ಆಟ - ಪಾಠ ಕನ್ನಡ ಫೊಕ್ಸ್

ಆಟ – ಹುಡುಗಾಟವಲ್ಲ / ಇಂದು ಬೆಂಗಳೂರು- ಹೈದ್ರಾಬಾದ್ ಐ. ಪಿ .ಎಲ್ ಪಂದ್ಯ / “ಕಪ್” ದೂರವಾಗುವುದ ಬೆಂಗಳೂರಿಗೆ !?

ಸತತ ಸೋಲಿನ ನಡುವೆಯೂ ನಾಕಂಕಿ ಪ್ರವೇಶಿಸಿದ ಆರ್ ಸಿಬಿ ತಂಡ ಈ ಪಂದ್ಯದಲ್ಲಾದರೂ ಸಿಡಿದೇಳುವುದೊ !?

ಹೌದು ಸರಾಸರಿಯ ಉಪಯೋಗದಿಂದ ತಂಡ ಮುನ್ನಡಿಯುವುದು ಇನ್ನು ಸಾದ್ಯವಿಲ್ಲ. ಏಕೆಂದರೆ ಇದು ಮಾಡು ಇಲ್ಲವೆ ಮಡಿ ಪಂದ್ಯ ಇಲ್ಲಿ ಗೆದ್ದರೆ ಮುಂದೆ ದೆಲ್ಲಿಯಮೇಲೆ ಸೆಮೀ ಫೈನಲ್ ಆಡಬೇಕಾಗುತ್ತದೆ. ಸೋತರೆ ಮನೆಯಕಡೆ ಮುಖಮಾಡಬೇಕಾಗುತ್ತದೆ.

ಇನ್ನು ಹೈದ್ರಾಬಾದ್ ವಿಷಯಕ್ಕೆ ಬಂದರೆ ಪ್ಲೇ ಆಫ್ ಗೂ ಬಾರದು ಎಂಬಂತಿದ್ದ ತಂಡ ಸತತ ಗೆಲುವಿನಿಂದ ಮುನ್ನಡೆ ಸಾದಿಸುತ್ತಾ ಬಂದಿದೆ ಅದರಲ್ಲೂ ಮುಂಬಯಿ ವಿರುದ್ದದ ಜಯ ಮತ್ತಷ್ಟು ಪುಷ್ಟಿ ನೀಡಿದೆ.

ವಾರ್ನರ್ ಮತ್ತು ಸಹಾ ಬ್ಯಾಟಿಂಗ್ ಬಲ ಎಂದರೆ ಸಂದೀಪ್ , ರಶೀಧ್ ಬೌಲಿಂಗ್ ಫಾರ್ಮ್ ಕಾಯ್ದುಕೊಂಡಿದ್ದಾರೆ.

ಬೆಂಗಳೂರು ತಂಡ ಕೂಡ ಬಲಿಷ್ಟವಾಗಿದ್ದು ಎರೆಡೂ ಕಡೆ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಆದರೆ ಈ ಪಂದ್ಯ ಅತೀ ರೋಚಕವಾಗಿದ್ದು ಯಾರು ಯಾವ ಚಮತ್ಕಾರ ಮಾಡುತ್ತಾರೆ ಕಾದು ನೋಡಬೇಕಿದೆ !

Leave a Reply

Your email address will not be published. Required fields are marked *