ಕನ್ನಡ ಫೊಕ್ಸ್ ಮನರಂಜನೆ

ರಣಧೀರ ಕಂಠೀರವ – “ಯುವ” ರಣಧೀರ ಕಂಠೀರವ / ಮತ್ತೋಮ್ಮೆ ನಿಜ ಕನ್ನಡ ಪದಗಳು / ಇದು ತಾತನ ಟ್ರಿಕ್ಸ್ / ಮೊಮ್ಮಗನ ಶ್ರಮ

ಅಣ್ಣಾವ್ರಾ ಸಿನಿಮಾ ಜೀವನ ಶುರುವಾಗಿದ್ದು ಮದುವೆಯ ನಂತರ ಮತ್ತು ಸಿನಮಾಗೆ ಬರುವ ಮುಂಚೆ “ಮುತ್ತುರಾಜ” ಎಂಬುದು ಹೆಸರು. ಅದಾಗಲೇ ರಂಗಭೂಮಿಯ ಅಗಾಧ ಅನುಭವ ಮತ್ತು ಅಪ್ಪಾಜಿಯವರ ತಂದೆ, ತಾತ ರಂಗಕಲೆಯಲ್ಲಿ ನಿಪುಣರು.

ನಂತರ ಅವರು ನಟಿಸಿದ “ಬೇಡರ ಕಣ್ಣಪ್ಪ” ಐತಿಹಾಸಿಕ-ಪೌರಾಣಿಕ-ಭಕ್ತಿಪ್ರದಾನ ಚಿತ್ರ ಮತ್ತು ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ.

ಇದು ಹಳೆಯ ಕಥೆ ! ಇದನ್ನೇ ಹೋಲುವ ಇನ್ನೋಂದು ಕಥೆ

ಇವರಿಗೂ ಮದುವೆಯಾಗಿದೆ, ಮುಂಚಿನ ಹೆಸರು “ಗುರು”, ಇವರ ತಂದೆ ತಾತ ಕೂಡ ಅದ್ಭುತ ಕಲಾವಿದರು. ಮತ್ತು ಇವರು ಸಿನಿಮಾ ಗೆ ಬರಲು ಮೊದಲ ಆರಿಸಿದ ಚಿತ್ರ “ಯುವ ರಣಧೀರ ಕಂಠೀರವ” ಹಾಗೆಯೇ ಅವರು ಹೇಳುವಂತೆ ಇದು ಐತಿಹಾಸಿಕ – ಪೌರಾಣಿಕ ಚಿತ್ರ.

ಹೌದು ಇದು ತಾತ- ಮೊಮ್ಮಗನ ಹೋಲಿಕೆ ! ಇನ್ನೂ ತಾಳೆ ನೋಡಬೇಕೆಂದರೆ ಬೇಡರ ಕಣ್ಣಪ್ಪ ಅದಾಗಲೇ ಜನಪ್ರಿಯ ಕಥೆ ಮತ್ತು ನಾಟಕ – ರಣದೀರ ಕಂಠೀರವ ಕೂಡ ಅದ್ಭುತ ಕಥೆ ಮತ್ತು ಸಿನಿಮಾ, ಅಣ್ಣಾವ್ರೂ ಗಡ್ಡ ಕೂದಲು ಬಿಟ್ಟು ಮೈ ಹುರಿ ಬಿಟ್ಟ ಕೊಪಿಷ್ಟ ಪಾತ್ರ , ಈ ಯುವ ಅವರು ಕೂಡ ಗಡ್ಡ ಕೂದಲು ಬಿಟ್ಟು ಮೈ ಹುರಿ ಗೊಳಿಸಿ ಗೂಳಿಯಂತೆ ಕಾಣುತ್ತಾರೆ.

ಏನೇ ಆದರೂ ಈ ತಲೆಮಾರಿನಲ್ಲಿ ಐತಿಹಾಸಿಕ ಸಿನಿಮಾ ಮಾಡಿ ಗೆಲ್ಲಲು ಗುಂಡಿಗೆ ಇರಬೇಕು ! ಯುವ ರಾಜರಿಗೆ ಒಳ್ಳೆಯದಾಗಲಿ.


Leave a Reply

Your email address will not be published. Required fields are marked *