ಆನುಮಲೆ ಜೇನುಮಲೆ ಗುಂಜುಮಲೆ ಗುಲಗಂಜಿಮಲೆ ಎಪ್ಪತ್ತೇಳುಮಲೆಯಲ್ಲಿ ನಲಿದು ನಾಟ್ಯವಾಡುವಂತ ಮುದ್ದು ಮಾದಯ್ಯನ ಪಾದಕ್ಕೆ ಒಂದು ಸಾರಿ ಉಘೇ ಎನ್ನಿ… ಉಘೇ….. ಊಘೇ
ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ.
ದೇವರಗುಡ್ಡರು
- ಕಂಸಾಳೆ ಮಲೆ ಮಹಾದೇಶ್ವರನ ಭಕ್ತರಾದ ದೇವರಗುಡ್ಡರು ಬಳಸುವಂತಹ ವಿಶಿಷ್ಟ ಬಗೆಯ ವಾದ್ಯ . ಮಾದೇಶ್ವರನ ಕಾವ್ಯವನ್ನು ಈ ಕಲಾವಿದರು ಹಾಡುವರು. ಇವರು ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ನೆಲೆಸಿರುವರು. ಕಥಾ ರೂಪದಲ್ಲಿ ಶಿವ ಮತ್ತು ಶರಣರ ಮಹಿಮೆಗಳನ್ನು ವಂಶಪಾರಂಪರ್ಯವಾಗಿ ಹೇಳುತ್ತಾ ಮುಂದುವರೆಸಿಕೊಂಡು ಬಂದಿರುವರು.
- ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ.
- ನಿತ್ಯದ ಅಂಗಿ, ಪಂಚೆ, ಹೆಗಲಿಗೆ ಜೋಳಿಗೆ, ಕೊರಳಿಗೆ ರುದ್ರಾಕ್ಷಿ, ಹಣೆಗೆ ವಿಭೂತಿಗಳಿರುತ್ತವೆ. ಈ ಕಲಾವಿದರಲ್ಲಿ ಒಬ್ಬ ಕಂಜರವನ್ನು ಹಿಡಿದಿರುತ್ತಾನೆ. ಇತರರು ಹಿಮ್ಮೆಳದವರು. ಹಾಡಿನ ಲಯಕ್ಕೆ ಅನುಗುಣವಾಗಿ ತಾಳದ ನುಡಿತವು ಉಂಟಾಗುತ್ತದೆ.
ಹೀಗಿನ ಸ೦ಪ್ರದಾಯ ನಮ್ಮ ಜನಾ೦ಗದಿ೦ದ ಎಲ್ಲವೂ ಮರೆಯಾಗುತ್ತಲಿದೆ,
Subscribe for Free and Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ