Welcome to Kannada Folks   Click to listen highlighted text! Welcome to Kannada Folks
HomeNewsSM Krishna Missed PM Position - Modi was in tough competition

SM Krishna Missed PM Position – Modi was in tough competition

Spread the love

SM Krishna: ಪ್ರಧಾನಿ ಹುದ್ದೆಯ ರೇಸ್​ನಲ್ಲಿದ್ದ ಎಸ್​ಎಂ ಕೃಷ್ಣ, ತಪ್ಪಿದ್ದು ಹೇಗೆ?

ಬಿಜೆಪಿಯ ಹಿರಿಯ ನಾಯಕ ಎಸ್​ಎಂ ಕೃಷ್ಣ ನಿಧನರಾಗಿದ್ದಾರೆ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಕೂಡ ಇದ್ದರು, ಎಸ್​ಎಂ ಕೃಷ್ಣ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದಲ್ಲಿ ಅವರಿಗಿದ್ದ ಆಸಕ್ತಿ, ಅವರು ಅಲಂಕರಿಸಿದ್ದ ಹುದ್ದೆಗಳು ಸೇರಿದಂತೆ ಇತರೆ ಕುತೂಹಲಕಾರಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ.

ದೇವೇಗೌಡರು ಮೊದಲ ಕನ್ನಡಿಗ ಪ್ರಧಾನಿ ಎನಿಸಿಕೊಂಡವರು, ಇಂಥದ್ದೇ ಅವಕಾಶ ಎಸ್​ಎಂ ಕೃಷ್ಣರಿಗೂ ಕೂಡ ಬಂದಿತ್ತು, ಆದರೆ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರ ಕಳೆದುಕೊಂಡು ಕೇಂದ್ರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್​ ಮುಂದೆ ಎರಡು ಅವಕಾಶಗಳಿತ್ತು. ಸೋನಿಯಾಗಾಂಧಿ ಪ್ರಧಾನಿ ಹುದ್ದೆಗೆ ಒಪ್ಪಲು ತಯಾರಿರಲಿಲ್ಲ. ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಮನಮೋಹನ್ ಸಿಂಗ್ ಜತೆಗೆ ಎಸ್​ಎಂ ಕೃಷ್ಣ ಹೆಸರೂ ಮುನ್ನೆಲೆಗೆ ಬಂದಿತ್ತು. ಈ ವಿಚಾರವನ್ನು ಖುದ್ದು ಮನಮೋಹನ್ ಸಿಂಗ್ ಅವರೇ ಎಸ್​ಎಂ ಕೃಷ್ಣ ಅವರಿಗೆ ತಿಳಿಸಿದ್ದರಂತೆ. ಇದನ್ನು ಅವ ಆತ್ಮಚರಿತ್ರೆಯಲ್ಲಿ ವಿವರಿಸಲಾಗಿದೆ.

Read this –  After a decade, Modi has finally embraced the prevailing political accord in India: disregarding the middle class.

ಈ ಬಗ್ಗೆ ಎಸ್​ಎಂ ಕೃಷ್ಣ ಅವರು ಅಷ್ಟು ಮಾತನಾಡದಿದ್ದರೂ ಹೀಗೊಂದು ಅವಕಾಶ ಬಂದಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಅನಿವಾರ್ಯ ಕಾರಣದಿಂದ ಎರಡನೇ ಪ್ರಧಾನಿ ಹುದ್ದೆ ಕೈತಪ್ಪಿತು, ಎಸ್​ಎಂ ಕೃಷ್ಣ ಅವರಿಗೆ ದೇಶದ ಆಡಳಿತಾತ್ಮಕ ಹುದ್ದೆಯಲ್ಲಿ ಇರುವ ಅವಕಾಶ ಕೈತಪ್ಪಿತ್ತು. ಆದರೆ ಇದಕ್ಕೆ ಸ್ಪಷ್ಟ ಕಾರಣ ಏನೆಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ ಇದಕ್ಕೆ ಸೋನಿಯಾ ಗಾಂಧಿ ಮಾತ್ರ ಉತ್ತರ ನೀಡಬಲ್ಲರು.Ex-Karnataka Chief Minister SM Krishna, Who Transformed Bengaluru, Dies At 92

ಪ್ರಧಾನಿ ಹುದ್ದೆ ಚರ್ಚೆಯಾದ ಬಳಿಕ ಕರ್ನಾಟಕದಲ್ಲಿ ರಾಜಕೀಯ ಚಿತ್ರಣ ಬದಲಾಗಿತ್ತು, ಜನರ ನಾಡಿ ಮಿಡಿತವನ್ನು ತಪ್ಪಾಗಿ ಅರ್ಥೈಸಿದ್ದ ಎಸ್​ಎಂ ಕೃಷ್ಣ ಲೋಕಸಭೆ ಚುನಾವಣೆ ಜತೆಗೆ ರಾಜ್ಯ ವಿಧಾನಸಭಾ ಚುನಾವಣೆಯನ್ನು ನಡೆಸಲು ವಿಧಾನಸಭೆಯನ್ನು ವಿಸರ್ಜನೆ ಮಾಡಿದ್ದರು.

ಆದರೆ ಕಾಂಗ್ರೆಸ್​ಗೆ ನಿರೀಕ್ಷಿತ ಸೀಟುಗಳು ಸಿಗಲಿಲ್ಲ, ಹಾಗೆಯೇ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿತು. ಯಾವುದೇ ಪಕ್ಷಕ್ಕೂ ಬಹುಮತ ದೊರೆಯಲಿಲ್ಲ, ಈ ಹಂತದಲ್ಲಿ ಕರ್ನಾಟಕವು ಸಮ್ಮಿಶ್ರ ಸರ್ಕಾರದತ್ತ ಮೊದಲ ಬಾರಿಗೆ ತಿರುಗಿ ನೋಡುವಂತಾಯಿತು. ಆಗ ಕಾಂಗ್ರೆಸ್​ನೊಂದಿಗೆ ಜೆಡಿಎಸ್ ಕೈಜೋಡಿಸಿತು.

Why is Ashok angry with the CM- Karnataka doing favor to Kerala

ಮುಖ್ಯಮಂತ್ರಿಯಾಗಿ ಮುಂದುವರೆಸಲು ಜೆಡಿಎಸ್ ಸಿದ್ಧವಿರಲಿಲ್ಲ

ಈ ಹಂತದಲ್ಲಿ ಎಸ್​ ಎಂ ಕೃಷ್ಣ ಒಕ್ಕಲಿಗ ನಾಯಕರಾಗಿರುವುದರಿಂದ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಲು ಜೆಡಿಎಸ್ ಸಿದ್ಧವಿರಲಿಲ್ಲ. ಹೀಗಾಗಿ ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಜೆಡಿಎಸ್ ಒತ್ತಾಯಿಸಿತ್ತು. ಆಗ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಎಸ್ ಎಂ ಕೃಷ್ಣ ಅವರನ್ನು ಸುಮ್ಮನಾಗಿಸಲು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಸುಮಾರು 4 ವರ್ಷಗಳ ಕಾಲ 2008ರವರೆಗೂ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು.

ರಾಜ್ಯಪಾಲರ ಹುದ್ದೆಗೆ ರಾಜೀನಾಮೆ

ಆದರೆ ಆಶ್ಚರ್ಯವೆನ್ನುವಂತೆ ರಾಜ್ಯಪಾಲರ ಹುದ್ದೆಗೆ ಏಕಾಏಕಿ ರಾಜೀನಾಮೆ ನೀಡಿದ ಎಸ್​ಎಂ ಕೃಷ್ಣ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದರು. ಆದರೆ ಅಷ್ಟರೊಳಗೆ ಕರ್ನಾಟಕದಲ್ಲಿ ಕಾಂಗ್ರೆಸ್​ನಲ್ಲಿ ಸಾಕಷ್ಟು ಬದಲಾವಣಗೆಯಾಗಿತ್ತು. ಸಿದ್ದರಾಮಯ್ಯ ಕಾಂಗ್ರೆಸ್​ ಸೇರಿದ್ದರಿಂದ ರಾಜ್ಯ ರಾಜಕೀಯ ಚಿತ್ರಣಗಳು ಬದಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ತೆಗೆದುಕೊಳ್ಳಲು ಮುಂದಾಗದ ಕಾಂಗ್ರೆಸ್​ ಎಸ್​ಎಂ ಕೃಷ್ಣ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ದಿತು. ಕೇಂದ್ರ ವಿದೇಶಾಂಗ ಸಚಿವರಾಗಿ 3 ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಆದರೆ ಅನಾರೋಗ್ಯ ಕಾರಣದಿಂದ ಅವರು ಆ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ, ಅವರ ಕೆಲವು ಭಾಷಣಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರಿಂದ, ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.

Pushpa 2: The Rule Movie Review : Allu Arjun’s brilliance  What you feel with Peelings

ರಾಜಕೀಯ ಜೀವನ ಅಂತ್ಯದತ್ತ

ಇದಾದ ಬಳಿಕ ಎಸ್​ಎಂ ಕೃಷ್ಣ ಅವರ ರಾಜಕೀಯ ಜೀವನ ಬಹುತೇಕ ಅಂತ್ಯದತ್ತ ಹೋಯಿತು ಅತ್ತ ರಾಷ್ಟ್ರ ರಾಜಕಾರಣದಲ್ಲೂ ಪ್ರಭಾವ ಉಳಿಯಲಿಲ್ಲ, ಇತ್ತ ಸಿದ್ದರಾಮಯ್ಯ ಹಾಗೂ ಇತರರ ಕಾರಣದಿಂದ ರಾಜ್ಯದಲ್ಲೂ ಅವರ ಪ್ರಭಾವ ಕುಗ್ಗುತ್ತಲೇ ಹೋಯಿತು.SM Krishna: The statesman who put Bengaluru on global IT map; envisioned development on lines of Singapore

ಇದು ಎಸ್​ಎಂಕೃಷ್ಣ ಅವರ ಮುನಿಸಿಗೆ ಕಾರಣವಾಗಿತ್ತು, ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೇಳಿಕೊಂಡಿದ್ದರೂ ಅದಕ್ಕೆ ಕಾಂಗ್ರೆಸ್​ನಲ್ಲಿ ಯಾವುದೇ ಮನ್ನಣೆ ದೊರೆಯಲಿಲ್ಲ. ಇದರಿಂದ ಸಾಕಷ್ಟು ಬೇಸರಗೊಂಡಿದ್ದ ಅವರು ನರೇಂದ್ರ ಮೋದಿ ಪ್ರಧಾನಿಯಾದ ಕೆಲವು ವರ್ಷಗಳ ಬಳಿಕ ಬಿಜೆಪಿಯತ್ತ ಮುಖ ಮಾಡಿದರು. ಎಸ್​ಎಂ ಕೃಷ್ಣ ಬಿಜೆಪಿ ಸೇರಿದ್ದು ರಾಜಕೀಯ ವಲಯದಲ್ಲೂ ಸಾಕಷ್ಟು ಟೀಕೆಗೆ ಕಾರಣವಾಯಿತು. ಆದರೆ ಅವರು ರಾಜಕೀಯದ ಕೊನೆಯ ಘಟ್ಟದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದರು.

ರಾಜಕೀಯ ಜೀವನ: ಎಸ್ ಎಂ ಕೃಷ್ಣ ಅವರು 1960 ರ ಸುಮಾರಿಗೆ ತಮ್ಮ ರಾಜಕೀಯ ಪಯಣ ಆರಂಭಿಸಿದರು. 1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದರು. ಇದಾದ ನಂತರ ಅವರು ಪ್ರಜಾ ಸೋಷಿಯಲಿಸ್ಟ್ ಪಕ್ಷವನ್ನು ಸೇರಿದರು ಮತ್ತು 1968 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದರು. ನಂತರ ಎಸ್‌ಎಂ ಕೃಷ್ಣ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಮತ್ತು 1971 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮರು ಚುನಾವಣೆಯಲ್ಲಿ ಗೆದ್ದರು.

1985ರಲ್ಲಿ ಎಸ್.ಎಂ.ಕೃಷ್ಣ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಅವರು 1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರು ಡಿಸೆಂಬರ್ 2004 ರಿಂದ ಮಾರ್ಚ್ 2008 ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಎಸ್ ಎಂ ಕೃಷ್ಣ ಅವರು ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಜನವರಿ 2023 ರಲ್ಲಿ, ಎಸ್ಎಂ ಕೃಷ್ಣ ಅವರು ಇನ್ನು ಮುಂದೆ ಸಕ್ರಿಯ ರಾಜಕೀಯದಲ್ಲಿ ಇರುವುದಿಲ್ಲ ಎಂದು ಘೋಷಿಸಿದರು.

ಕರ್ನಾಟಕದ ಮಂಡ್ಯದಿಂದ ಹಲವಾರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರು ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರ ಆಡಳಿತದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1983-84 ರ ನಡುವೆ ಇಂದಿರಾ ಗಾಂಧಿ ಮತ್ತು 1984-85 ರ ನಡುವೆ ರಾಜೀವ್ ಗಾಂಧಿಯವರ ಅವಧಿಯಲ್ಲಿ ಕೈಗಾರಿಕೆ ಮತ್ತು ಹಣಕಾಸು ರಾಜ್ಯಸಚಿವರಾದರು

Doctor Suggests Foods Diabetics Should Eat For Breakfast To Manage Blood Sugar

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!