About Us

“ಕನ್ನಡ ಫೊಕ್ಸ್”( Kannada Folks)

ಭಾಷೆಗಳ ಬಗ್ಗೆ ತಿಳಿದಿದ್ದು ಸಂಶೋದನೆಯಿಂದ ಆದರೆ ಅದಕ್ಕೂ ಮುಂಚೆ ಸಾಕ್ಷಿ ಇಲ್ಲದಿದ್ದರೂ ಭಾಷೆ ಇತ್ತೆಂಬುದು ಸುಳ್ಳಾಗದು. ಸಂದಿ ಗೊಂದಿಯಲಿ ಹಳಸಿ ನಾರುತಿರೋ ಈ ಸಂಸ್ಕೃತಿಯ ನಡುವೆ ತನ್ನದೇ ಛಾಪು ಊಳಿಸಿಕೊಳ್ಳಲು ಶತ ಶತ ವಾಗಿ ಪ್ರಯತ್ನಿಸುತ್ತಿರುವ ಜಾನಪದ ತಳಹದಿಯ ಗಟ್ಟಿ ಮಾಡುವ ಪ್ರಯತ್ನ “ಕನ್ನಡ ಫೊಕ್ಸ್”( Kannada Folks).  

We are here to introduce one who forgot their own culture and tradition due to high concentration  on earning. And we are here to convey Kannada culture in same corporates way what our new generation expect.

ಜನಪದ ಕೇವಲ ನಾಟ್ಯ,ಕಥೆ,ಗೀತೆಯಲ್ಲ..! ಅದು ಪುಸ್ತಕದ ಹಂಗಿನಲಿಲ್ಲ,ಲಿಪಿಗೂ ತಿಳಿದಿಲ್ಲ ! ಏಕೆಂದರೆ ಮಾನವನ ಮಾತು ಲಿಪಿಗೂ ಮುಂಚೆ ಬಂದಿತಲ್ಲ ! ನೋಡಿ. ಹುಡುಕಿ, ಸಾದ್ಯವಾದರೆ ಸಹಕರಿಸಿ ! 

ಜಾನಪದ ಜೀವಂತವಾಗಿದೆ

ಕರ್ನಾಟಕದ ನಾನಾ ಬಾಗಗಳಲ್ಲಿ ಜಾನಪದ ಜೀವಂತವಾಗಿದೆ. ಎಷ್ಟೋ ಕಲಾ ಆರಾಧಿಸುವ ಜನರಿಗೆ ಜೀವ ನೀಡಿದೆ ಅದರಲ್ಲೂ ಹಬ್ಬ ಹರಿದಿನಗಳಲ್ಲಿ ವೈಭವ ಹೆಚ್ಚು. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ,ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ,ತನ್ನ ಭಕ್ತಿಗೊಂದು ರೂಪವನ್ನೂ -ಕಲೆ,ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ ‘ಜಾನಪದ’ಎನ್ನಿಸಿಕೊಂಡಿದೆ. ಜಾತಿ-ಕುಲ-ಧರ್ಮ ಮೀರಿದ ಈ ಭಾಷೆಯ ಪ್ರಭಾವ ಮನಸ್ಸಿನ ಮೇಲೆ ಹೆಚ್ಚು ಬೀರಿದ್ದಂತು ನಿಜ. ಅದೇ ಮಾತಿನಲ್ಲಿ ಬಾವನೆ ವ್ಯಕ್ತಪಡಿಸುವ ರೀತಿಯೇ ಜಾನಪದವಾಗಿದ್ದು ಈ ಪ್ರಭಾವಗಳಲೊಂದು.

ಹೆಜ್ಜೆಗುರುತುಗಳು!

Where does it come from?

ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ಹೂಮಾಲೆಯಂಥ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ,ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು,ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು,ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಇದು ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ ‘ಜಾನಪದ’ಎನ್ನಿಸಿಕೊಂಡಿದೆ.   ಜನಪದ ಕೇವಲ ನಾಟ್ಯ,ಕಥೆ,ಗೀತೆಯಲ್ಲ..! ಅದು ಪುಸ್ತಕದ ಹಂಗಿನಲಿಲ್ಲ,ಲಿಪಿಗೂ ತಿಳಿದಿಲ್ಲ ! ಏಕೆಂದರೆ ಮಾನವನ ಮಾತು ಲಿಪಿಗೂ ಮುಂಚೆ ಬಂದಿತಲ್ಲ ! ನೋಡಿ. ಹುಡುಕಿ, ಸಾದ್ಯವಾದರೆ ಸಹಕರಿಸಿ !