ಕನ್ನಡ ಫೊಕ್ಸ್ ಜನಪದ

ಜನಪದ ಕಂಡ ಪಂಗಡಗಳು – ದೊಡ್ಡಾಟ – ಯಕ್ಷಗಾನ – ಬಯಲಾಟ / ಮರೆಯಾಗುತ್ತಿರುವ ಕಲೆಗಳು – 1

ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.

ಆದರೆ ಜನಪದ ವೈಭವದ ಕಾಲವೂ ಒಂದಿತ್ತು, ಆ ದಿನಗಳಲ್ಲಿ ಅದೇ ಒಂದು ಪಂಗಡ,ಧರ್ಮವಾಗಿ ಬೇಳೆದಿತ್ತು. ಕಲೆಯ ಕಾಲಿಗೆ ಬಿದ್ದು ಗೌರವಿಸುವ ಕಾಲ ಅದಾಗಿತ್ತು. ರಾಜಾದಿರಾಜರಿಂದ ಕಡು ಬಡವನವರೆಗೂ ಅದನ್ನು ಕಲಿಯುವ ತವಕ ಇತ್ತು ಹಾಗಾದರೆ ಅವೆಲ್ಲ ಯಾವುದಾಗಿತ್ತು ಮತ್ತು ಇಂದು ಬೀದಿ ದೋಂಬರಾಟ ವಾಗಲು ಕಾರಣವೇನು ? ಮುಂದೆ ಓದಿ

ದೊಡ್ಡಾಟ

ಹೌದು! ಇಂದು ಸುಣ್ಣದ ಗೋಡೆಯಂತೆ ಮಾಯ ವಾಗುತ್ತಿದೆ. ಒಂದು ಕಾಲದಲ್ಲಿ ಊರಿಗೆ ಊರೇ ಈ ದೊಡ್ಡಾಟಕ್ಕೆ ಕಾದು ಕುಳಿತು ಹಳೆ ಕಥೆಗಳ ಚಿತ್ರಣ ಕಂಡುಕೊಂಡ ವೈಭವ ಈ ಕಲೆಗಿತ್ತು.

ಈ ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ ‘ಹಂದರಗಂಬ’ವೊಂದನ್ನು ನಿಲ್ಲಿಸುತ್ತಾರೆ. ಪೌರಾಣಿಕ ಪ್ರಸಂಗಗಳನ್ನು ಹೊಂದುವ ಈ ಆಟ ರಾತ್ರಿಯೆಲ್ಲಾ ನಡೆದು ಸೂರ್ಯೋ ಉಯದ ವೇಳೆಗೆ ಮುಕ್ತಾಯವಾಗುತ್ತದೆ. ಹಾಗಾಗಿ ಸುರಕ್ಷಿತ ಜಾಗ ಮುಖ್ಯವಾಗುತ್ತದೆ .

ಜನಗಳನ್ನು ಸೆಳೆಯುವಂತ ಮಾತು ಚಾತುರ್ಯ, ಪಾತ್ರ ಹೋಲುವಂತ ಬಣ್ಣ ಮತ್ತು ಮಂಟಪ ಈ ದೊಡ್ಡಾಟಕ್ಕೆ ಬಲು ಮುಖ್ಯ ವಾಗುತ್ತದೆ.

ಈ ಆಟದಲ್ಲಿ ಕೃಷ್ಣ – ಅರ್ಜುನ ಒಳಗೊಂಡು ರಾಮ, ಲಕ್ಷ್ಮಣ, ಈಶ್ವರ , ಪಾರ್ವತಿ ಪಾತ್ರದಂತೆ ಕುರುಕ್ಷೇತ್ರ , ಕೃಷ್ಣಸಂಧಾನ, ಪುಷ್ಪಹರಣ,ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ ,ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗದ್ದು, ವಾಲಿ-ಸುಗ್ರೀವರ ಕಾಳಗದ್ದು, ದ್ರೌಪದೀ ವಸ್ತ್ರಾಪ-ಹರಣ, ರತಿ-ಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ, ರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರ ಕಾಳಗ, ಭೀಷ್ಮ – ಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯರು, ಸತ್ಯ – ಹರಿಶ್ಚಂದ್ರ, ಇಂದ್ರಜಿತು ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ , ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ ಹೀಗೆ ಅನೇಕ ಪಾತ್ರ ಪರಿಚಯ ತಿಳಿಸಿಕೊಟ್ಟ ಸಿಂಹ ಪಾಲು ಈ ದೊಡ್ಡಾಟದ್ದು.

ಕಾಲ ಬದಲಾಗುತ್ತಿದೆ, ಬಣ ಮಾಸುತ್ತಿದೆ, ಪೀಳಿಗೆ ಬದಲಾಗಿ ಆಸಕ್ತಿ ಬೇರೆಡೆಗೆ ವಾಲುತ್ತಾ ಇಂತಹ ಕಲೆಗಳನ್ನು ಕಾಣುವುದು ಕಷ್ಟ.

ಆದರು ಇದನ್ನು ಆರಾಧ್ಯ ದೈವದಂತೆ ಪೂಜಿಸುತ್ತಾ, ಪೂರ್ವಜರ ಕಲೆಯನ್ನು ಪರಗತ ಮಾಡಿಕೊಂಡ ಪಂಗಡ ನಮ್ಮಲ್ಲೀ ಈಗಲೂ ಸಿಗುತ್ತಾರೆ ಆದರೆ ಅವರ ಸತ್ಕಾರ ತುಂಬಾ ಕಡಿಮೆ .. ಕಲೆಗಳನ್ನು ಬೆಳೆಸಿ

ಮುಂದೆ ಯಕ್ಷಗಾನ ತಿಳಿಯೋಣ…..

 • KannadaKing Mayuraa /ಕದಂಬರು/ಸಾರ್ವಭೌಮರು
  ನನ್ನೂರ ರಾಜರು ಭಾಗ 2 ಕದಂಬರು (ಕ್ರಿ.ಶ. 345–525) ಭಾರತದ ಕರ್ನಾಟಕದ ಪ್ರಾಚೀನ ರಾಜಮನೆತನದವರಾಗಿದ್ದು, ಇಂದಿನ ಉತ್ತರ ಕನ್ನಡ ಜಿಲ್ಲೆಯ ಉತ್ತರ ಕರ್ನಾಟಕ ಮತ್ತು ಕೊಂಕಣವನ್ನು ಬನವಾಸಿಯಿಂದ ಆಳಿದರು.                   ಈ ರಾಜ್ಯವನ್ನು ಮಯೂರಶರ್ಮ ಅವರು […]
 • ಕೆಜಿಎಫ್ 2 ನಾವು- ನೀವು ಅಂದುಕೊಂಡಂತೆ ಖಂಡಿತ ಇರುವುದಿಲ್ಲ !
  ಜನರು ಅಂದುಕೊಳ್ಳೊದು ಒಂದು ಪ್ರಾಶಾಂತ್ ನೀಲ್ ಮಾಡೊದೇ ಇನ್ನೋಂದು ! ತುಂಬಾ ಅಂದ್ರೆ ಸುಮಾರು ವರ್ಷಗಳಿಂದ ಕಾದ ಬಂಡೆ ಮೇಲೆ ನೀರು ಅಲ್ಲ ಜಲಪಾತ ಹರಿದ ಹಾಗೆ ಹಾಗಿದೆ ನಮ್ಮ ಯಶ್ ಮಾತು ಪ್ರಶಾಂತ್ ನೀಲ್ ಅವರು ಜೀವನ ಇವತ್ತು. ಏಕೆ ಈ ಪೀಠಿಕೆ ಅಂದ್ರೆ ಅದು […]
 • ಕನ್ನಡದ ಕಟ್ಟಾಳುಗಳು/Karnataka Kings – ನನ್ನೂರ ರಾಜರು ಭಾಗ 1
      ನನ್ನೂರ ರಾಜರು ಭಾಗ 1  ಕ್ರಿ.ಪೂ 4 ಮತ್ತು 3 ನೇ ಶತಮಾನದಲ್ಲಿ ಕರ್ನಾಟಕವು ನಂದ ಮತ್ತು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ.ಪೂ .230 ರ ಸುಮಾರಿಗೆ ಚಿತ್ರದುರ್ಗದಲ್ಲಿನ ಬ್ರಹ್ಮಗಿರಿ ಶಾಸನಗಳು ಅಶೋಕ ಚಕ್ರವರ್ತಿ ಸೇರಿವೆ ಮತ್ತು ಹತ್ತಿರದ ಪ್ರದೇಶವನ್ನು ಇಸಿಲಾ ಎ0ದು ಹೇಳುತ್ತದೆ, […]
 • ಹಂಪಿ ಕಥೆಗಳು – ಅಧ್ಯಾಯ 2- ವಿಶ್ವದ ಎರಡನೇ ಅತಿದೊಡ್ಡ ಮಧ್ಯಕಾಲೀನ ಯುಗದ ನಗರವಾಗಿತ್ತು
  ಹಂಪಿ 14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪಿಯು ತುಂಗಭದ್ರಾ ನದಿಯ ಸಮೀಪ ಸಮೃದ್ಧ, ಶ್ರೀಮಂತ ಮತ್ತು ಭವ್ಯವಾದ ನಗರವಾಗಿತ್ತು, ಹಲವಾರು ದೇವಾಲಯಗಳು, ಹೊಲಗಳು ಮತ್ತು ವ್ಯಾಪಾರ ಮಾರುಕಟ್ಟೆಗಳಿವೆ. ಕ್ರಿ.ಶ 1500 ರ ಹೊತ್ತಿಗೆ, ಹಂಪಿ-ವಿಜಯನಗರವು, ಬೀಜಿಂಗ್ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಾಜಧಾನಿ )  […]
 • ಹಂಪಿ ಕಥೆಗಳು – ಅಧ್ಯಾಯ 1 : ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ- ಹಂಪೆ -ಪಂಪಾಪತಿ / ಇತಿಹಾಸದ ಪುರಾಣ ಕಥೆ
  ಹಂಪಿ ವಿಜಯನಗರ ಸಾಮ್ರಾಜ್ಯಕ್ಕೆ ಮುಂಚೆಯೇ; ಅಶೋಕನ ಶಿಲಾಶಾಸನಕ್ಕೆ ಪುರಾವೆಗಳಿವೆ, ಮತ್ತು ಇದನ್ನು ರಾಮಾಯಣ ಮತ್ತು ಹಿಂದೂ ಧರ್ಮದ ಪುರಾಣಗಳಲ್ಲಿ ಪಂಪಾ ದೇವಿ ತೀರ್ಥ ಕ್ಷೇತ್ರ ಎಂದು ಉಲ್ಲೇಖಿಸಲಾಗಿದೆ. ಹಂಪಿ – ಸಾಂಪ್ರದಾಯಿಕವಾಗಿ ಪಂಪ-ಕ್ಷೇತ್ರ, ಕಿಷ್ಕಿಂಧ-ಕ್ಷೇತ್ರ ಅಥವಾ ಭಾಸ್ಕರ-ಕ್ಷೇತ್ರ ಎಂದು ಕರೆಯಲ್ಪಡುತ್ತದೆ-ಹಿಂದೂ ಧರ್ಮಶಾಸ್ತ್ರದಲ್ಲಿ ಪಾರ್ವತಿ ದೇವಿಯ ಮತ್ತೊಂದು ಹೆಸರಾದ […]

One Reply to “ಜನಪದ ಕಂಡ ಪಂಗಡಗಳು – ದೊಡ್ಡಾಟ – ಯಕ್ಷಗಾನ – ಬಯಲಾಟ / ಮರೆಯಾಗುತ್ತಿರುವ ಕಲೆಗಳು – 1

Leave a Reply

Your email address will not be published. Required fields are marked *