದೇ
ಬಾರಮ್ಮ ಹೋಗೋಣ ಕುಂಕುಮ ಕಾಯೋಣ
ಊರ ಕಾಯೋ ಮುತ್ತೈದೆ ಅಣ್ಣಮ್ಮ
ಅಣ್ಣಮ್ಮ ಬಾರಮ್ಮ ಅಣ್ಣಮ್ಮ
ಮಳೆಯ ಕಾಯೋ ಮುತ್ತೈದೆ ಮಾರಮ್ಮ ಮಾರಮ್ಮ
ಬಾರಮ್ಮ ಬಾರಮ್ಮ
ಬನ ಬನ ಬನ ಬನ
ಬನ ಬನ ಬನ ಬನ
ಬನ ಬನ ಬನ ಬನ
ಬನಶಂಕರಿ…….ಬಾ
ಅಂಬಾ ಅಂಬಾ ಅಂಬಾ
ಎಲ್ಲಮ್ಮ ಎಲ್ಲಮ್ಮ ಬಾರಮ್ಮ ಎಲ್ಲಮ್ಮ….ಅಂಬಾ
ದಿನ ಬೆಳಗಾಗಿ ಪ್ರತಿ ಮುತ್ತೈದೆ
ನಮ್ಮನ್ನು ತಾನೆ ನೆನಿತಾಳೆ
ಎದೆಯೊಳಗಾಗೋ ಕದನವನ್ನೆಲ್ಲ
ನಮಗೆ ತಾನೆ ಹೇಳುತಾಳೆ
ನಾರಿಯ ಕುಲವಿರದೆ ಗುಡಿಗಳಿಗೆ ಬೆಳಕಿಲ್ಲ
ಭಕ್ತರೇ ಇರದಿದ್ರೆ ದೈವಗಳ ಕುಲವಿಲ್ಲ
ಅರಿಶಿಣ ಕುಂಕುಮ ಹೂವು ಬಳೆ ಅಕ್ಷತೆ
ಉಡಿ ತುಂಬಿಕೊಳ್ಳೋಣ ತಾಳಿನ ಕಾಯೋಣ
ತಾಳಿ ಕಾಯೋ ಮುತ್ತೈದೆ ಎಲ್ಲಮ್ಮ ಎಲ್ಲಮ್ಮ
ಬಾರಮ್ಮ ಎಲ್ಲಮ್ಮ
ಹೊಸಿಲು ಕಾಯೋ ಮುತ್ತೈದೆ ಲಕ್ಕಮ್ಮ ಲಕ್ಕಮ್ಮ
ಬಾಮ್ಮ ಅಟ್ಟಿ ಲಕ್ಕಮ್ಮ

ವ್ರತಗಳ ಮೇಲೆ ವ್ರತಗಳ ಮಾಡಿ
ಪತಿವ್ರತೆಯಾಗಿ ಬಾಳುತಾಳೆ
ಕಲ್ಲೋ ಮಣ್ಣೋ ಮರವೋ ಮಟ್ಟೋ
ನಾವೆ ಎಂದು ಮುಗಿತಾಳೆ
ಅವಳ ಆ ನಂಬಿಕೆಯೇ ನಮ್ಮಗಳ ಉಸಿರಮ್ಮ
ಆ ನಂಬಿಕೆಯ ಉಳಿಸಿದರೆ ನಮಗೆ ತಾನೆ ಹೆಸರಮ್ಮ
ಕರೆದಾಗ ಮುತ್ತೈದೆ ಹೋಗದೇನೆ ಇರಬೋದೇ
ಬಾರಮ್ಮ ಹೋಗೋಣ ಅರಿಶಿಣ ಉಳಿಸೋಣ
ಊರ ಕಾಯೋ ಮುತ್ತೈದೆ ಅಣ್ಣಮ್ಮ ಅಣ್ಣಮ್ಮ
ಅಣ್ಣಮ್ಮ ಅಣ್ಣಮ್ಮ

ಮಳೆಯ ಕಾಯೋ ಮುತ್ತೈದೆ ಮಾರಮ್ಮ ಮಾರಮ್ಮ
ಮಾರಮ್ಮ ಮಾರಮ್ಮ

ತಾಳಿ ಕಾಯೋ ಮುತೈದೆ ಎಲ್ಲಮ್ಮ ಎಲ್ಲಮ್ಮ
ಎಲ್ಲಮ್ಮ ಎಲ್ಲಮ್ಮ
ಹೊಸಿಲು ಕಾಯೋ ಮುತ್ತೈದೆ ಅಮ್ಮ ಅಟ್ಟಿ ಲಕ್ಕಮ್ಮ
ಅಮ್ಮ ಅಟ್ಟಿ ಲಕ್ಕಮ್ಮ
ಕುಲವ ಕಾಯೋ ಮುತ್ತೈದೆ ಚೌಡಮ್ಮ ಚೌಡಮ್ಮ
ಚೌಡಮ್ಮ ಚೌಡಮ್ಮ
ಬಸಿರು ಕಾಯೋ ಮುತ್ತೈದೆ ಬೀರಮ್ಮ ಬೀರಮ್ಮ
ಬೀರಮ್ಮ ಬೀರಮ್ಮ
ಬಾಳ ಕಾಯೋ ಮುತ್ತೈದೆ ಕಾಳಮ್ಮ ಕಾಳಮ್ಮ
ಕಾಳಮ್ಮ ಕಾಳಮ್ಮ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments