ಆಟ - ಪಾಠ

ದೀಪಾವಳಿ ಬಂದಾಗಲೆಲ್ಲ ನೆನಪಾಗುತ್ತಾಳೆ – ಮಾತೆ ಆಡದೆ ಹೋದ ಚೆಲುವೆ/ ಅರುಣನ ಮೊದಲ ಬೇಟಿ

ಅರುಣ ಎಂಟನೇ ತರಗತಿ “ಬಿ” ಸೆಕ್ಷನ್

ತುಂಬಾ ತರಲೆ,ತುಂಟ,ಮಾತಿನಲಿ ಬಂಟ. ಸ್ವಲ್ಪ ನಾಚಿಕೆ ಆದರೂ ಟೀಚರ್ ಗಳಿಗೆ ಇವನೋಬ್ಬ ಪೀಡೆ. ಆದರೂ ಎಲ್ಲರಿಗೂ ಇಷ್ಟ ಆಗೊ ಹುಡುಗ.

ಏಕೆಂದರೆ ಒದಿನಲ್ಲಿ ಮುಂದೆ ಇರೋದರ ಜೋತೆಗೆ ಎಲ್ಲರಮುಖದಲ್ಲೂ ನಗು ತರಿಸುವ ಮಹಾ ಮಹಿಮ.

ಹೋಳಿ ಹಬ್ಬಕ್ಕೆ ಬಣ್ಣ ಎರಚುವುದು, ಯಾಗಾದಿಲ್ಲಿ ಹೋಳಿಗೆ ಕದಿಯುವುದು, ದೀಪಾವಳಿಯಲ್ಲಿ ಪಠಾಕಿ ಹೋಡೆಯುವುದು ಮತ್ತು ಕ್ರಿಸ್ ಮಸ್ ಗೆ ಗಿಫ್ಟ್ ಬದಲಾಸುವುದು ಈ ಅರುಣನಿಗೆ ವಾಡಿಕೆಯ ಕೆಲಸ. ಅದೆಷ್ಟು ಬಾರಿ ಬುದ್ದಿ ಹೇಳಿದರೂ ಮತ್ತೆ ಅದೇ ಮಾಡುವ ಹುಡುಕು ಬುದ್ದಿಯವ !

ಅಂದು ದೀಪಾವಳಿಯ ಸಮಯ,  ಒಂದು ವಾರಕ್ಕೆ ಮುಂಚೆ ಅವನ ಬ್ಯಾಗ್ ಸೇರಿತ್ತು ಚುಟುಕು ಪಠಾಕಿಯ ಸರಮಾಲೆ. ಈ ಪಠಾಕಿಯ ವಿಷೇಶತೆ ಏನೆಂದರೆ ಇವು ಯಾರಿಗೂ ಹಾನಿ ಮಾಡದೆ ಜೋರಾದ ಶಬ್ದ ಮಾಡುತಿತ್ತು.

ಇದು ಓದಿ : ಒಂದು ಉಪ್ಪಿಟ್ಟಿನ ಕಥೆ… 1

ಶಾಲೆಯ ಗೇಟ್ ಬಳಿ ಹೋಡೆದು, ಬಸ್ ಸ್ಟಾಂಡ್ ಬಳಿ ತಮ್ಮ ಗೆಳೆಯರ ಗುಂಪಿಗೆ ಹೆದರಿಸುವ ಉಪಾಯ ಈ ಅರುಣನದಾಗಿತ್ತು.

ಮೊದಲೇ ಅಂದು ಕೊಂಡತೆ ಶಾಲೆಯ ಗೇಟ್ ಬಳಿ ಶಬ್ದ ಮಾಡಿಸಿ ಶಿಕ್ಷಕರ ಕಣ್ತಪ್ಪಿಸಿ ಓಡಿ ಬಂದ ಅರುಣನ ಮುಂದಿನ ಸರದಿ ಗೆಳೆಯರ ಗುಂಪು.

ಎಲ್ಲಾರು ಹೆದರಿ ಓಡಿದರು ಎಂದರೆ ಅಲ್ಲೊಬ್ಬರು ಕುಳಿತಿದ್ದ ಹಾಗೆ ಕಂಡಿತು ! 

ಅಂದುಕೊಂಡತೆ ಅರುಣ ಯಾರಿಗೂ ತಿಳಿಯದಂತೆ ನಿಧಾನವಾಗಿ ಗುಂಪಿನ ಮಧ್ಯೆ ಪಠಾಕಿ ಹಚ್ಚಿ ಓಡಿಹೋಗಿ ಮರೆಯಲ್ಲಿ ತಮಾಷೆ ನೋಡುತ್ತಾ ನಿಂತ!

ಆದರೆ ಆ ಶಬ್ದಕ್ಕೆ ಇಡೀ ಬಸ್ ಸ್ಟ್ಯಾಂಡ್  ಹೆದರಿ ಓಡಿ ಹೋದರು. ಅಂದುಕೊಂಡತ್ತೆ ಆಯಿತು ಎಂದು ಅರುಣ ಮರೆಯಿಂದ ಹೋರಗೆ ಬಂದರೆ ಎಲ್ಲರೂ ಓಡಿಹೋದರೂ ಯಾರೋ ಕುಳಿತಿರುವಂತೆ ಕಾಣಿಸಿತು. ಇದು ಅರುಣನಿಗೆ ಅಚ್ಚರಿ ಮತ್ತು ಕುತೂಹಲ ಎರೆಡು ಒಟ್ಟೊಟಿಗೆ ಆಯಿತು.

ಹೌದು ಅಲ್ಲಿ ಪುಸ್ತಕ ಒದುತ್ತಾ ಒಂದು ಹುಡುಗಿ ಕುಳಿತಿದ್ದರು. ಅರುಣನಿಗೆ ಕುತೂಹಲ ಏಕೆ ಈಕೆಗೆ ಪಠಾಕಿ ಭಯತರಲಿಲ್ಲ ಎಂದು ಮತ್ತು ಮಾತನಾಡಿಸಿ ಕೇಳುವ ಬಯಕೆ ಹಾಗೂ ಏನಾದರು ಬೈಯುವರೇ ಎಂಬ ಭಯ ಇರಲಿ ಒಂದು ಕ್ಷಮೆಕೇಳೇ ಬಿಡೊಣ

ಇಲ್ಲವಾದರೆ ನಾಳೆ ಶಾಲೆಯಲ್ಲಿ ಮತ್ತೊಂದು ಗ್ರಹಚಾರ ಎಂದು ಹೋಗುವಷ್ಟರಲ್ಲಿ ಬಸ್ ಬಂತು.. ಆದರು ಏನು ಆಗಿಲ್ಲ ಎಂಬ ನುಸುನಗು ಆ ಬುರ್ಕಾದ ಒಳಗಿದ್ದ ಕಣ್ಣುಗಳು ನೀಡಿದ್ದು ಅರುಣನ ಕುತೂಹಲ ಹೆಚ್ಚಿಸಿತು!……

ಮುಂದುವರಿಯುವುದು ….

[email-subscribers-form id=”1″]

 

ಒಂದು ಉಪ್ಪಿಟ್ಟಿನ ಕಥೆ – 2

ಕನ್ನಡ ಜಾನಪದ

Leave a Reply

Your email address will not be published. Required fields are marked *