ಆಟ - ಪಾಠ ಕನ್ನಡ ಫೊಕ್ಸ್

ತಾಳಿದವನು ಬಾಳಿಯಾನು : ಕೊಹ್ಲಿಯನ್ನು ಒಂದು ನಿರ್ಧಾರದಿಂದ ಅಳೆಯಬೇಡಿ / ಸೂರ್ಯ ಕುಮಾರ್ ಯಾದವ್ ಕಲಿಯುವು ತುಂಬಾ ಇದೆ / ಕ್ರೀಡಾ ಕಥೆಗಳು

ವಿರಾಟ್ ಸುಮ್ಮನೆ ನಾಯಕನಾಗಲಿಲ್ಲ, ದೋನಿ ಮುಂದೆಯೇ ಉತ್ತಮ ನಾಯಕ ಎಂದು ನಿರೂಪಿಸಿದ ಇವರು ಮದ್ಯಮ ಕ್ರಮಾಂಕ ದಾಂಡಿಗ ಮತ್ತು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. 

18 ರ ಒಳಗಿನ ತಂಡ , ದೆಲ್ಲಿ ರಣಜಿ ತಂಡ, ಅಂತರರಾಷ್ಟ್ರೀಯ ಏಕದಿನ, ಟೆಸ್ಟ್, ಚುಟುಕು 20-20, ಐಪಿಲ್ … ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ ಆಟಗಾರ. ಯಾವುದು ಸರಾಗವಾಗಿ ಕೈತಲುಪುದಿಲ್ಲ ಎಂಬಂತೆ ಸತತ ಸೋಲು, ನೋವು, ಟೀಕೆಗಳನ್ನು ಮೆಟ್ಟಿನಿಂತಮೇಲೆಯೇ ಸಾದನೆ ಎನಿಸಿದ್ದು.

ಕಳೆದ ಐಪಿಎಲ್ ನ ( 26-8-2020 ) ಹೋತ್ತಿನಲ್ಲಿ ಸುಮಾರು ಎಂಟ-ಒಂಬತ್ತಿನ ತಿಂಗಳ ನಂತರ ಭಾರತ ತನ್ನ ಆಸ್ಟ್ರೇಲಿಯದ ಪ್ರವಾಸ ತಂಡ ಘೊಷಿಸಿತ್ತು ಇದು ಬಿಸಿಸಿಐ ನ ತೀರ್ಮಾನ ಇಲ್ಲಿ ನಾಯಕ ಕೊಹ್ಲಿ ತಂಡಕ್ಕೆ ಬೇಕಿರುವ ಆಟಗಾರರ ಹೆಸರನ್ನು ಸಲಹೆ ನೀಡಬಹುದು ಆದರೆ ತೀರ್ಮಾನ ಬೊರ್ಡ್ ಗೆ ಬಿಟ್ಟದ್ದು.

ಅರ್ಹತೆ – ಅದೃಷ್ಟ ಸಮನಾಗಿ ಸಿಗುವುದಿಲ್ಲ . ಎಷ್ಟೊ ಯುವ ಪ್ರತಿಭಾವಂತ ಆಟಗಾರರು ಕಾಣಸಿಗುತ್ತಾರೆ ಆದರೆ ಎಲ್ಲಾರು ತಂಡದಲ್ಲಿ ಸ್ಥಾನ ಗಿಟ್ಟಿಸಲಾರರು. ಆದರೆ “ತಾಳಿದವನು ಬಾಳಿಯಾನು” ಎಂಬಂತೆ ಕೆ ಎಲ್ ರಾಹುಲ್ ಮತ್ತಿತರಿಗೆ ಸ್ಥಾನ ದೊರೆತಿದೆ.

ಆದರೆ ಮೊನ್ನೆ (28-10-202) ನಡೆದ ಮುಂಬಾಯಿ – ಬೆಂಗಳೂರು ಆಟದಲ್ಲಿ ಈ ಆಯ್ಕೆಯ ಪರಿಣಾಮ ಎದ್ದು ಕಾಣುತ್ತಿತು. ಸಂದ ಸೋಲನೆನೇ ಕಾರಣವಾಗಿಸಿ ಮತ್ತು ಗೆದ್ದ ಗೆಲುವನ್ನೇ ನೆಪವಾಗಿಸಿ ಕೊಹ್ಲಿಯನ್ನು ( ಸೂ.ಕು.ಯಾ ) ತಂಡದ ಆಯ್ಕೆಯ ಬಗ್ಗೆ ಟೀಕಿಸಿ, ಸೂರ್ಯ ಕುಮಾರ್ ನ ಆಟ ಮೇರೆಸುವುದು ಎಷ್ಟು ಸರಿ ?

ಆಟ ಉಮ್ಮಸ್ಸು ಹೆಚ್ಚಿಸಬೇಕು, ನಡವಳಿಕೆ ಯನ್ನು ಹಾಳುಮಾಡಿಕೊಳ್ಳಬಾರದು. ಈ ಘಟನೆಯಿಂದ ಕೇಲವರು ಕೊಹ್ಲಿಯ ನೇರ ಗುರಾಯಿಸುವುದ ಸರಿಯಿಲ್ಲ ಎಂದರೆ ಇನ್ನೂಕೆಲವರು ಸೂರ್ಯ ಇನ್ನು ಅವರಿಂದ ಕಲಿಯುವುದಿದೆ ಮತ್ತು ಕೇವಲ ಒಂದು ಒಳ್ಳೆ ಆಟದಿಂದ ಚಾರಿತ್ರ್ಯ ಗುರುತಿಸಲು ಸಾದ್ಯವಿಲ್ಲ ಹಾಗೂ ನಡವಕೆ ಸರಿ ಇಲ್ಲ ಎಂದು ಗೊಣಗುತ್ತಿದ್ದಾರೆ.

ಸತತ ಸೋಲು ಕಾಣುತ್ತಿರುವ ಬೆಂಗಳೂರು ತಂಡದ ನಾಯಕ ಕೊಹ್ಲಿಯ ತಂಡದ ಆಯ್ಕೆಯ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದೂ, ಮತ್ತೆ ತಂಡ ಲಯ ಕಂಡುಕೊಳ್ಳಬೇಕಾಗಿರುವುದ ಅನಿವಾರ್ಯವಾಗಿದೆ.

ಯಾವುದೇ ವ್ಯಕ್ತಿಯನ್ನು ಟೀಕಿಸುವ, ವ್ಯಂಗ್ಯ ಮಾಡುವ ಮುನ್ನ ಅತ ನಿಜವಾಗಲೂ ಅಡಂಬರವೇ ಅಥವಾ ಅತನ ನಡವಳಿಕೆಗೆ ಕಾರಣವಿದೆಯೇ ಎಂಬುದನ್ನು ತಿಳಿಯೂವುದು ಉತ್ತಮ

ಅದರಲ್ಲೂ ಕೊಹ್ಲಿ ಸಾದರಣವಲ್ಲ ಜಗತ್ತಿನ ಕ್ರಿಕೇಟ್ ಆಟಗಾರರಲ್ಲಿ ಇವರನ್ನು ಗುರುತಿಸುವ ರೀತಿ ವಿಭಿನ್ನ ಮತ್ತು ಸಾಧನೆಯು ಕೂಡ.

ಯುವಕರು ಅದರಲ್ಲೂ ಸೂರ್ಯ ರಲ್ಲಿ ಉತ್ಸಾಹವಿದೆ, ಒಳ್ಳೆಯ ಆಟದ ಜೊತೆಗೆ ತಾಳ್ಮೆ ಇದ್ದರೆ ಉತ್ತಮ.

 • KannadaKing Mayuraa /ಕದಂಬರು/ಸಾರ್ವಭೌಮರು
  ನನ್ನೂರ ರಾಜರು ಭಾಗ 2 ಕದಂಬರು (ಕ್ರಿ.ಶ. 345–525) ಭಾರತದ ಕರ್ನಾಟಕದ ಪ್ರಾಚೀನ ರಾಜಮನೆತನದವರಾಗಿದ್ದು, ಇಂದಿನ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕರ್ನಾಟಕ ಮತ್ತು ಕೊಂಕಣವನ್ನು ಬನವಾಸಿಯಿಂದ ಆಳಿದರು.                   ಈ ರಾಜ್ಯವನ್ನು ಮಯೂರಶರ್ಮ ಅವರು ಕ್ರಿ.ಪೂ. […]
 • ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !
  ಜನರು ಅಂದುಕೊಳ್ಳೊದು ಒಂದು ಪ್ರಾಶಾಂತ್ ನೀಲ್ ಮಾಡೊದೇ ಇನ್ನೋಂದು ! ತುಂಬಾ ಅಂದ್ರೆ ಸುಮಾರು ವರ್ಷಗಳಿಂದ ಕಾದ ಬಂಡೆ ಮೇಲೆ ನೀರು ಅಲ್ಲ ಜಲಪಾತ ಹರಿದ ಹಾಗೆ ಹಾಗಿದೆ ನಮ್ಮ ಯಶ್ ಮಾತು ಪ್ರಶಾಂತ್ ನೀಲ್ ಅವರು ಜೀವನ ಇವತ್ತು. ಏಕೆ ಈ ಪೀಠಿಕೆ ಅಂದ್ರೆ ಅದು ಬೇರೆ […]
 • ಕನ್ನಡದ ಕಟ್ಟಾಳುಗಳು/Karnataka Kings – ನನ್ನೂರ ರಾಜರು ಭಾಗ 1
      ನನ್ನೂರ ರಾಜರು ಭಾಗ 1  ಕ್ರಿ.ಪೂ 4 ಮತ್ತು 3 ನೇ ಶತಮಾನದಲ್ಲಿ ಕರ್ನಾಟಕವು ನಂದ ಮತ್ತು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ.ಪೂ .230 ರ ಸುಮಾರಿಗೆ ಚಿತ್ರದುರ್ಗದಲ್ಲಿನ ಬ್ರಹ್ಮಗಿರಿ ಶಾಸನಗಳು ಅಶೋಕ ಚಕ್ರವರ್ತಿ ಸೇರಿವೆ ಮತ್ತು ಹತ್ತಿರದ ಪ್ರದೇಶವನ್ನು ಇಸಿಲಾ ಎ0ದು ಹೇಳುತ್ತದೆ, ಇದರರ್ಥ […]
 • ಹಂಪಿ ಕಥೆಗಳು – ಅಧ್ಯಾಯ 2- ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ ನಗರವಾಗಿತ್ತು
  ಹಂಪಿ 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪಿಯು ತುಂಗಭದ್ರಾ ನದಿಯ ಸಮೀಪ ಸಮೃದ್ಧ, ಶ್ರೀಮಂತ ಮತ್ತು ಭವ್ಯವಾದ ನಗರವಾಗಿತ್ತು, ಹಲವಾರು ದೇವಾಲಯಗಳು, ಹೊಲಗಳು ಮತ್ತು ವ್ಯಾಪಾರ ಮಾರುಕಟ್ಟೆಗಳಿವೆ. ಕ್ರಿ.ಶ 1500 ರ ಹೊತ್ತಿಗೆ, ಹಂಪಿ-ವಿಜಯನಗರವು, ಬೀಜಿಂಗ್ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಾಜಧಾನಿ )  ನಂತರ […]
 • ಹಂಪಿ ಕಥೆಗಳು – ಅಧ್ಯಾಯ 1 : ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ- ಹಂಪೆ -ಪಂಪಾಪತಿ / ಇತಿಹಾಸದ ಪುರಾಣ ಕಥೆ
  ಹಂಪಿ ವಿಜಯನಗರ ಸಾಮ್ರಾಜ್ಯಕ್ಕೆ ಮುಂಚೆಯೇ; ಅಶೋಕನ ಶಿಲಾಶಾಸನಕ್ಕೆ ಪುರಾವೆಗಳಿವೆ, ಮತ್ತು ಇದನ್ನು ರಾಮಾಯಣ ಮತ್ತು ಹಿಂದೂ ಧರ್ಮದ ಪುರಾಣಗಳಲ್ಲಿ ಪಂಪಾ ದೇವಿ ತೀರ್ಥ ಕ್ಷೇತ್ರ ಎಂದು ಉಲ್ಲೇಖಿಸಲಾಗಿದೆ. ಹಂಪಿ – ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ, ಕಿಷ್ಕಿಂಧ-ಕ್ಷೇತ್ರ ಅಥವಾ ಭಾಸ್ಕರ-ಕ್ಷೇತ್ರ ಎಂದು ಕರೆಯಲ್ಪಡುತ್ತದೆ-ಹಿಂದೂ ಧರ್ಮಶಾಸ್ತ್ರದಲ್ಲಿ ಪಾರ್ವತಿ ದೇವಿಯ ಮತ್ತೊಂದು ಹೆಸರಾದ ಪಂಪಾದಿಂದ […]

Leave a Reply

Your email address will not be published. Required fields are marked *