ಜನಪದ

ಕರಡಿ ಕುಣಿತ – ಕೊರುಗುವ ಮನುಜನ ಮನೆ ಕಾಯುತ ಮಲುಗುವ ಜಾಂಬುವಂತ/ ಕಥೆ ಅರ್ಧಕ್ಕೆ ನಿಂತ ವ್ಯಥೆ !

ಹಾ ಈ ಹೆಸರು ಕೇಳಿದಾ ತಕ್ಷಣ ನಮಗೆ ಬೇಂದ್ರೆಯವರ

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.

ಎಂಬ ಕರಡಿ ಕುಣಿತ ಪದ್ಯದ ಸಾಲು ನೆನಪಾಗೊದು ಸಹಜ ಆದರೆ ಇದು ಬೇರೆಯದ್ದೇ ಕಥೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕರಡಿ ಸಾಕುವುದು ಹಾಗೂ ಪಳಗಿಸುವುದು ಶಿಕ್ಷಾರ್ಹ ಅಪರಾಧ.ಆದರೆ ಸುಮಾರು ವರ್ಷಗಳ ಹಿಂದೆ ಪಾರಂರಿ ಜನಪಂಗಡ ಇದನ್ನೆ ತಮ್ಮ ಕುಲ ಕಸುಬಾಗಿಸಿಕೊಂಡಿದ್ದರು.

!

ಆಗ ಊರಿಂದ ಊರಿಗೆ ಅಲೆಯುತ್ತಾ, “ಬನ್ನಿ ರಾಮರ ಭಂಟ, ಕೃಷ್ಣ-ಹನುಮರ ನೆಂಟ, ಬೆದರಿಕೆ.ಭಯ ಬಿಟ್ಟು ಧೈರ್ಯ ನೀಡೊ ಜಾಂಬವಂತ ಬಂದವನವ್ವ ” ಎಂದು ಹಾಡುತ್ತಾ ಬೀದಿ-ಬೀದಿಗೆ ಬಂದು ಕೂಗಿದಾಗ ಓಡುತ್ತಾ ಗುಂಪು ಕಟ್ಟಿ ನಿಂತು, ತಾಯತ ಕಟ್ಟಿಸಿಕೊಳ್ಳುತ್ತಿದವರು ನಾವು.

ನಾನೇಕೆ ಕಲಿಯಬೇಕು ಕನ್ನಡ ? – ಎಂದು ಕಣ್ಣುಬಿಸಿ ದಿಟ್ಟಿಸಿದ ! ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವ ಐಟಿ ಉದ್ಯೋಗಿ ! ಐಟಿ ಕನ್ನಡಿಗರ ವ್ಯಥೆ

ಇವರು ಕರಡಿ ಕದ್ದು ತರುತ್ತಿದ್ದರೆಂದೋ, ಅವುಗಳನ್ನು ಮನರಂಜನೆ ನೋವಿನಿಂದ ಕೂಡಿತ್ತೊ ಅಥವಾ ಕರಡಿಗೆ ಬಿಡುಗಡೆಯು ಬೇಕಿತ್ತೋ….
ಆ ಕೆಲಸವನ್ನೂ ಬಿಟ್ಟು ಬೀದಿಗೆ ಬಿದ್ದ ಜನರಿಗೆ ನಿಜವಾಗಲು ಬರಿಗೈಯಲ್ಲಿ ಬಿಕ್ಷೆ ನೀಡುವರೇ.. ಅಥವಾ ಮೈ ಬಾಗಿಸಿ ದಣಿದು ದುಡಿದರೂ ಆ ಕಾಡು-ಮೇಡಿನ ಸೋಜಿಗದ ಜೀವನ ಈ ಪಟ್ಟಣದಲ್ಲಿ ಕಟ್ಟಿಕೊಳ್ಳಲು ಸಾದ್ಯವೇ…!?

ಪ್ರಾಣಿ ಹಾನಿ ಪಾಪ ಕೃತ್ಯ ಅವುಗಳ ಸಂತತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಆದರೆ ಕೆಲವು ವಿಷಯದ ಚರ್ಚೆ ಅಗತ್ಯ …
1. ಸದಾ ಗೋವಿನಂದಿಗೆ ಸಮಯ ಕಳೆಯುವ ಗೋ ಪಾಲಕ..
2. ಕುರಿ ಕಾಯುವ ಕುರಿಗಾಹಿ..
3. ಕೋಲೆಬಸವ ನಡೆಸುವ ಮಂದಿ
4. ಕೋತಿಯೊಂದಿಗೆ ದೋಂಬರಾಟ ನಡೆಸುವ ಜನ

ಕೇವಲ ಹಣಕ್ಕಾಗಿ ಮಾತ್ರವಲ್ಲದೆ ಮನಸ್ಸಿನ ನೆಮ್ಮದಿಗಾಗಿ ಪರಂಪರಿಕವನ್ನು ಮುನ್ನಡಿಸುತ್ತಾರೆ.

ಅವರನ್ನು ಉಳಿಸುವವರು ಯಾರು ?

ಜನಪದ ಕಂಡ ಪಂಗಡಗಳು – ದೊಡ್ಡಾಟ – ಯಕ್ಷಗಾನ – ಬಯಲಾಟ / ಮರೆಯಾಗುತ್ತಿರುವ ಕಲೆಗಳು – 1

ಕನ್ನಡ ಜಾನಪದ

One Reply to “ಕರಡಿ ಕುಣಿತ – ಕೊರುಗುವ ಮನುಜನ ಮನೆ ಕಾಯುತ ಮಲುಗುವ ಜಾಂಬುವಂತ/ ಕಥೆ ಅರ್ಧಕ್ಕೆ ನಿಂತ ವ್ಯಥೆ !

Leave a Reply

Your email address will not be published. Required fields are marked *